ತಾಳಿಕೋಟೆಯಲ್ಲಿ ಶ್ರೀರಾಮ ಮಂತ್ರಾಕ್ಷತೆ ವಿತರಣೆಗೆ ಚಾಲನೆ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ತಾಳಿಕೋಟೆ: ಜ.22ರಂದು ಅಯೋಧ್ಯಾ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯಾದಿಂದ ಆಗಮಿಸಿದ ಶ್ರೀರಾಮನ ಮಂತ್ರಾಕ್ಷತೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಚಿದಂಬರ ಕರಮರಕರ(ಭಕ್ಷಿ) ವಿತರಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದುಗಳ ಆರಾಧ್ಯ ದೈವ ಶ್ರೀರಾಮ ಚಂದ್ರನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಕ್ತಿಯ ಪರಾಕಾಷ್ಠೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲಡೆ ಮೊಳಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಚಿದಂಬರ ಕರಮರಕರ(ಭಕ್ಷಿ) ಹೇಳಿದರು.

ಜ.22ರಂದು ಅಯೋಧ್ಯಾ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯಾದಿಂದ ಆಗಮಿಸಿದ ಶ್ರೀರಾಮನ ಮಂತ್ರಾಕ್ಷತೆಯನ್ನು ವಿತರಿಸಿ ಮಾತನಾಡಿದ ಅವರು, ಶ್ರೀರಾಮ ಜನಿಸಿದ ಅಯೋಧ್ಯಾ ನಗರದಲ್ಲಿ ಶ್ರೀರಾಮ ಮೂರ್ತಿ ದೇವಸ್ಥಾನ ನಿರ್ಮಾಣದ ಶತಕಗಳ ಹಿಂದುಗಳ ಕನಸು ನನಸಾಗತೊಡಗಿದೆ. ಈ ಸಂಭ್ರಮ ಭಕ್ತಿ ದೇಶಾದ್ಯಂತ ಮೋಳಗುತ್ತಿದ್ದು, ಎಲ್ಲ ಹಿಂದು ಸಮಾಜ ಬಂಧುಗಳು ತಮ್ಮ ಬಡಾವಣೆಗಳಲ್ಲಿರುವ ದೇವಸ್ಥಾನಗಳ ಆವರಣ ಸ್ವಚ್ಛಗೊಳಿಸುವುದರೊಂದಿಗೆ ಜ.14ರಿಂದ ಭಜನೆ, ಪೂಜೆಗಳನ್ನು ಏರ್ಪಡಿಸಬೇಕು. ಜ.22ರಂದು ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ದಿನ ದೇವಸ್ಥಾನಗಳಲ್ಲಿ ದೀಪಾವಳಿಯ ಹಬ್ಬದಂತೆ ದೀಪಗಳನ್ನು ಬೆಳಗಿಸಿ ಶ್ರೀರಾಮನ ನಾಮಸ್ಮರಣೆ ಮಾಡಬೇಕು ಎಂದು ಮನವಿ ಮಾಡಿದರು

ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ರಾಜವಾಡೆಯಲ್ಲಿರುವ ಶ್ರೀ ಶಿವಭವಾನಿ ಮಂದಿರದಲ್ಲಿ ಶ್ರೀ ಶಿವಭವಾನಿ ದೇವಿಗೆ ಹಾಗೂ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ)ಗೆ ಮಂತ್ರಾಕ್ಷತೆಯೊಂದಿಗೆ ಪೂಜೆ ಸಲ್ಲಿಸಿ ರಾಜವಾಡೆಯಲ್ಲಿ ಮಂತ್ರಾಕ್ಷತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಸಭಟ್ ಜೋಶಿ, ಶ್ರೀಶೈಲ ಬಡಿಗೇರ, ಪ್ರಭು ಬಡಿಗೇರ, ನಾಗಪ್ಪ ಬಡಿಗೇರ, ಮರಾಠಾ ಸಮಾಜದ ಅಧ್ಯಕ್ಷ ಸಂಭಾಜಿ ವಾಡಕರ, ಜೀಜಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾಬಾಯಿ ನೂಲಿಕರ, ಜಯಶ್ರೀ ಘಾವಡೆ, ಪುರಸಭಾ ಸದಸ್ಯರಾದ ಅಣ್ಣಾಜಿ ಜಗತಾಪ, ಜಿ.ಟಿ. ಘೋರ್ಪಡೆ, ಕಾಶಿರಾಯ ಮೋಹಿತೆ, ರಂಗನಾಥ ನೂಲಿಕರ, ಪ್ರಕಾಶ ಸಾಸಾಬಾಳ, ಮಾರುತಿ ಘಾಟಗೆ, ಶಾಂತಗೌಡ ಪಾಟೀಲ, ಬಸವಂತ್ರಾಯ ಸುಭೆದಾರ, ರಾಘವೇಂದ್ರ ಮಾನೆ, ವಿಠ್ಠಲ ಮೋಹಿತೆ, ಶಿವು ಪಾಟೀಲ, ಸಂತೋಸ ಘಾವಡೆ, ಮಲ್ಲನಗೌಡ ಪಾಟೀಲ, ಸಂತೋಸ ಡಿಸಲೆ, ಚಂದ್ರ ಮಠಪತಿ, ರಮೇಶ ಮೋಹಿತೆ, ಮಲ್ಲು ಹಿಪ್ಪರಗಿ, ಬಸ್ಸು ಕಶೆಟ್ಟಿ, ಕಲ್ಲಪ್ಪಗೌಡ ಪಾಟೀಲ, ಶ್ರೀಶೈಲ ಹುಣಶ್ಯಾಳ, ಮಲ್ಲು ಹಡಪದ ಇತರರು ಉಪಸ್ಥಿತರಿದ್ದರು.

Share this article