ರೈತರಿಗೆ ಪಂಪು ಮೋಟಾರ್ ವಿತರಣೆ

KannadaprabhaNewsNetwork |  
Published : Jan 12, 2025, 01:15 AM IST
11ಕೆಬಿಪಿಟಿ.2.ಬಂಗಾರಪೇಟೆ ಪಟ್ಟಣದಲ್ಲಿ 30ಂದಿ ರೈತರಿಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಪಂಪು ಮೋಟಾರ್‌ಗಳನ್ನು ವಿತರಿಸಿ ಶಾಸಕ ನಾರಾಯಣಸ್ವಾಮಿ. | Kannada Prabha

ಸಾರಾಂಶ

ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಬಡ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉಚಿತವಾಗಿ ಕೊಳವೆ ಬಾವಿಗಳ್ನು ಕೊರೆಸಲಾಗಿದೆ, ಈಗ ಅದಕ್ಕೆ ಪಂಪು ಮೋಟಾರ್‌ಗಳನ್ನು ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಕಳೆದ ೧೨ ವರ್ಷಗಳಲ್ಲಿ ಇದುವರೆಗೂ ಒಂದು ಸಾವಿರ ರೈತರಿಗೆ ಕೊಳವೆ ಬಾವಿಗಳನ್ನು ಉಚಿತವಾಗಿ ಕೊರೆಸಿಕೊಡಲಾಗಿದೆ

30 ಮಂದಿ ಫಲಾನುಭವಿಗಳಿಗೆ ವಿತರಣೆ

ಅಂಬೇಡ್ಕರ್‌ ನಿಗಮದ ಕೊಡುಗೆ, ಉಚಿತ ಕೊಳವೆಬಾವಿ, ಬಡ ರೈತರಿಗೆ ನೆರವು, ರೈತರಿಗೆ ಸ್ವಾಲಂಬಿ ಬದುಕು, ಶಾಸಕ ನಾರಾಯಣಸ್ವಾಮಿ, ಕೋಲಾರ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಬಡ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉಚಿತವಾಗಿ ಕೊಳವೆ ಬಾವಿಗಳ್ನು ಕೊರೆಸಲಾಗಿದೆ, ಈಗ ಅದಕ್ಕೆ ಪಂಪು ಮೋಟಾರ್‌ಗಳನ್ನು ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಕಳೆದ ೧೨ ವರ್ಷಗಳಲ್ಲಿ ಇದುವರೆಗೂ ಒಂದು ಸಾವಿರ ರೈತರಿಗೆ ಕೊಳವೆ ಬಾವಿಗಳನ್ನು ಉಚಿತವಾಗಿ ಕೊರೆಸಿಕೊಡಲಾಗಿದೆ

.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಬಡ ರೈತರ ನೆಮ್ಮದಿ ಹಾಗೂ ಸ್ವಾವಲಂಭಿ ಬದುಕಿಗಾಗಿ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಕೊಳವೆ ಭಾವಿ ಕೊರೆಸಿ ಅದಕ್ಕೆ ಪಂಪು ಮೋಟಾರ್‌ಗಳನ್ನು ವಿತರಿಸಲಾಗುತ್ತಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಎಸ್‌ಎನ್.ರೆಸಾರ್ಟ್‌ನಲ್ಲಿ ೩೦ಮಂದಿ ಫಲಾನುಭವಿಗಳಿಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಮಂಜೂರಾಗಿದ್ದ ಕೊಳವೆ ಬಾವಿ ಕೊರೆಸುವ ಯೋಜನೆಯ ಫಲಾನುಭವಿಗಳಿಗೆ ಪಂಪು ಮೋಟಾರ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರ ಬಡ ರೈತರಿಗೆ ಸ್ವಾವಲಂಭಿ ಜೀವನ ನಡೆಸಲು ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.

ಕೃಷಿ ಕಾರ್ಯಕ್ಕೆ ಸಹಾಯ

ಅದರಲ್ಲಿ ಬಡ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉಚಿತವಾಗಿ ಕೊಳವೆ ಬಾವಿಗಳ್ನು ಕೊರೆಸಲಾಗಿದೆ, ಈಗ ಅದಕ್ಕೆ ಪಂಪು ಮೋಟಾರ್‌ಗಳನ್ನು ವಿತರಿಸಲಾಗುತ್ತಿದೆ. ನಾನು ಶಾಸಕನಾಗಿ ೧೨ ವರ್ಷಗಳಲ್ಲಿ ಇದುವರೆಗೂ ಒಂದು ಸಾವಿರ ರೈತರಿಗೆ ಕೊಳವೆ ಬಾವಿಗಳನ್ನು ಉಚಿತವಾಗಿ ಕೊರೆಸಿಕೊಡಲಾಗಿದೆ ಎಂದರು.ಇದಲ್ಲದೆ ಪ್ರತಿ ವರ್ಷ ೬ಮಂದಿಗೆ ಸಾರಥಿ ಯೋಜನೆಯಲ್ಲಿ ವಾಹನಗಳ್ನೂ ಕೊಡಿಸಿಕೊಡಲಾಗಿದೆ, ಇದರಿಂದ ಉದ್ಯೋಗವಿಲ್ಲದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ನೀಡಿದಂತಾಗಿದೆ. ಸರ್ಕಾರದಿಂದ ಉಚಿತವಾಗಿ ಕೊಳೆವೆ ಬಾವಿಗಳನ್ನು ಕೊರೆಸಿಕೊಂಡಿರುವ ರೈತರು ಕೃಷಿಯಲ್ಲಿ ತೊಡಗಿ ಸ್ವಾವಲಂಭಿಗಳಾಗಬೇಕು ಎಂದರು.

ಸರ್ಕಾರದಿಂದ ಉತ್ತಮ ಕಾರ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಪಕ್ಷಗಳ ಟೀಕೆಗಳ ನಡುವೆಯೂ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಅವರ ಬಾಯಿಗೆ ಬೀಗ ಹಾಕುತ್ತಿದೆ. ಕ್ಷೇತ್ರದಲ್ಲಿಯೂ ಸಹ ಹಿಂದೆ ಎಂದೂ ಕಾಣದಷ್ಟು ಅಭಿವೃದ್ದಿ ಪರ್ವ ಆರಂಭವಾಗಿದೆ,ಮುಂದಿನ ಮೂರು ವರ್ಷಗಳಲ್ಲಿ ಕ್ಷೇತ್ರದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ ಎಂದರು.ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ,ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ,ಭೂ ಬ್ಯಾಂಕಿನ ನಿರ್ದೇಶಕ ಚಂಗಾರೆಡಿ, ವೆಂಕಟೇಶಪ್ಪ, ಶ್ರೀನಿವಾಸ್,ಚಲಪತಿ, ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಚನ್ನಬಸಪ್ಪ, ತಾಲೂಕು ವ್ಯವಸ್ಥಾಪಕರಾದ ರಾಜಶೇಖರ್ ಮತ್ತಿತರರು ಇದ್ದರು.

11ಕೆಬಿಪಿಟಿ.2............ಬಂಗಾರಪೇಟೆ ಪಟ್ಟಣದಲ್ಲಿ 30 ರೈತರಿಗೆ ಪಂಪು ಮೋಟಾರ್‌ಗಳನ್ನು ಶಾಸಕ ನಾರಾಯಣಸ್ವಾಮಿ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌