ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ನೀಗಿಸಲು ಮೊಟ್ಟೆ ವಿತರಣೆ: ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork | Published : Oct 2, 2024 1:01 AM

ಸಾರಾಂಶ

ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ನೀಗಿಸಲು ಬಿಸಿಯೂಟ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣು ಹಾಗೂ ಸೇಂಗಾ ಚಕ್ಕಿಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೊಡಿ

ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ನೀಗಿಸಲು ಬಿಸಿಯೂಟ ಯೋಜನೆಯಡಿ ಮೊಟ್ಟೆ, ಬಾಳೆಹಣ್ಣು ಹಾಗೂ ಸೇಂಗಾ ಚಕ್ಕಿಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ತಾಲೂಕಿನ ನನದಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಾರದಲ್ಲಿ 2 ದಿನ ವಿತರಿಸುವ ಮೊಟ್ಟೆಗಳನ್ನು 6 ದಿನಗಳಿಗೆ ವಿಸ್ತರಿಸಿ ಮಾತನಾಡಿ, ನೀಡಿರುವ ಆಹಾರವನ್ನು ಸಮರ್ಪಕವಾಗಿ ವಿತರಣೆ ಮಾಡಿ ಯೋಜನೆ ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು.

ಸಚಿವರು ನಲಿಕಲಿ ತರಗತಿ ವೀಕ್ಷಿಸಿ ಶಾಲೆಯ ಬಾಹ್ಯ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳೊಂದಿಗೆ ಸಂದರ್ಶಿಸಿ ಯೋಜನೆ ಬಗ್ಗೆ ಮಾಹಿತಿ ಪಡೆದರು. ಈ ಬಾರಿ ರಾಜ್ಯಪ್ರಶಸ್ತಿಗೆ ನನದಿ ಶಾಲೆಯ 7 ವಿದ್ಯಾರ್ಥಿಗಳು ಆಯ್ಕೆ ಆಗಿದ್ದು, ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಗಣೇಶ ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಬುಡಾ ಅಧ್ಯಕ್ಷ ಹಾಗೂ ಚಿಕ್ಕೋಡಿ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಗ್ರಾಪಂ ಅಧ್ಯಕ್ಷೆ ಮಂಗಲ ಹವಾಲ್ದಾರ, ಉಪಾಧ್ಯಕ್ಷ ಮತ್ತು ಎಸ್‌ಡಿಎಂಸಿ ಸದಸ್ಯರು

, ಶಿಕ್ಷಕರ ಸಂಘದ ಚಿಕ್ಕೋಡಿ ತಾಲುಕು ಘಟಕದ ಅಧ್ಯಕ್ಷ ಎನ್.ಜಿ. ಪಾಟೀಲ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂಬಳೆ, ಮಲ್ಲು ಹವಾಲ್ದಾರ ,ಈಶ್ವರ ರವಳುಕೇದಾ,. ರಾಮಚಂದ್ರ ಮಡಿವಾಳೆ, ಪ್ರಕಾಶ ಬಡಕೆ, ಅಣ್ಣಪ್ಪ ರವಳುಕೇದಾರಿ, ವಿಶ್ರಾಂತ ಮುಖ್ಯಶಿಕ್ಷಕ ಪ್ರಕಾಶ ಪಾಯನ್ನವರ, ರಾಜೇಂದ್ರ ತೆರದಾಳ, ಶಿಕ್ಷಣಾಧಿಕಾರಿ ಎಸ್.ಎಸ್. ಹಿರೇಮಠ ಉಪಸ್ಥಿತರಿದ್ದರು. ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎಂ.ಟಿ. ಜನಗೌಡ ಸ್ವಾಗತಿಸಿದರು. ಪ್ರಭಾರಿ ಉಪನಿರ್ದೇಶ ಹಾಗೂ ಚಿಕ್ಕೋಡಿ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎ. ಮೇಕನಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಧುಪದಾಳ ನಿರೂಪಿಸಿದರು.

Share this article