ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಭೇಟಿ

KannadaprabhaNewsNetwork |  
Published : Feb 06, 2024, 01:33 AM IST
5ಎಚ್ಎಸ್ಎನ್5 : ಪಟ್ಟಣದ ವಿ.ಆರ್. ಕನ್ವೆನ್ಷನ್ ಹಾಲ್ ನಲ್ಲಿ ರೋಟರಿ ಕ್ಲಬ್ ವತಿಯಿಂದ  ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಪ್ರಾರಂಭದಿಂದಲೂ ರೋಟರಿ ಸಂಸ್ಥೆ ಸಮಾಜ ಸೇವೆ ಹಾಗೂ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಹೇಳಿದರು. ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿ

ಕನ್ನಡಪ್ರಭ ವಾರ್ತೆ ಬೇಲೂರು

ಪ್ರಾರಂಭದಿಂದಲೂ ರೋಟರಿ ಸಂಸ್ಥೆ ಸಮಾಜ ಸೇವೆ ಹಾಗೂ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಹೇಳಿದರು.

ಪಟ್ಟಣದ ವಿ.ಆರ್. ಕನ್ವೆನ್ಷನ್ ಹಾಲ್‌ನಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಸಮಾಜ ಸೇವೆಯಿಂದ ಮಾದರಿಯಾಗಿದೆ. ದುರ್ಬಲ ಹಾಗೂ ಬಡ ವಿದಾರ್ಥಿಗಳ ಏಳಿಗೆಗಾಗಿ ರೋಟರಿ ಸಂಸ್ಥೆ ಪ್ರಾರಂಭದಿಂದಲೂ ಶ್ರಮಿಸುತ್ತಿದೆ. ಮುಂದೆಯೂ ಇಂಥ ಒಳ್ಳೆಯ ಕಾರ್ಯಗಳಿಗೆ ಹೊಸ ಪದಾಧಿಕಾರಿಗಳು, ಅದರಲ್ಲೂ ಮಹಿಳೆಯರು, ಯುವಕರು ಶ್ರಮಿಸಬೇಕು. ರೋಟರಿ ಕ್ಲಬ್‌ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗುತ್ತಿದೆ. ನಿಸ್ವಾರ್ಥ ಭಾವನೆಯಿಂದ ಸಂಘಟನೆಯಲ್ಲಿ ತೊಡಗಿದಲ್ಲಿ ಮಾತ್ರ ನಿಜವಾಗಿಯೂ ಯಶಸ್ಸು ಸಾಧ್ಯ. ಅದಕ್ಕೆ ವೇದಿಕೆಯಾಗಿ ರೋಟರಿ ಸಂಸ್ಥೆ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಹಾಯಕ ಗವರ್ನರ್ ವಿನೋದ್ ಶೆಟ್ಟಿ ಮಾತನಾಡಿ, ‘ನಾವು ಬದುಕುವುದರ ಜತೆಗೆ ಸಮಾಜಕ್ಕಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ರೋಟರಿ ಕ್ಲಬ್‌ ಪರಿಣಾಮಕಾರಿಯಾದ ದೊಡ್ಡ ವೇದಿಕೆಯಾಗಿದೆ. ವಿಶ್ವದರ್ಜೆಯ ಗೌರವವನ್ನು ಹೊಂದಿರುವ ರೋಟರಿ ಕ್ಲಬ್‌ನ ಸೇವಾಕಾರ್ಯಗಳು ಸಂಸ್ಥೆಯ ಏಳಿಗೆಗೆ ಬಹುಮುಖ್ಯ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರನ್ನು ಸನ್ಮಾಸಿ ಗೌರವಿಸಲಾಯಿತು. ಇದೇ ವೇಳೆ ರೋಟರಿ ಕ್ಲಬ್‌ಗೆ ನೂತನ ಸದಸ್ಯರಾಗಿ ಎಸ್.ಎಸ್. ನಾಗೇಂದ್ರ, ರಾಘವೇಂದ್ರ ಸೇರ್ಪಡೆಗೊಂಡರು. ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಚಿದನ್, ಕಾರ್ಯದರ್ಶಿ ಎನ್. ಶಂಭುಗೌಡ, ವಲಯದ ಲೆಫ್ಟಿನೆಂಟ್ ಕೆ.ಕೆ. ಸಂದೀಪ್, ಬೇಲೂರು ಕ್ಲಬ್‌ನ ಟಿ.ಎಸ್.ಸಂದೇಶ್, ಎಸ್. ಗಣೇಶ್, ವೈ.ಡಿ. ಲೋಕೇಶ್, ಚೇತನ್ ಕುಮಾರ್, ಮುರಳಿ, ಬಿ.ಎಂ.ರಂಗನಾಥ್, ಡಿ.ಪಿ. ಶ್ರೀಧರ್, ಬಿ.ಬಿ. ಶಿವರಾಜು ಸೇರಿದಂತೆ ಇತರ ಸದಸ್ಯರು ಇದ್ದರು.ಬೇಲೂರು ಪಟ್ಟಣದ ವಿ.ಆರ್. ಕನ್ವೆನ್ಷನ್ ಹಾಲ್‌ನಲ್ಲಿ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಬಿ.ಸಿ ಗೀತಾ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋವಿನಜೋಳ ಖರೀದಿಯಲ್ಲಿ ಪಾರದರ್ಶಕತೆ ಇರಲಿ: ಡಿಸಿ
ಶ್ರೀಬಸವೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹಸಂಗಮ