ಇಂದಿನಿಂದ ಜಗಳೂರು ತಾಲೂಕಿನ ವಿವಿಧೆಡೆ ಬಿತ್ತನೆಬೀಜ ವಿತರಣೆ

KannadaprabhaNewsNetwork |  
Published : May 25, 2025, 11:52 PM IST
೨5ಜೆಎಲ್ಆರ್ಚಿತ್ರ೧ಎ: ಶ್ವೇತಾ ಎಚ್.ಎಡಿಎ ಜಗಳೂರು | Kannada Prabha

ಸಾರಾಂಶ

ತಾಲೂಕಿನ ಕೃಷಿ ಇಲಾಖೆಯಿಂದ ೨೦೨೫-೨೬ನೇ ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಸರ್ಕಾರದ ಸಹಾಯಧನದಡಿ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ ೨೬ರ ಸೋಮವಾರದಿಂದ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಶ್ವೇತಾ ತಿಳಿಸಿದ್ದಾರೆ.

- ಸೌಲಭ್ಯ ಪಡೆಯಲು ದಾಖಲೆಗಳು ಕಡ್ಡಾಯ: ಶ್ವೇತಾ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಕೃಷಿ ಇಲಾಖೆಯಿಂದ ೨೦೨೫-೨೬ನೇ ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಸರ್ಕಾರದ ಸಹಾಯಧನದಡಿ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ ೨೬ರ ಸೋಮವಾರದಿಂದ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಶ್ವೇತಾ ತಿಳಿಸಿದ್ದಾರೆ.

ಕಸಬ ಹೋಳಿಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಎಪಿಎಂಸಿ ಆವರಣದಲ್ಲಿ, ಹೊಸಕೆರೆಯ ರೈತ ಸಂಪರ್ಕ ಕೇಂದ್ರದಲ್ಲಿ, ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಅಣಬೂರು ಎಫ್ಪಿಒ, ಸೊಕ್ಕೆ ಗ್ರಾಮದ ಪಿಎಸಿಸಿಎಸ್, ಬಸವನಕೋಟೆಯ ಪಿಎಸಿಸಿಎಸ್, ಕೆಚ್ಚೇನಹಳ್ಳಿ ಪಿಎಸಿಸಿಎಸ್ ಮತ್ತು ಬಿಳಿಚೋಡು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜಗಳು ಲಭ್ಯವಾಗಲಿವೆ ಎಂದಿದ್ದಾರೆ.

ಬಿತ್ತನೆಬೀಜ ಪಡೆಯಲು ಸಾಮಾನ್ಯ ವರ್ಗದ ರೈತರು ಆಧಾರ್ ಕಾರ್ಡ್, ಪಹಣಿ ತರಬೇಕು. ಎಸ್ಸಿ- ಎಸ್ಟಿ ರೈತರು ಖುದ್ದಾಗಿ ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣ ಪತ್ರದೊಂದಿಗೆ ಬರಬೇಕು. ಇಲಾಖೆ ಮಾರ್ಗಸೂಚಿ ಅನ್ವಯ ಒಬ್ಬ ರೈತರಿಗೆ ಗರಿಷ್ಠ ೫ ಎಕರೆವರೆಗೆ ಕೊಳ್ಳಲು ಅವಕಾಶವಿದೆ. ಪ್ಯಾಕೇಟ್ ಮೇಲೆ ಇರುವ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಕಿಸಾನ್ ತಂತ್ರಾಶದಲ್ಲಿ ಸೀಡ್ ಎಂಐಎಸ್‌ನಲ್ಲಿ ದಾಖಲಿಸಿದ ನಂತರ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

- - -

(ಬಾಕ್ಸ್) * ಯಾವ ಬೀಜಗಳಿಗೆ ಎಷ್ಟು ಸಬ್ಸಿಡಿ (ಕೆಜಿಗೆ)

ಬೆಳೆಸಾಮಾನ್ಯ ವರ್ಗಎಸ್ಸಿ-ಎಸ್ಟಿ ಮೆಕ್ಕೆಜೋಳ₹೨೦₹೩೦

ಜೋಳ₹೩೦₹೪೦

ಸೂರ್ಯಕಾಂತಿ₹೮೦₹೧೨೦

ರಾಗಿ₹೧೮₹೨೭

ತೊಗರಿ₹೨೫₹೩೭.೫

ನೆಲಗಡಲೆ₹೧೪₹೨೧

- - -

-೨5ಜೆಎಲ್ಆರ್ಚಿತ್ರ೧ಎ: ಶ್ವೇತಾ ಎಚ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ