ಯಯೂದಿ ತತ್ವಗಳಿಗೂ, ಗೀತೆಗೂ ಸಾಮ್ಯತೆ ಇದೆ: ಪ್ರೊ.ಆ್ಯಲನ್‌

KannadaprabhaNewsNetwork |  
Published : Nov 10, 2025, 02:00 AM IST
32 | Kannada Prabha

ಸಾರಾಂಶ

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಬೃಹತ್ ಗೀತೋತ್ಸವ ಅಂಗವಾಗಿ ಭಾನುವಾರ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಭಗವದ್ಗೀತೆಯ ತತ್ವಗಳಿಗೂ ಯಹೂದಿ ಧರ್ಮದ ತತ್ವಗಳಿಗೂ ಸಾಮ್ಯತೆ ಇದೆ ಎಂದು ಅಮೆರಿಕಾದ ಸೀಟನ್ ಹಾಲ್ ವಿಶ್ವವಿದ್ಯಾನಿಲಯದ ಪ್ರೊ. ಆ್ಯಲನ್ ಬ್ರಿಲ್ ಹೇಳಿದ್ದಾರೆ.ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತಿರುವ ಬೃಹತ್ ಗೀತೋತ್ಸವ ಅಂಗವಾಗಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಯಹೂದಿ ಮತ್ತು ಹಿಂದೂ ಧರ್ಮದ ನಡುವಿನ ತಾತ್ವಿಕ ಭೇದ ಮತ್ತು ಸಾಮ್ಯತೆಗಳನ್ನು ವಿವರಿಸಿದ ಅವರ, ಗೀತೆಯ ಉಪದೇಶಗಳು ಯಹೂದಿ ಧರ್ಮಕ್ಕೂ ಅನ್ವಯಿಸುತ್ತವೆ. ಪುನರ್ಜನ್ಮದ ಕಲ್ಪನೆ ಯಹೂದಿ ಪರಂಪರೆಯಲ್ಲಿಯೂ ಇದೆ. ಆಚಾರ‍್ಯ ಮಧ್ವರು ಬೋಧಿಸಿದ ಜೀವಭೇದ ತತ್ವಗಳಿಗೂ ಯಹೂದಿ ಧರ್ಮದ ತತ್ವಗಳಿಗೂ ಸಾಮ್ಯತೆ ಇದೆ ಎಂದರು.ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರೊ. ಫ್ರಾನ್ಸಿಸ್ ಕ್ಲೂನಿ ಅವರು ಭಗವದ್ಗೀತೆಯ ಪ್ರಸ್ತುತತೆಯ ಬಗ್ಗೆ ಮಾತನಾಡಿ, ತಾವು ಕ್ರೈಸ್ತರಾಗಿದ್ದರೂ ಗೀತೆಯ ಮಾರ್ಗದರ್ಶನದಿಂದ ನನ್ನ ಜೀವನವೇ ಬದಲಾಯಿಸಿದೆ. ಗೀತೆ ಕೇವಲ ಓದಿನ ಪುಸ್ತಕವಲ್ಲ, ಅದು ಅಭ್ಯಸಿಸಿ ಅನುಸರಿಬೇಕಾದ ತತ್ವ ಎಂದರು.ಸಮ್ಮೇಳನ ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಅನ್ಯ ಮತೀಯರೂ ಭಗವದ್ಗೀತೆಯ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಜಗತ್ತಿನಾದ್ಯಂತ ಭಗವದ್ಗೀತೆ ಬಗ್ಗೆ ಆದರ ಬೆಳೆಯುತ್ತಿದೆ. ಆದ್ದರಿಂದ ಗೀತೆಯನ್ನು ಭಾರತೀಯರೆಲ್ಲರೂ ಅಧ್ಯಯನ ಮಾಡಬೇಕು. ಗೀತಾಧ್ಯಯನದಿಂದ ಸಕಲ ಶ್ರೇಯಸ್ಸುಂಟಾಗುತ್ತದೆ ಎಂದು ಕರೆ ನೀಡಿದರು.ಅಮೆರಿಕಾದ ವಿದ್ವಾಂಸ ಕೇಶವ ರಾವ್ ತಾಡಪತ್ರಿ, ಮಣಿಪಾಲ ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇದ್ದರು. ಯೋಗೀಂದ್ರ ಆಚಾರ್ಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ