ಆಗಸ್ಟ್‌ 15ರವರೆಗೆ ಮನೆ ಮನೆಗೆ ತಿರಂಗಾ ಧ್ವಜ ವಿತರಣೆ

KannadaprabhaNewsNetwork |  
Published : Aug 11, 2026, 01:30 AM IST
ಪೊಟೋ: 10ಎಸ್‌ಎಂಜಿಕೆಪಿ08ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ನಗರ ಘಟಕದಿಂದ ಆ.10ರಿಂದ 15ರವರೆಗೆ ಮನೆ ಮನೆಗೆ ತಿರಂಗಾ ಧ್ವಜ ವಿತರಣೆಯ ‘ಹರ್‌ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದರು.

ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ನಗರ ಘಟಕದಿಂದ ಆ.10ರಿಂದ 15ರವರೆಗೆ ಮನೆ ಮನೆಗೆ ತಿರಂಗಾ ಧ್ವಜ ವಿತರಣೆಯ ‘ಹರ್‌ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಭಕ್ತರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹರ್ ಘರ್ ತಿರಂಗಾ ಎಂಬ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದು, ಆ ಹಿನ್ನೆಲೆಯಲ್ಲಿ ಬಿಜೆಪಿ ಶಿವಮೊಗ್ಗ ನಗರ ಘಟಕವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಗರದಲ್ಲಿ ಸುಮಾರು 30 ಸಾವಿರ ಮನೆಗಳಿಗೆ ತಿರಂಗಾ ಧ್ವಜ ವಿತರಿಸಲಾಗಿದೆ ಎಂದರು.

ಆ.11ರಂದು ಸಂಜೆ 4ಕ್ಕೆ ಅಲ್ಲಮಪ್ರಭು ಮೈದಾನದಿಂದ ಕೃಷ್ಣ ಕೆಫೆ ವೃತ್ತದವರೆಗೆ ಯುವ ಮೋರ್ಚಾದಿಂದ ಬೈಕ್ ರ್‍ಯಾಲಿ ಆಯೋಜಿಸಲಾಗಿದ್ದು, ಇದರಲ್ಲಿ ಸುಮಾರು 1500 ಬೈಕ್ ಸವಾರರು ಪಾಲ್ಗೊಳ್ಳಲಿದ್ದಾರೆ. ಆ.13ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ವೃತ್ತದಲ್ಲಿ ಪಕ್ಷದ ಒಬಿಸಿ ಮೋರ್ಚಾ ವತಿಯಿಂದ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ, ಆ.14ರಂದು ಬೆಳಿಗ್ಗೆ 10ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ನಗರ ಸಮಿತಿಯಿಂದ ಯಾತ್ರೆ ನಡೆಯಲಿದೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಎಸ್. ಜ್ಞಾನೇಶ್ವರ್, ಮಂಜುನಾಥ್, ದೀನದಯಾಳ್, ಪ್ರಕಾಶ್ ಒಟ್ಟಿನಕೊಪ್ಪ, ಲತಾ ಶ್ರೀನಿವಾಸ್, ಯಶೋಧಾ, ಶ್ರೀನಾಗ್, ಮಂಜುನಾಥ್ ನವುಲೆ, ರಂಗೇಶ್, ಪರಮೇಶ್ ನಾಯ್ಕ್, ಮಹಾಲಕ್ಷ್ಮಿ, ರಶ್ಮಿ ಶ್ರೀನಿವಾಸ್, ಪ್ರದೀಪ್, ಗಾಡಿಕೊಪ್ಪ ಕುಮಾರ್, ಮುರಳಿ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಾಸನದ ಕ್ರೀಡಾಪಟುಗಳ ಸಾಧನೆ
ಕನಿಷ್ಠ ವೇತನ ಪರಿಷ್ಕರಣೆ ಆದೇಶ ತಕ್ಷಣ ಜಾರಿಯಾಗಲಿ