ಸಾಧಕರಾಗಬೇಕೇ ಹೊರತು ಬಾಧಕರಾಗಬಾರದು

KannadaprabhaNewsNetwork |  
Published : Nov 10, 2025, 02:15 AM IST
10 | Kannada Prabha

ಸಾರಾಂಶ

ಸಹಾಯ ಮಾಡಲು ಸಾಧ್ಯವಾಗದಿದ್ದರೂ ಸ್ವಾರ್ಥ ಸಾಧನೆಗಾಗಿ ಬೇರೆಯವರಿಗೆ ತೊಂದರೆ ಕೊಡಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಹುಟ್ಟಿದ ಮೇಲೆ ಸಾಧಕರಾಗಬೇಕೇ ಹೊರತು ಬಾಧಕರಾಗಬಾರದು ಎಂದು ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ತಿಳಿಸಿದರು.

ವಿಜಯನಗರ 1ನೇ ಹಂತದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಎಂದರೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನೇ ತೆಗೆದುಕೊಳ್ಳಬೇಕು ಎಂದೇನಿಲ್ಲ. ಪ್ರತಿಯೊಬ್ಬರು ನಿಮ್ಮಿಂದ ಸಾಧ್ಯವಾಗುವ ಮಟ್ಟದಲ್ಲಿ ಸಹಾಯ, ಸಾಧನೆ ಮಾಡಬೇಕು ಎಂದರು.

ಸಹಾಯ ಮಾಡಲು ಸಾಧ್ಯವಾಗದಿದ್ದರೂ ಸ್ವಾರ್ಥ ಸಾಧನೆಗಾಗಿ ಬೇರೆಯವರಿಗೆ ತೊಂದರೆ ಕೊಡಬಾರದು. ಕಳ್ಳತನ ಮಾಡಬಾರದು. ನಂಬಿಕೆ ದ್ರೋಹ ಮಾಡಬಾರದು. ಕೊಲೆ- ಸುಲಿಗೆ ಮಾಡಬಾರದು. ಪ್ರಶಸ್ತಿ ಪಡೆದಿರುವವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪುರಸ್ಕೃತರು

ಎಚ್‌.ಎಸ್‌. ಹರಿಶಂಕರ್‌ (ಸಂಶೋದನೆ), ಮಣಿ ಶೇಖರ್‌ (ಕರಕುಶಲ), ಪ್ರಭಾಶಾಸ್ತ್ರಿ ಜೋಶ್ಯುಲ (ಸಾಹಿತ್ಯ), ಬಿ.ಆರ್‌. ನಾಗರತ್ನ (ಸಾಹಿತ್ಯ), ಡಾ. ಬಲ್ಲೇನಹಳ್ಳಿ ವಿಜಯಕುಮಾರ್‌ (ಸಾಹಿತ್ಯ), ಪ್ರೊ. ಅನಿತಾ ವಿಮಲ ಬ್ರ್ಯಾಗ್ಸ್ (ಆಡಳಿತ), ಲೀಲಾವತಿ (ರಂಗಭೂಮಿ), ಯಶೋಧ ರಾಮಕೃಷ್ಣ (ಸಾಹಿತ್ಯ), ಸೌಗಂಧಿಕಾ ಜೋಯಿಸ್‌ (ಸಂಘಟನೆ), ಪದ್ಮಾ ಪಾಂಡುರಂಗ (ನಿರೂಪಣೆ), ಡಾ. ಪೂವಮ್ಮ (ವೈದ್ಯಕೀಯ), ಡಾ. ಅಖಿಲಾ (ಸಂಶೋಧನೆ), ಎನ್‌.ಆರ್‌. ರೂಪಶ್ರೀ (ಸಾಹಿತ್ಯ), ಸುಜನಾ (ಸಮಾಜಸೇವೆ), ಎಂ.ಎಸ್‌. ಉಷಾ ಪ್ರಕಾಶ್‌ (ಸಾಹಿತ್ಯ), ಕೆ. ಲಕ್ಷ್ಮಿ (ಸಾಹಿತ್ಯ), ಪ್ರೊ.ಎಂ.ಎಸ್‌. ಮನೋನ್ಮಣಿ (ಶಿಕ್ಷಣ), ಎಂ.ಸಿ. ಮಂಜುಳಾ (ಸಾಹಿತ್ಯ), ಭಾರತಿ ಪ್ರಸಾದ್‌ (ಸಾಹಿತ್ಯ), ಮಾಚಮ್ಮ ಮಲ್ಲಿಗೆ (ಪತ್ರಿಕೋದ್ಯಮ), ಡಾ.ಎನ್‌.ಆರ್‌. ಚಂದ್ರೇಗೌಡ (ಶೈಕ್ಷಣಿಕ), ಎಚ್‌.ಎಲ್‌‍. ಶಿವಬಸಪ್ಪ (ಸಾಹಿತ್ಯ), ಅವರೇಕಾಡು ವಿಜಯಕುಮಾರ್‌ (ಸಾಹಿತ್ಯ), ಎಂ.ಕೆ. ಗಿರೀಶ್‌ ಚಂದ್ರ (ಸಮುದಾಯ ಸೇವೆ), ಅಂಟೋರ ಅಕ್ತರ್‌ (ಭರತನಾಟ್ಯ), ಚಂದ್ರಪ್ಪ (ರಂಗಭೂಮಿ), ಸರಸ್ವತಿ ಶೆಟ್ಟಿ (ಸಮಾಜಸೇವೆ), ಪಿ. ದೇವರಾಜು ಚಿಕ್ಕಳ್ಳಿ (ಶಿಕ್ಷಣ), ಎ.ಜಿ. ಸುಧೀರ್ (ನ್ಯಾಯಾಂಗ), ಸಿ. ಮಲೆಯೂರು ಪ್ರಭುಸ್ವಾಮಿ (ಸಮಾಜಸೇವೆ), ಅಲಮೇಲಮ್ಮ (ಸಂಘಟನೆ), ಎಚ್‌.ಎ. ಯಾದವ ಹರೀಶ (ಸಮಾಜಸೇವೆ), ಎಸ್‌. ಜ್ಞಾನೇಶ್ವರ್‌ (ಕ್ರೀಡೆ), ಪ್ರೀತಮ್‌ (ಗಾಯನ), ಮಹದೇವಮ್ಮ (ಸಮಾಜಸೇವೆ), ಡಾ. ಚಿನ್ನನಾಗಪ್ಪ (ವೈದ್ಯಕೀಯ), ಕಾಳಿಹುಂಡಿ ಶಿವಕುಮಾರ್‌ (ಸಂಗ್ರಹ), ವೀಣಾ ಕದಂಬ (ಸಾಹಿತ್ಯ), ಸ್ವರೂಪರಾಣಿ (ಪರಿಸರ), ಭವತಾರಿಣಿ (ಗಾಯನ), ಶೋಭಾ ಚಲುವಯ್ಯ (ಶಿಕ್ಷಣ), ಪದ್ಮಾವತಿ (ಸಮಾಜಸೇವೆ), ಸೌರವ್‌ ಗಜ್‌ (ಶೈಕ್ಷಣಿಕ), ಪಿ. ಗಿರೀಶ್‌ (ಸಮುದಾಯ ಸೇವೆ), ಶಿವಶಂಕರ್‌ (ಕರಕುಶಲ), ಚನ್ನಬಸಪ್ಪ (ಧಾರ್ಮಿಕ), ಎಚ್‌.ಎಸ್‌. ಲೋಕೇಶ್‌ (ಜನಪದ), ಸಿ. ನಾಗರಾಜು (ಬಯಲು ನಾಟಕ), ಕೆ. ಹರ್ಷಿಣಿ (ಶಿಕ್ಷಣ) ಮತ್ತು ಎಂ. ಶಿವರಾಜ್‌ (ಸಮಾಜಸೇವೆ) ಅವರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಪದಾಧಿಕಾರಿಗಳಾದ ಮ.ನ. ಲತಾ ಮೋಹನ್‌, ಚೀಲೂರು ಚಂದ್ರಶೇಖರ್, ಜಿ. ಪ್ರಕಾಶ್, ಕೆಂಪಣ್ಣ, ಮೈ.ನಾ. ಲೋಕೇಶ್, ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಮೂಗೂರು ನಂಜುಂಡಸ್ವಾಮಿ, ಅನಂತ ಮೊದಲಾದವರು ಇದ್ದರು.

PREV

Recommended Stories

ಕಟೀಲು ನುಡಿಹಬ್ಬದಲ್ಲಿ ರಂಜಿಸಿದ ಸಿನಿಮಾ ತಾರೆಯರು
ಜಗತ್ತಿನ ಎಲ್ಲಾ ಕ್ರಾಂತಿಗಳಿಗೂ ಬರವಣಿಗೆಯೇ ಪ್ರೇರಣೆ