ಬ್ರಹ್ಮಕಲಶೋತ್ಸವ: ವಿಜ್ಞಾಪನಾ ಪತ್ರ ಬಿಡುಗಡೆಕನ್ನಡಪ್ರಭ ವಾರ್ತೆ ಮೂಲ್ಕಿ
ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವಳದಲ್ಲಿ ನಡೆದ ಮುಷ್ಠಿಕಾಣಿಕೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ವಿಜ್ಞಾಪನಾಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್ ಮಾತನಾಡಿ, ಸುಮಾರು 5 ಕೋಟಿ ಮುಂಬೈ ಸಮಿತಿಯಿಂದ ದೇಣಿಗೆ ಕೊಡುವ ಜವಾಬ್ದಾರಿ ಇದೆ. ಈಗಾಗಲೇ ನನ್ನ ವೈಯಕ್ತಿಕ ನೆಲೆಯಲ್ಲಿ 50 ಲಕ್ಷ ರು. ಕೊಡುತ್ತಿದ್ದೇನೆ ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಶ್ರೀಮಂತಿಕೆ ತುಂಬಾ ಜನರಲ್ಲಿ ಇದೆ. ಆದರೆ ಹೃದಯ ಶ್ರೀಮಂತಿಕೆ ಇರುವವರು ಕೆಲವೇ ಕೆಲವು ಜನ ಮಾತ್ರ. ಅಂಥವರು ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಾರೆ ಎಂದರು.
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಮುಷ್ಟಿ ಕಾಣಿಕೆ ಸಮರ್ಪಣೆ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆಯಿತು.ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಕ್ಷೇತ್ರದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಮುಷ್ಟಿ ಕಾಣಿಕೆಗೆ ಚಾಲನೆ ನೀಡಿದರು.ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಲ್ಚಡ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಧರ್ಮಪಾಲ ದೇವಾಡಿಗ, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರೀಯಾನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾಕರ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 30 ಲಕ್ಷ ವೆಚ್ಚದಲ್ಲಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಮುಖಮಂಟಪವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ ಹಾಗೂ ಆಡಳಿತ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಪಂದುಬೆಟ್ಟು ಆದಿಉಡುಪಿ ನಿರ್ಮಿಸಿಕೊಡುತ್ತಿದ್ದು, ಅಷ್ಟೇ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಿಂಬದಿಯ ಪ್ರವೇಶ ದ್ವಾರವನ್ನು ನಿರ್ಮಿಸಿಕೊಡಲು ದಾನಿಯೊಬ್ಬರು ಮುಂದೆ ಬಂದಿದ್ದಾರೆ. ದೇವಸ್ಥಾನದ ಟ್ರಸ್ಟಿ ಗೀತಾ. ಪಿ. ಕುಮಾರ್ 10 ಲಕ್ಷ ರು. ದೇಣಿಗೆಯ ಘೋಷಣೆ ಮಾಡಿದ್ದು, ಕನ್ಯಾನ ಸದಾಶಿವ ಶೆಟ್ಟಿಯವರು ಮುಷ್ಟಿ ಕಾಣಿಕೆಯ ಮೂಲ ಕಾಣಿಕೆಯಾಗಿ 9 ಲಕ್ಷ ರು. ನೀಡಿದ್ದು, ಮುಂದೆ ಇನ್ನಷ್ಟು ನೀಡುವ ಭರವಸೆ ನೀಡಿದರು.