ಮಂಡ್ಯ ಶಾಸಕರಿಂದ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ

KannadaprabhaNewsNetwork |  
Published : Jan 09, 2026, 01:30 AM IST
8ಕೆಎಂಎನ್‌ಡಿ-8ಮಂಡ್ಯದ ಪ್ರವಾಸಿಮಂದಿರದಲ್ಲಿ ಎಸ್‌.ವಿ.ಗ್ರೂಪ್‌ ವತಿಯಿಂದ ಶಾಸಕ ಪಿ.ರವಿಕುಮಾರ್‌ ಹುಟ್ಟುಹಬ್ಬ ಆಚರಿಸಲಾಯಿತು. | Kannada Prabha

ಸಾರಾಂಶ

ಜನಪರ ಕೆಲಸಗಳನ್ನು ಮಾಡುತ್ತಲೇ ಜನಪ್ರಿಯ ಶಾಸಕರೆಂದು ಕರೆಸಿಕೊಂಡಿರುವ ಅವರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಯಬೇಕಿದೆ. ಕೈಗಾರಿಕೆ ಸ್ಥಾಪನೆಗೆ ನೂರು ಎಕರೆ ಉದಾರ ಭೂಮಿ ಕೊಡುವ ಭರವಸೆ ನೀಡಿದ್ದಾರೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಿ ಮತ್ತಷ್ಟು ಜನ ಸೇವೆ ಮಾಡುವ ಅವಕಾಶ ಕೊಡಲಿ.

ಮಂಡ್ಯ:

ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಪಿ.ರವಿಕುಮಾರ್ ಅವರ ಹುಟ್ಟುಹಬ್ಬವನ್ನು ಎಸ್.ವಿ.ಗ್ರೂಪ್ ವತಿಯಿಂದ ಕೇಕ್ ಕತ್ತರಿಸಿ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಅವರು, ಮಂಡ್ಯ ಕ್ಷೇತ್ರದ ಶಾಸಕರಾದ ಬಳಿಕ ಪಿ.ರವಿಕುಮಾರ್‌ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ರಸ್ತೆಗಳು, ಗ್ರಾಮೀಣ ರಸ್ತೆಗಳು, ವೃತ್ತಗಳ ಅಭಿವೃದ್ಧಿ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ನೆರವು, ನೋಟ್‌ಬುಕ್‌ ವಿತರಣೆಯಂತಹ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಜನಪರ ಕೆಲಸಗಳನ್ನು ಮಾಡುತ್ತಲೇ ಜನಪ್ರಿಯ ಶಾಸಕರೆಂದು ಕರೆಸಿಕೊಂಡಿರುವ ಅವರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯತ್ತ ಮುನ್ನಡೆಯಬೇಕಿದೆ. ಕೈಗಾರಿಕೆ ಸ್ಥಾಪನೆಗೆ ನೂರು ಎಕರೆ ಉದಾರ ಭೂಮಿ ಕೊಡುವ ಭರವಸೆ ನೀಡಿದ್ದಾರೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಿ ಮತ್ತಷ್ಟು ಜನ ಸೇವೆ ಮಾಡುವ ಅವಕಾಶ ಕೊಡಲಿ ಎಂದರು.

ಎಸ್.ವಿ.ಗ್ರೂಪ್‌ನ ಕಲ್ಲಹಳ್ಳಿ ಬಿ.ಕೆ.ಸಂತೋಷ್, ಹೊಸಹಳ್ಳಿ ನಾಗೇಶ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌ ಸೇರಿದಂತೆ ಇತರರಿದ್ದರು.ನಿರಾಶ್ರಿತರಿಗೆ ಕಂಬಳಿ ಹಾಗೂ ಉಣ್ಣೆ ಬಟ್ಟೆ ವಿತರಣೆ

ಶ್ರೀರಂಗಪಟ್ಟಣ:

ನಿರಾಶ್ರಿತರಿಗೆ ಕಂಬಳಿ ಹಾಗೂ ಉಣ್ಣೆ ಬಟ್ಟೆಯನ್ನು ಶೇಷಾದ್ರಿಪುರಂ ಎಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ರೋಟರಿ ಸಂಸ್ಥೆಯಿಂದ ವಿತರಿಸಲಾಯಿತು.

ಪಟ್ಟಣದ ಫುಟ್ ಪಾತ್ ರಸ್ತೆ ಬಳಿ ಆಶ್ರಯ ಮಾಡಿಕೊಂಡು ಜೀವನ ನಡೆಸುವ ಹಾಗೂ ಪಟ್ಟಣದ ಸುತ್ತಮುತ್ತ ಇರುವ ನಿರಾಶ್ರಿತರಿಗೆ ಚಳಿಗಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂಬ ಉದ್ದೇಶದಿಂದ ಉಣ್ಣೆ ಬಟ್ಟೆಗಳು ಹಾಗೂ ಕಂಬಳಿ ವಿತರಣೆ ಮಾಡಲಾಯಿತು.

ಈ ವೇಳೆ ಎನ್‌ಎಸ್‌ಎಸ್ ಅಧಿಕಾರಿ ಡಾ.ರಾಘವೇಂದ್ರ ಮಾತನಾಡಿ, ಬಡವರು ಮತ್ತು ಅಸಹಾಯಕ ಜನರು ಫುಟ್‌ಪಾತ್ ಮತ್ತು ರಸ್ತೆ ಬದಿಯಲ್ಲಿ ಚಿಂದಿ ಬಟ್ಟೆಯಲ್ಲಿ ಮಲಗುತ್ತಾರೆ. ರಾತ್ರಿಯಿಡೀ ತಣ್ಣನೆ ಗಾಳಿಯಿಂದ ನಡುಗುತ್ತಾರೆ ಮತ್ತು ಕೆಲ ವೃದ್ಧರು ಈ ಚಳಿಯನ್ನು ತಡೆದುಕೊಳ್ಳಲಾರದೆ ಸಾಯುತ್ತಾರೆ. ಇಂತಹ ಪರಿಸ್ಥಿಯಲ್ಲಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಬಳಿ ಹಾಗೂ ಉಣ್ಣೆಯ ಬಟ್ಟೆಯನ್ನು ನೀಡಲಾಗುತ್ತಿದೆ ಎಂದರು.

ಈ ವೇಳೆ ಶಿಬಿರಾರ್ಥಿಗಳು ಜೊತೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ