ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತ ಜನಗಣತಿ 2027ರ ನಿಮಿತ್ತ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಜನಗಣತಿ ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ ಮುಂಚೆಯೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಅಧಿಕಾರಿಗಳು, ಚಾರ್ಜ್ ಅಧಿಕಾರಿಗಳು, ಇತರೆ ಸಿಬ್ಬಂದಿಗೆ ಮಾರ್ಚ್ 6 ರಿಂದ ಮೂರು ದಿನಗಳ ಈ ತರಬೇತಿ ನೀಡಿದ್ದೇವೆ. ಹಾಗಾಗಿ ಈ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ. ಇದು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಏ.16ರಿಂದ ಮೇ 16ರವರೆಗೆ ಭಾರತದ ಜನಗಣತಿ-2027ರ ನಿಮಿತ್ತ ಮನೆಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ. ಜನಗಣತಿ ಸಲುವಾಗಿ ಬ್ಲಾಕ್ ರಚಿಸಲಾಗುತ್ತಿದ್ದು, 150 ರಿಂದ 200 ಮನೆಗಳು ಅಥವಾ 700 ರಿಂದ 800ಜನಸಂಖ್ಯೆಗೆ ಓರ್ವ ಗಣತಿದಾರರನ್ನು ಮತ್ತು ಪ್ರತಿ ಆರು ಜನ ಗಣತಿದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, 3121 ಜಿಲ್ಲಾ ಅಧಿಕಾರಿಗಳು, 2533 ಚಾರ್ಜ್ ಅಧಿಕಾರಿಗಳು, 422 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಹೇಳಿದರು.ಎರಡನೇ ಹಂತವಾಗಿ ಫೆಬ್ರವರಿ 2027ರಲ್ಲಿ ಜನಸಂಖ್ಯಾ ಗಣತಿ ಕಾರ್ಯ ನಡೆಯಲಿದೆ. ಈ ಗಣತಿ ಕಾರ್ಯ ಡಿಜಿಟಲ್ ಆಗಿದ್ದು, ಮೊಬೈಲ್ ಆಪ್‌ನಲ್ಲಿ ನಿಗದಿಪಡಿಸಿದ ಪ್ರಶ್ನಾವಳಿ ಮೂಲಕ ದತ್ತಾಂಶ ಸಂಗ್ರಹಿಸುವುದು, ಈ ಜನಗಣತಿ ವಿಶೇಷವಾಗಿದೆ. ಡಿಜಿಟಲ್ ಮೋಡ್ ನಡೆಯುವ ಪ್ರಥಮ ಜನಗಣತಿಯಾಗಿದೆ. ಮೋಡ್ ನಡೆಯುವ ಪ್ರಥಮ ಜನಗಣತಿಯಾಗಿದೆ. ಗಣತಿದಾರರ ಸ್ಮಾರ್ಟ್ ಫೋನ್ ಮೀಸಲಾದ ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.
ಭಾರತ ಜನಗಣತಿ ಮೊದಲನೇ ಹಂತವು ಪ್ರತಿಯೊಂದು ಕುಟುಂಬ, ರಚನೆ ಮತ್ತು ಮ್ಯಾಪ್ ಅನ್ನು ಒಳಗೊಂಡಿರುತ್ತದೆ. ಕರ್ನಾಟಕ ಸರ್ಕಾರದ ಅಧಿಸೂಚನೆ ಆರ್‌ಡಿ.119.ಟಿಎನ್‌ಆರ್.2026, ದಿನಾಂಕ 06/03/2026 ರ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ವಸತಿ ಗುಣಮಟ್ಟ, ಸೌಕರ್ಯಗಳು (ನೀರು, ವಿದ್ಯುತ್ ಮತ್ತು ಶೌಚಾಲಯಗಳು ಮುಂತಾದವು) ಮತ್ತು ಸ್ವತ್ತುಗಳ ಕುರಿತು ಈ ಕೆಳಕಂಡ 33 ಪ್ರಶ್ನೆಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದು ಫೆಬ್ರವರಿ-2027 ರಿಂದ ನಡೆಯುವ ಎರಡನೇ ಹಂತದ ಜನಸಂಖ್ಯಾ ಗಣತಿಗೆ ಅಡಿಪಾಯವನ್ನು ರಚಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ಧೇಶಕ ಜುಂಜಣ್ಣ, ವಾರ್ತಾಸಹಾಯಕ ಮಂಜುನಾಥ್, ಸಿಬ್ಬಂದಿ ಇದ್ದರು.
ಸಿಕೆಬಿ-1 ಭಾರತ ಜನಗಣತಿ 2027ರ ನಿಮಿತ್ತ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು.