ಗಗನಚುಕ್ಕಿ ಜಲಪಾತಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ, ಪರಿಶೀಲನೆ

KannadaprabhaNewsNetwork |  
Published : Jul 23, 2024, 12:41 AM IST
22ಕೆಎಂಎನ್ ಡಿ32,33,34 | Kannada Prabha

ಸಾರಾಂಶ

ಗಗನಚುಕ್ಕಿ ಹಾಗೂ ಭರಚುಕ್ಕಿ ಎರಡು ಜಲಪಾತಗಳಿಂದ ನೊರೆ ಹಾಲಿನಂತೆ ದುಮ್ಮಿಕ್ಕಿ ಹರಿಯುವ ನೀರಿನ ದೃಶ್ಯವನ್ನು ಕೆಲಕಾಲ ವೀಕ್ಷಿಸಿದ ಡೀಸಿ ಡಾ.ಕುಮಾರ ಮಾತನಾಡಿ, ಪ್ರವಾಸಿಗರು ನದಿ ಬಳಿ ತೆರಳದಂತೆ ಬಿಗಿ ಭದ್ರತೆ ಕೈಗೊಳ್ಳಬೇಕು. ಹೋಂ ಗಾರ್ಡ್ ಗಳು ಸ್ಥಳದಲ್ಲೇ ಇದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತಕ್ಕೆ ಡೀಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರ ಸಂಜೆ ಗಗನಚುಕ್ಕಿ ಜಲಪಾತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹಾಗೂ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸ್ಥಳೀಯವಾಗಿ ಕೈಗೊಂಡಿರುವ ಭದ್ರತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗಗನಚುಕ್ಕಿ ಹಾಗೂ ಭರಚುಕ್ಕಿ ಎರಡು ಜಲಪಾತಗಳಿಂದ ನೊರೆ ಹಾಲಿನಂತೆ ದುಮ್ಮಿಕ್ಕಿ ಹರಿಯುವ ನೀರಿನ ದೃಶ್ಯವನ್ನು ಕೆಲಕಾಲ ವೀಕ್ಷಿಸಿದ ಡೀಸಿ ಡಾ.ಕುಮಾರ ಮಾತನಾಡಿ, ಪ್ರವಾಸಿಗರು ನದಿ ಬಳಿ ತೆರಳದಂತೆ ಬಿಗಿ ಭದ್ರತೆ ಕೈಗೊಳ್ಳಬೇಕು. ಹೋಂ ಗಾರ್ಡ್ ಗಳು ಸ್ಥಳದಲ್ಲೇ ಇದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಇದೇ ವೇಳೆ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಂದ ಸುಮಾರು 60 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟಿರುವುದರಿಂದ ಶಿವನಸಮುದ್ರದ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳೆರಡು ಗಗನದಿಂದ ನೊರೆಹಾಲಿನಂತೆ ಭೋರ್ಗೆರೆಯುತ್ತಾ ದುಮ್ಮಿಕ್ಕಿ ಹರಿಯುವ ರಮಣೀಯ ದೃಶ್ಯ ನೋಡುಗರ ಗಮನ ಸೆಳೆಯಿತು.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 122.75 ಅಡಿ

ಒಳ ಹರಿವು – 46,843 ಕ್ಯುಸೆಕ್

ಹೊರ ಹರಿವು – 51,509 ಕ್ಯುಸೆಕ್

ನೀರಿನ ಸಂಗ್ರಹ – 46.634 ಟಿಎಂಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ