ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾರ್ಯಕ್ರಮವು ಸುನಿಲ್ ಗೌಡಳ್ಳಿ ಮತ್ತು ಹೇಮಲತಾ ರವರ ನಿರೂಪಣೆ, ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ನಿವೃತ್ತ ಶಿಕ್ಷಕರಾದ ಡಿ ಬಿ ಸೋಮಪ್ಪನವರು ಮತ್ತು ಪಂಚಾಯಿತಿಯ ಅಧ್ಯಕ್ಷರಾದ ಅಶೋಕ್ ಟಿ ಕೆ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಆರಂಭಗೊಂಡಿತು.
ಸಂಘದ ಅಧ್ಯಕ್ಷರಾದ ಜಯಕುಮಾರ್ ರವರು ಮಾತನಾಡಿ ವಿದ್ಯಾ ದೇವಾಲಯದಂತಿದ್ದ ಈ ಶಾಲೆಯು ಅತ್ಯಂತ ಕಡಿಮೆ ಮಕ್ಕಳನ್ನು ಹೊಂದಿರುವುದು ಬಹಳ ದುಃಖದ ವಿಷಯ, ನಾವೆಲ್ಲ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದು, ನಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯನ್ನು ಆಂಗ್ಲ ಮಾಧ್ಯಮವನ್ನಾಗಿ ಮಾಡುತ್ತೇವೆ ಮತ್ತು ಶತಮಾನೋತ್ಸವ ಕಂಡ ಇಂತಹ ಸರ್ಕಾರಿ ಶಾಲೆಗಳು ಕಣ್ಮರೆಯಾಗುವ ಹೊಸ್ತಿಲಲ್ಲಿರುವುದು ಬಹಳ ವೇದನೆಯಾಗಿದೆ, ನಿಡ್ತ ಸರ್ಕಾರಿ ಶಾಲೆಯನ್ನು ಉಳಿಸಲು ಪೂರ್ವ ವಿದ್ಯಾರ್ಥಿಗಳಾದ ನಮ್ಮ ದಿಟ್ಟ ಹೆಜ್ಜೆ ಎಂದು ತಿಳಿಸಿದರು.ನಿಡ್ತ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾದ ಮಾನಸ, ಸ್ಥಳೀಯರಾದ ಸುಬ್ಬಪ್ಪ, ಸಿ ಆರ್ ಪಿ ಯವರಾದ ದಿನೇಶ್ ಮತ್ತು ನಿವೃತ್ತ ಶಿಕ್ಷಕಿಯವರಾದ ಸ್ವಾತಿ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ನಮ್ಮನ್ನಗಲಿದ ಸಹಪಾಠಿಗಳ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಒಂದು ನಿಮಿಷ ಮೌನಾಚರಿಸಿ ಮತ್ತು ಅವರ ಕುಟುಂಬಕ್ಕೆ ಧನ ಸಹಾಯವನ್ನು ಕೂಡ ಮಾಡಲಾಯಿತು.