ಕನ್ನಡಪ್ರಭ ವಾರ್ತೆ ಮಡಿಕೇರಿ
ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿಯಲ್ಲಿ 1975 ನೇ ಜೂನ್ 27 ರಂದು ಉದ್ಘಾಟನೆಯಾಗಿತ್ತು. ಉಮಾಉಲ್ಲಾಳ್, ಡಾ. ಜಯಲಕ್ಷ್ಮಿ ಪಾಟ್ಕರ್ ಸ್ಥಾಪಕಾಧ್ಯಕ್ಷರಾಗಿ, ಅಲಮೇಲು ಗಿರಿ ಪ್ರಧಾನ ಕಾರ್ಯದಶಿ೯ಯಾಗಿದ್ದ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯನ್ನು ಕಮಲ ಪದ್ಮನಾಭನ್ ಉದ್ಘಾಟಿಸಿದ್ದರು. 12 ಸದಸ್ಯರಿಂದ ಆರಂಭವಾಗಿದ್ದ ಮಡಿಕೇರಿ ಇನ್ನರ್ ವೀಲ್ ಇದೀಗ 46 ಸದಸ್ಯರನ್ನು ಹೊಂದಿದೆ. ಇನ್ನರ್ ವೀಲ್ ಜಿಲ್ಲೆ 318 ಗೆ ಈವರೆಗೆ ಮಡಿಕೇರಿ ಇನ್ನರ್ ವೀಲ್ ನಿಂದ ಮಿನ್ನಿ ಬೋಪಯ್ಯ, ಪ್ರೇಮಾಕಾಳಪ್ಪ, ಪೂಣಿ೯ಮಾ ರವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ಸಮರ್ಥ ಕಾರ್ಯನಿರ್ವಹಣೆಗೆ ಖ್ಯಾತರಾಗಿದ್ದರು.ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷದಲ್ಲಿ ಬೇಲಾ ಪೊನ್ನಪ್ಪ ಅಧ್ಯಕ್ಷರಾಗಿದ್ದರೆ, 50 ವರ್ಷಾಚರಣೆ ಸಂದರ್ಭ ಲಲಿತಾ ರಾಘವನ್ ಅಧ್ಯಕ್ಷರಾಗಿದ್ದಾರೆ ಎಂದೂ ಅವರು ತಿಳಿಸಿದರು.ಮೆಡಿಕಲ್ ಇಕ್ಯುಪ್ ಮೆಂಟ್ ಬ್ಯಾಂಕ್:ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಸುವಣ೯ ಮಹೋತ್ಸವ ಸಂದರ್ಭ ಅನೇಕ ಜನಪರ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ.
ಸುವರ್ಣ ಸಂಭ್ರಮದ ಹಿನ್ನಲೆಯಲ್ಲಿ ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೆಘಾ ಯೋಜನೆಯಾಗಿ ಮೆಡಿಕಲ್ ಇಕ್ಯುಪ್ ಮೆಂಟ್ ಬ್ಯಾಂಕ್ ಪ್ರಾರಂಭಿಸಲಿದೆ. ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯಿಂದ 4 ವೀ್ಲ್ ಚೇರ್, 4ಕ್ರಚಸ್, 3 ವಾಕರ್ , 2, ವಾಟರ್ ಬೆಡ್, ಸುಸಜ್ಜಿತ ಬೆಡ್ ಸೇರಿದಂತೆ ಅಂದಾಜು 1.20 ಲಕ್ಷ ರು. ಮೌಲ್ಯದ ಆರೋಗ್ಯ ಉಪಕರಣಗಳನ್ನು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ನವಂಬರ್ 10 ರಂದು ಸಂಜೆ 4 ಗಂಟೆಗೆ ನೀಡಲಿದ್ದಾರೆ. ಈ ಉಪಕರಣಗಳನ್ನು ಖರೀದಿಸಲು ಆಥಿ೯ಕವಾಗಿ ಸಬಲರಲ್ಲದ ಆದರೆ ಉಪಕರಣಗಳು ಅತ್ಯಗತ್ಯವಾಗಿರುವ ರೋಗಿಗಳಿಗೆ ಮನೆಗಳಲ್ಲಿ ಬಳಸಲು ಸಾಧ್ಯವಾಗುವಂತೆ ಅವರ ಉಪಯೋಗಕ್ಕಾಗಿ ಆಸ್ಪತ್ರೆಯಿಂದ ನಿಗದಿತ ಬಾಡಿಗೆ ದರದ ಆಧಾರದಲ್ಲಿ ನೀಡಲಾಗುತ್ತದೆ. ಬಳಕೆಯಾದ ನಂತರ ರೋಗಿಗಳು ಆ ಉಪಕರಣವನ್ನು ಮರಳಿ ಅಶ್ವಿನಿ ಆಸ್ಪತ್ರೆಗೆ ಹಿಂದಿರಿಗಿಸಬೇಕಾಗಿದೆ ಎಂದೂ ಸುದ್ದಿಗೋಷ್ಟಿಯಲ್ಲಿ ಲತಾಚಂಗಪ್ಪ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲಲಿತಾ ರಾಘವನ್, ಕಾರ್ಯದರ್ಶಿ ನಮಿತಾ ರೈ, ಸುವರ್ಣ ಮಹೋತ್ಸವ ಆಚರಣಾ ಸಮಿತಿ ಕಾರ್ಯದರ್ಶಿ ಶಫಾಲಿ ರೈ, ನಿರ್ದೇಶಕಿ ಉಮಾಗೌರಿ ಶಿವಪ್ರಸಾದ್ ಉಪಸ್ಥಿತರಿದ್ದರು.