ದಾನಧರ್ಮದಿಂದ ಮನುಷ್ಯನ ಹೆಸರು ಶಾಶ್ವತವಲ್ಲ-ಸಿದ್ದರಾಮ ಶ್ರೀ

KannadaprabhaNewsNetwork |  
Published : Nov 10, 2025, 02:00 AM IST
ಪೊಟೋಪೈಲ್ ನೇಮ್ ೭ಎಸ್‌ಜಿವಿ೧ ಶಿಗ್ಗಾಂವಿ ತಾಲೂಕಿನ ನಾರಾಯಣಪುರ   ಗ್ರಾಮದಲ್ಲಿ   ನಡೆದ ವಿರಕ್ತಮಠದ ನೂತನ ಸಭಾಭವನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮುಖಂಡ ವಿಶ್ವನಾಥ ಕಂಬಾಳಿಮಠ ಉದ್ಘಾಟಿಸಿದರು | Kannada Prabha

ಸಾರಾಂಶ

ಬದುಕು ಶಾಶ್ವತವಲ್ಲ, ಜನಿಸಿದ ಪ್ರತಿ ಜೀವಿಗೆ ಅಂತ್ಯವಿದೆ. ಹೀಗಾಗಿ ಪ್ರಾಮಾಣಿಕವಾಗಿ ದುಡಿದು ಗಳಿಸಿದ ಆಸ್ತಿ, ಮತ್ತು ಅಧಿಕಾರ ಸಹ ಶಾಶ್ವತವಲ್ಲ. ಆದರೆ ಬದುಕಿನ ಅವಧಿಯಲ್ಲಿ ಮಾಡಿರುವ ಪರೋಪಕಾರ, ಪುಣ್ಯದ ಕೆಲಸಗಳು, ದಾನಧರ್ಮದ ಕಾರ್ಯಗಳು ಮನುಷ್ಯನ ಹೆಸರನ್ನು ಶಾಶ್ವತಗೊಳಿಸುತ್ತವೆ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಸಿದ್ದರಾಮ ಮಹಾಮಿಗಳು ಹೇಳಿದರು.

ಶಿಗ್ಗಾಂವಿ: ಬದುಕು ಶಾಶ್ವತವಲ್ಲ, ಜನಿಸಿದ ಪ್ರತಿ ಜೀವಿಗೆ ಅಂತ್ಯವಿದೆ. ಹೀಗಾಗಿ ಪ್ರಾಮಾಣಿಕವಾಗಿ ದುಡಿದು ಗಳಿಸಿದ ಆಸ್ತಿ, ಮತ್ತು ಅಧಿಕಾರ ಸಹ ಶಾಶ್ವತವಲ್ಲ. ಆದರೆ ಬದುಕಿನ ಅವಧಿಯಲ್ಲಿ ಮಾಡಿರುವ ಪರೋಪಕಾರ, ಪುಣ್ಯದ ಕೆಲಸಗಳು, ದಾನಧರ್ಮದ ಕಾರ್ಯಗಳು ಮನುಷ್ಯನ ಹೆಸರನ್ನು ಶಾಶ್ವತಗೊಳಿಸುತ್ತವೆ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಸಿದ್ದರಾಮ ಮಹಾಮಿಗಳು ಹೇಳಿದರು.

ತಾಲೂಕಿನ ನಾರಾಯಣಪುರ ಗ್ರಾಮದ ಗುರುಲಿಂಗ ಮಹಾಸ್ವಾಮಿ ಅವರ ವಿರಕ್ತಮಠದ ನೂತನ ಸಭಾಭವನ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಸದಾ ಸಂಘ ಜೀವಿಯಾಗಿ, ಇತರರೊಂದಿಗೆ ಒಗ್ಗಟ್ಟಿನ ಮತ್ತು ಸಮಾನತೆ ಬದುಕು ಸಾಗಿಸಲು ಬಯಸುತ್ತಾನೆ. ಅದರಿಂದಾಗಿ ಮೌಲ್ಯಾಧಾರಿತ ಬದುಕಿಗೆ ಪರೋಪಕಾರದ ಗುಣಗಳನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ಬದುಕಿನ ಅವಧಿಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಕಾರ್ಯಗಳನ್ನು ಮಾಡಬೇಕು, ಆಗ ಬದುಕು ಸಾರ್ಥಕವಾಗುತ್ತದೆ, ಅಂತಹ ಚಿಂತನೆಗಳು ಮನುಷ್ಯನಲ್ಲಿ ರೂಢಿಸಿಕೊಳ್ಳಬೇಕು ಎಂದರು.

ಸಮಾಜಕ್ಕೆ ಉತ್ತಮ ಹೆಜ್ಜೆ ಗುರುತುಗಳು ಉಳಿಯಬೇಕು. ಮಾಡಿರುವ ಕಾರ್ಯಗಳ ಸಾಧನೆ ಇತರರಿಗೆ ಮಾದರಿಯಾಗಬೇಕು. ಇತರರನ್ನು ಪ್ರೀತಿಯಿಂದ ಕಾಣಿರಿ. ದ್ವೇಷ, ಅಸೂಯೆಗಳು ಮನುಷ್ಯನ ಏಳ್ಗೆಯನ್ನು ಕುಂಠಿತಗೊಳಿಸುತ್ತವೆ. ಯಾರು ವೈರಿಗಳಲ್ಲ, ಸರ್ವ ಸಮುದಾಯದವರು ಸೇರಿ ಸಮಾನತೆ ಬದುಕು ನಡೆಸಿ. ಅದರಿಂದ ನಾಡಿನಲ್ಲಿ ಶಾಂತಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಮಠಮಂದಿರಗಳು ಸರ್ವ ಜನರಿಗೆ ಅನ್ನ ಮತ್ತು ಅಕ್ಷರ ನೀಡುವ ಜ್ಞಾನಕೇಂದ್ರಗಳಾಗಿವೆ. ಅದರಿಂದ ಭಕ್ತಿ ಮಾರ್ಗ ಕಾಣಲು ಸಾಧ್ಯವಿದೆ ಎಂದರು. ಬಸವಕೇಂದ್ರ ತಾಲೂಕು ಅಧ್ಯಕ್ಷ ರವಿ ಬಂಕಾಪುರ ಅಧ್ಯಕ್ಷತೆ ವಹಿಸಿದ್ದರು. ಬಂಕಾಪುರ ಅರಳೇಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಹೊತ್ನಹಳ್ಳಿ ಶಂಭುಲಿಂಗ ಸ್ವಾಮೀಜಿ, ಹತ್ತಿಮತ್ತೂರದ ನಿಜಗುಣ ಶಿವಯೋಗಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು.ಮುಖಂಡ ಶರಣಬಸಪ್ಪ ಕಿವುಡನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ವಿಶ್ವನಾಥ ಕಂಬಾಳಿಮಠ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಸಹದೇವಪ್ಪ ಗುಳೆದಕೇರಿ, ಮುದ್ದಪ್ಪ ಗುಳೇದಕೇರಿ, ಖಾಜಿಸಾಬ ದರ್ಗಾ, ಸಿ.ವಿ.ಮತ್ತಿಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗೇಶ್ವರ ಕಲಿವಾಳ, ಉಪಾಧ್ಯಕ್ಷೆ ಲಕ್ಷ್ಮವ್ವ ವಾಲಿಕಾರ, ಚನ್ನಬಸಪ್ಪ ಕುರಗೋಡಿ, ರಾಜೇಶ್ವರಿ ಬಡಿಗೇರ, ಗದಿಗಯ್ಯ ಹಿರೇಮಠ, ಮಂಜುಳಾ ಇಚ್ಚಂಗಿ, ರತ್ನವ್ವ ಓಲೇಕಾರ, ಶಿರಾಜಅಹ್ಮದ ಮುಲ್ಲಾ, ಬಸವರಾಜ ಹೆಸರೂರ, ಶಂಭು ಆಜೂರ, ಸಂಗಪ್ಪ ವಡವಿ, ಲಕ್ಷ್ಮೀ ಶೆಟ್ಟರ, ಶೇಖವ್ವ ಚಂದ್ರಗೇರಿ, ಬಸವರಾಜ ಮಸಳಿ, ಶಂಭಣ್ಣ ಚಿಗಳ್ಳಿ, ಎಸ್.ಎನ್.ಲಕ್ಷ್ಮೇಶ್ವರ, ಗಂಗಾಧರ ಭಾವಿಕಟ್ಟಿ, ಸುಭಾಸ ಮಸಳಿ, ಗೋವಿಂದ ಕುಲಕರ್ಣಿ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.ಕಲಾವಿದ ಚನ್ನಬಸಪ್ಪ ಬೈಲವಾಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ