ಕನ್ನಡಪ್ರಭ ವಾರ್ತೆ ಸಕಲೇಶಪುರ
ಮೇ ಎರಡನೇ ವಾರದಲ್ಲಿ ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ತಾಲೂಕಿನಲ್ಲೂ ಅಲ್ಪ ಪ್ರಮಾಣದ ಮಳೆ ಆರಂಭವಾಗಿದ್ದು, ಎರಡು ದಿನ ಮಾತ್ರ ಮಳೆ ಮುಂದುವರಿಯಲಿದೆ, ನಂತರ ಬಿಡುವು ನೀಡಲಿದೆ ಎನ್ನಲಾಗುತಿತ್ತು. ಆದರೆ, ಕಳೆದ ಎರಡು ದಿನಗಳಿಂದ ಅರಬ್ಬೀ ಸಮುದ್ರದ ವಾಯುಭಾರ ಕುಸಿತದ ಪರಿಣಾಮ ತಾಲೂಕಿನಲ್ಲಿ ವ್ಯಾಪಕ ಗಾಳಿ ಮಳೆಯಾಗುತ್ತಿದ್ದು, ಅತಿಯಾದ ಥಂಡಿ ವಾತವಾರಣ ಆಷಾಢ ನೆನಪಿಸುತ್ತಿದೆ.
ಸಿದ್ಧತೆಗೆ ಪೆಟ್ಟು:ತಾಲೂಕಿನಲ್ಲಿ ಮುಂಗಾರು ಮಳೆ ಮುನ್ನ ಮಲೆನಾಡಿಗರು ಸಾಕಷ್ಟು ಸಿದ್ಧತೆಮಾಡಿಕೊಳ್ಳಬೇಕಿದೆ. ಸಾಮಾನ್ಯವಾಗಿ ಜೂನ್ ಎರಡನೇ ವಾರದ ನಂತರ ಮುಂಗಾರು ಚುರುಕು ಪಡೆಯುವುದು ವಾಡಿಕೆ. ಆದರೆ, ಈ ಬಾರಿ ಆರಂಭದಿಂದಲೂ ಉತ್ತಮ ಮಳೆಯಾಗುತ್ತಿದ್ದು ಅನಿರೀಕ್ಷಿತವಾಗಿ ಆರಂಭವಾದ ವಾಯುಭಾರ ಕುಸಿತ ಮಳೆಗಾಲದ ನೆನಪು ಸೃಷ್ಟಿಸಿದೆ. ಇದರೊಂದಿಗೆ ಮೇ ೨೮ರಿಂದ ಮುಂಗಾರು ಆರಂಭಗೊಳ್ಳಲಿದೆ ಎಂಬ ಹವಾಮಾನ ಇಲಾಖೆಯ ವರದಿ ಮಲೆನಾಡಿಗರ ಜಂಗಾಬಲವನ್ನೆ ಉಡುಗಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಕಾಫಿ, ಭತ್ತದ ಗದ್ದೆಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುವುದು, ಸೌದೆ ಸಂಗ್ರಹದಂತಹ ಹಲವು ಕೆಲಸಗಳನ್ನು ಮಲೆನಾಡಿಗರು ಚಾಚುತಪ್ಪದೆ ಮಾಡಬೇಕಿದೆ. ಆದರೆ, ಮುಂಗಾರು ಆರಂಭಕ್ಕೂ ಸಮಯವಿದೆ ಎಂದು ನಂಬಿದ್ದ ಜನರು ಈ ಎಲ್ಲ ಕೆಲಸಗಳನ್ನು ಬಾಕಿ ಇಟ್ಟಿದ್ದರು. ಆದರೆ, ಅವಧಿಗೂ ಮುನ್ನ ಮುಂಗಾರು ಆರಂಭವಾಗಿರುವುದು ಈ ಯಾವುದೇ ಕೆಲಸ ಮುಗಿಸಲು ಅವಕಾಶವನ್ನೇ ನೀಡುತ್ತಿಲ್ಲ. ಸದ್ಯ ಗಾಳಿಮಳೆಯಿಂದಾಗಿ ಕಾಫಿತೋಟಗಳ ಕೆಲಸಗಳಿಗೆ ರಜೆ ನೀಡಲಾಗಿದ್ದರೆ, ಅಭಿವೃದ್ಧಿ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ. ಹಲವೆಡೆ ಅವಾಂತರ: