ಚಿಕ್ಕಮಗಳೂರು: ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವದ ಅಂಗವಾಗಿ ಶುಕ್ರವಾರ ಶ್ರೀ ರಾಮೋತ್ಸವ ಸೇವಾ ಸಮಿತಿಯಿಂದ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಚಿಕ್ಕಮಗಳೂರು: ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಉತ್ಸವದ ಅಂಗವಾಗಿ ಶುಕ್ರವಾರ ಶ್ರೀ ರಾಮೋತ್ಸವ ಸೇವಾ ಸಮಿತಿಯಿಂದ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ರಾಮನವಮಿ ಪ್ರಯುಕ್ತ ಮಾ.28ಕ್ಕೆ ಹಾಡುಗಾರಿಕೆ, ರಾಮತಾರಕ ಹೋಮ, ರಾಮಾಯಣ ಗಮನ ವಾಚನ, ಶ್ರೀ ರಾಮ ಪಟ್ಟಾಭಿಷೇಕ, ಸಂಜೆ 6ಕ್ಕೆ ಶ್ರೀಯವರನ್ನು ಪುಷ್ಪಾಲಂಕಾರ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಭಜನೆಯೊಂದಿಗೆ ರಾಜಬೀದಿ ಉತ್ಸವ, ನಾದಸ್ವರ ವಾದನ ನಡೆಯಲಿದೆ.ಮಾ.30ಕ್ಕೆ ಆಂಜನೇಯೋತ್ಸವ, ಹಾಡುಗಾರಿಕೆ, ಮಾ.31ಕ್ಕೆ ಶಯನೋತ್ಸವ, ದೇವರನಾಮ ಮತ್ತು ಭಕ್ತಿ ಸಂಗೀತ, ಏ.1 ರಂದು ಶಯನೋತ್ಸವ, ವೇಣುವಾದನ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.