''ಪದವಿ''ಯೊಂದಿಗೆ ತರಬೇತಿ ಭತ್ಯೆಯೂ ಸಿಗುತ್ತೇ!

KannadaprabhaNewsNetwork |  
Published : May 25, 2025, 11:51 PM IST
ತರಬೇತಿ ಭತ್ಯೆಯೂ ಸಿಗುತ್ತೇ | Kannada Prabha

ಸಾರಾಂಶ

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿದರೆ 'ಪದವಿ'ಯೊಂದಿಗೆ ತರಬೇತಿ ಭತ್ಯೆಯೂ ಸಿಗಲಿದ್ದು ಆಸಕ್ತಿ ಇರುವ ವಿದ್ಯಾರ್ಥಿಗಳು ಪ್ರಯತ್ನಿಸಲು ಅವಕಾಶವಿದೆ!.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿದರೆ ''''''''ಪದವಿ''''''''ಯೊಂದಿಗೆ ತರಬೇತಿ ಭತ್ಯೆಯೂ ಸಿಗಲಿದ್ದು ಆಸಕ್ತಿ ಇರುವ ವಿದ್ಯಾರ್ಥಿಗಳು ಪ್ರಯತ್ನಿಸಲು ಅವಕಾಶವಿದೆ!.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಇ-ಕಾಮರ್ಸ್‌ ಆಪರೇಷನ್ಸ್‌ ಕೋರ್ಸ್‌ ೨೦೨೪-೨೫ ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವಾಗಿದ್ದು, ಈ ಕೋರ್ಸ್‌ನಲ್ಲಿ ಬಿ.ಕಾಂ, ಬಿಎಸ್ಸಿ ಓದಲು ಅವಕಾಶವಿದೆ, ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇ-ಕಾಮರ್ಸ್ ಆಪರೇಷನ್ಸ್ ಕೋರ್ಸ್ ಇಲ್ಲ. ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಥ ಅವಕಾಶವಿದೆ.

ಮೂರು ವರ್ಷದ ಕೋರ್ಸ್‌ ಇದ್ದಾಗಿದ್ದು, ಎರಡು ವರ್ಷ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರೆ ಅಂತಿಮ ವರ್ಷದಲ್ಲಿ ಸರ್ಕಾರ ನಿಗದಿ ಪಡಿಸಿರುವ ಖಾಸಗಿ ಕಂಪನಿಗಳಲ್ಲಿ ತರಬೇತಿ ಪಡೆದುಕೊಂಡರೆ‌ ಸಾಕು ಒಂದು ವರ್ಷ ಕಂಪನಿಯಲ್ಲಿ ತರಬೇತಿ ಜೊತೆಗೆ ಭತ್ಯೆ ಸಿಗಲಿದೆ. ವಾಣಿಜ್ಯ ಶಾಸ್ತ್ರ, ಕಲೆ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೂಡ ಈ ಕೋರ್ಸಿಗೆ ಪ್ರವೇಶಾತಿ ಪಡೆಯಬಹುದಾಗಿದ್ದು ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಇ-ಕಾಮರ್ಸ್‌ ಆಪರೇಷನ್ಸ್‌ ಕೋರ್ಸಿಗೆ ಪ್ರವೇಶಾತಿ ಪಡೆಯಲು ಮುಂದೆ ಬರುತ್ತಿದ್ದಾರೆ. ಈ ಕೋರ್ಸ್‌ ವಿದ್ಯಾರ್ಥಿಗಳ ಉದ್ಯೋಗ ಮತ್ತು ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ.

ಶಿಕ್ಷಣದ ಜೊತೆಗೆ ತರಬೇತಿ:

ಬಿ.ಕಾಂ ಇ-ಕಾಮರ್ಸ್‌ ಆಪರೇಷನ್ಸ್‌ ಶಿಕ್ಷಣದ ಜೊತೆಗೆ ತರಬೇತಿ, ಹಣಗಳಿಕೆ ಹಾಗೂ ಉದ್ಯೋಗದ ಭರವಸೆಯಾಗಿದೆ. ೨೦೨೪-೨೫ ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವಾದ ಬಿ.ಕಾಂ ಕಾಮರ್ಸ್‌ ಆಪರೇಷನ್ಸ್‌ ಕೋರ್ಸಿಗೆ ಸೇರಲು ಸಾಕಷ್ಟು ವಿದ್ಯಾರ್ಥಿಗಳು ಆಸಕ್ತಿ ಹೊಂದಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದ ಮಕ್ಕಳು ದೂರದ ಮೈಸೂರಿಗೆ ಹೋಗುವುದನ್ನು ಮನಗಂಡು ಅಂದಿನ ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್ ಕಾಲದಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೀಗ ಮಹದೇವಪ್ರಸಾದ್ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ಶಾಸಕರಾದ ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನಲ್ಲಿ ಬಿ.ಕಾಂ ಇ-ಕಾಮರ್ಸ್ ಆಪರೇಷನ್ಸ್ ಕೋರ್ಸ್ ಆರಂಭವಾಗಿದೆ.

ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ:

ಪದವಿ ಓದುವ ವಿದ್ಯಾರ್ಥಿಗಳಿಗೆ ಇದೊಂದು ಅಪೂರ್ವ ಅವಕಾಶ. ಶಿಕ್ಷಣದ ಜೊತೆಗೆ ಉದ್ಯೋಗ್ಯಕ್ಕೂ ಅವಕಾಶ ಮಾಡಿಕೊಡುತ್ತದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ ಕಾಲೇಜಿನಲ್ಲಿ ಮಾತ್ರ ಈ ವಿಶಿಷ್ಟ ಪದವಿಗೆ ಅವಕಾಶ ಸಿಕ್ಕಿದೆ. ಉದ್ಯೋಗ ತರಬೇತಿ ಜೊತೆಗೆ ಸ್ಟ್ರೈಫಂಡ್‌ ಕೂಡ ಪಡೆಯುವುದರಿಂದ ಓದುವ ಸಮಯದಲ್ಲಿ ಆದಾಯ ಗಳಿಸಲು ಒಳ್ಳೆಯ ಅವಕಾಶ ಕಲ್ಪಿಸಿ ಕೊಟ್ಟಿದೆ. ವಿದ್ಯಾರ್ಥಿಗಳು ಈ ಸದಾವಕಾಶ ಬಳಸಿಕೊಳ್ಳಬೇಕು.

-ಡಾ.ಶಾಲಿನಿ ಎ, ಮುಖ್ಯಸ್ಥರು ಬಿ.ಕಾಂ ಇ-ಕಾಮರ್ಸ್‌ ಆಪರೇಷನ್ಸ್

ಅತ್ಯುತ್ತಮ ಸೌಲಭ್ಯ ಇರುವ ಕಾಲೇಜು

ಐಸಿಟಿ ತರಗತಿಗಳು, ಉತ್ತಮ ಕ್ರೀಡಾ ವಿಭಾಗ, ಅಂತರ ಕಾಲೇಜು ಸ್ಪರ್ಧೆಗಳು, ಕಾಮರ್ಸ್‌ ಫೇಟ್‌, ಸಕ್ರೀಯ ಕಲಿಕೆ, ಕೈಗಾರಿಕಾ ಭೇಟಿ, ಉದ್ಯೋಗ ನಿಯೋಜನೆ, 3೬೦ ಡಿಗ್ರಿ ಎಕ್ಸ್‌ಪೋಸ್‌ಗೆ ಅನೇಕ ಸೌಲಭ್ಯಗಳಿವೆ. ಜೀವನವನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಕಲಿಸುತ್ತೇವೆ, ಇಂದಿನ ಕಾಂಪಿಟೇಶನ್‌ ಪ್ರಪಂಚದಲ್ಲಿ ಇ-ಕಾಮರ್ಸ್‌ ಕೋರ್ಸ್‌ ಮುನ್ನುಗ್ಗಲು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಗುತ್ತದೆ.

-ದಿವ್ಯ ಭಾರತಿ ಜೆ, ಮುಖ್ಯಸ್ಥರು, ವಾಣಿಜ್ಯಶಾಸ್ತ್ರ ವಿಭಾಗಉದ್ಯೋಗಕ್ಕೆ ಅನುಕೂಲ

೨೦೨೪-೨೫ ನೇ ಸಾಲಿನಲ್ಲಿ ಪ್ರಪ್ರಥಮವಾಗಿ ಆರಂಭವಾದ ಬಿ.ಕಾಂ ಇ-ಕಾಮರ್ಸ್‌ ಆಪರೇಷನ್ಸ್‌ ಕೋರ್ಸಿಗೆ ನಾನು ಸೇರಿದ್ದೇನೆ. ಈ ಒಂದು ವರ್ಷದಲ್ಲಿ ಕಂಪನಿಯ ಕಾರ್ಯ ಹಾಗೂ ನಿರ್ವಹಣೆ ಬಗ್ಗೆ ಅರಿತುಕೊಂಡಿದ್ದೇನೆ. ಈ ಕೋರ್ಸ್‌ನಿಂದ ಕೌಶಲ್ಯ ಹೆಚ್ಚಾಗಲಿದೆ. ಪ್ಲೇಸ್ಮೆಂಟ್‌ ವೇಳೆ ಈ ಕೋರ್ಸ್‌ ಮಾಡಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಇದೆ ಎಂದು ಹೇಳಬಹುದು. ಈ ಕೋರ್ಸ್‌ ರಾಜ್ಯದ ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಇದೆ ಅದರಲ್ಲೂ ಗುಂಡ್ಲುಪೇಟೆಯಲ್ಲಿ ಇರುವುದು ಖುಷಿ ವಿಚಾರ.

-ಸ್ವಾಮಿ ಎಸ್, ಬಿ.ಕಾಂ ಇ-ಕಾಮರ್ಸ್‌ ಆಪರೇಷನ್‌ ವಿದ್ಯಾರ್ಥಿ

ಗುಣ ಮಟ್ಟ ಆಧಾರಿತ ಶಿಕ್ಷಣ

ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ವಿದ್ಯಾರ್ಥಿಗಳು ಗುಣ ಮಟ್ಟ ಆಧಾರಿತ ಶಿಕ್ಷಣ ಪಡೆಯುತ್ತಿಲ್ಲ. ವಿದ್ಯಾರ್ಥಿಗಳು ಓದುವದರ ಜೊತೆಗೆ ಕಂಪ್ಯೂಟರ್‌ ಶಿಕ್ಷಣ, ಕಮ್ಯೂನಿಕೇಷನ್‌ ಸ್ಕಿಲ್, ಶಿಸ್ತು, ಸಮಯ ಪಾಲನೆ, ಡ್ರೆಸ್ ಕೋಡ್‌ ಇನ್ನಿತರ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಬಿಕಾಂ ಇ-ಕೋರ್ಸ್‌ನ್ನು ಮಾಡುವುದರಿಂದ ವಿದ್ಯಾರ್ಥಿಗಳು ಪದವಿ ಮುಗಿಯುವುದರೊಳಗೆ ಈ ಎಲ್ಲ ವಿಷಯಗಳಲ್ಲೂ ತರಬೇತಿ ಹೊಂದಿರುತ್ತಾರೆ.

ಚಿನ್ನು.ಟಿ., ಬಿ.ಕಾಂ ಇ-ಕಾಮರ್ಸ್‌ ಆಪರೇಷನ್‌ ವಿದ್ಯಾರ್ಥಿ

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ