ಚನ್ನಪಟ್ಟಣ: ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಡಾ.ಸಂಪಂಗಿರಾಮಯ್ಯ ಟೈ ಮತ್ತು ಬೆಲ್ಟ್‌ಗಳನ್ನು ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಯೋಗೇಶ್ ಚಕ್ಕೆರೆ ಮಾತನಾಡಿ, ಡಾ. ಸಂಪಂಗಿರಾಮಯ್ಯ ವಿದ್ಯಾರ್ಥಿಗಳಿಗೆ ನೀಡಿದ ಟೈ-ಬೆಲ್ಟ್‌ಗಳು ಕೇವಲ ಸಮವಸ್ತ್ರದ ಭಾಗವಲ್ಲ, ಶಿಸ್ತು, ಸಮಾನತೆ ಮತ್ತು ಆತ್ಮವಿಶ್ವಾಸದ ಸಂಕೇತವಾಗಿವೆ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಮತ್ತು ಶಾಲೆಯಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆ, ಪೋಷಕರು ಹಾಗೂ ಸಮಾಜಕ್ಕೆ ಹೆಮ್ಮೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಮಧುಸೂದನ, ಬಿ.ಕೆ.ಲತಾ, ರಾಜಣ್ಣ, ಶಶಿಕುಮಾರ್, ರಶ್ಮಿ, ಶಶಿರೇಖಾ ಸೇರಿದಂತೆ ಶಿಕ್ಷಕ ವೃಂದ ಉಪಸ್ಥಿತರಿದ್ದರು.ಪೊಟೋ೧೯ಸಿಪಿಟಿ೨: ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ವೈದ್ಯರು ಹಾಗೂ ಸಮಾಜಸೇವಕರಾದ ಡಾ. ಸಂಪಂಗಿ ರಾಮಯ್ಯ ಟೈ ಮತ್ತು ಬೆಲ್ಟ್‌ಗಳನ್ನು ವಿತರಿಸಿದರು.