ಗ್ರಾಮೀಣ ಪ್ರದೇಶವಾದ ಶಿರ್ವದಲ್ಲಿ 57 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವ ರೋಟರಿ ಸಂಸ್ಥೆಗೆ ರೋ.ಅ.ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಅಧಿಕೃತ ಸಂದರ್ಶನ ನೀಡಿದರು.
ಕಾಪು: ಗ್ರಾಮೀಣ ಪ್ರದೇಶವಾದ ಶಿರ್ವದಲ್ಲಿ 57 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವ ರೋಟರಿ ಸಂಸ್ಥೆಗೆ ರೋ.ಅ.ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಅಧಿಕೃತ ಸಂದರ್ಶನ ನೀಡಿದರು.
ಶಿರ್ವ ರಾಜ್ಯಹೆದ್ದಾರಿ ಪಾಲಮೆ ಕ್ರಾಸ್ ತಿರುವಿನಲ್ಲಿ ಕನ್ವಿಕ್ ಮಿರರ್ ಲೋಕಾರ್ಪಣೆ, ಶಿರ್ವ ಹಿಂದೂ ಪ್ರೌಢ ಶಾಲೆಗೆ ಲೇಸರ್ ಪ್ರಿಂಟರ್ ಹಸ್ತಾಂತರ, ಶಿರ್ವ ಪದವು ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್ ಜೋಡಣೆ, ಮಧ್ಯಾಹ್ನ ಪಾದೂರು ರೋಟರಿ ಸಮುದಾಯದಳದ ನವೀಕೃತ ಸಭಾಭವನದ ಲೋಕಾರ್ಪಣೆ, ಸಂಜೆ ಬಂಟಕಲ್ಲು ರೋಟರಿ ಭವನದಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ವಿಷಜಂತು ಕಡಿತಕ್ಕೆ ಒಳಗಾದವರಿಗೆ ಗಿಡಮೂಲಿಕೆ ಔಷಧಿ ನೀಡಿ ಜೀವ ಉಳಿಸುವ ಕಾರ್ಯದಲ್ಲಿ ನಿರಂತರವಾಗಿ ಸೇವೆ ನೀಡುತ್ತಿರುವ ಹಿರಿಯ ನಾಟಿ ವೈದ್ಯೆ ಶಾಲಿನಿ ಅಮೀನ್ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಊದಲ್ಲಿ ಸಾಹಿತ್ಯ, ಸಮಾಜಸೇವೆ, ರೋಟರಿ ಸಹಿತ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಹಿರಿಯ ಸಾಧಕರಾದ ಬಿ.ಪುಂಡಲೀಕ ಮರಾಠೆ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಞತೆಯನ್ನು ಶಿರ್ವ ರೋಟರಿ ಅಧ್ಯಕ್ಷೆ ಜೆಸಿಂತಾ ಡಿಸೋಜಾ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮಗಳಲ್ಲಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಜಿಲ್ಲಾ ರೋಟರಿ ಪ್ರಥಮ ಮಹಿಳೆ ವೀನಾ ಎಂ. ಭಟ್,ವಲಯ ಸಹಾಯಕ ಗವರ್ನರ್ ಸುರೇಶ್ ನಾಯಕ್, ವಲಯ ಸೇನಾನಿ ವಿಷ್ಣುಮೂರ್ತಿ ಸರಳಾಯ, ಕಾರ್ಯದರ್ಶಿ ಪ್ರಾನ್ಸಿಸ್ ಕಸ್ತಲಿನೊ, ಸಹಿತ ರೋಟರಿ ಪದಾಧಿಕಾರಿಗಳು, ಸ್ಥಳೀಯ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಸಂಜೆ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಕು.ಅನೋಲಾ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಾನ್ಸಿಸ್ ಕಸ್ತಲಿನೊ ವರದಿ ಓದಿದರು.ಹಿರಿಯರಾದ ರಘುಪತಿ ಐತಾಳ್, ಮೆಲ್ವಿನ್ ಡಿಸೋಜಾ,ಪರಿಚಯಿಸಿದರು. ವಲಯ ಸಹಾಯಕ ಗವರ್ನರ್ ಸುರೇಶ್ ನಾಯಕ್ ಕ್ಲಬ್ ಪತ್ರಿಕೆ ಮಲ್ಲಿಕಾ ಬಿಡುಗಡೆಗೊಳಿಸಿದರು. ಪ್ರಧಾನ ಸಂಪಾದಕ ಹೊನ್ನಯ್ಯ ಶೆಟ್ಟಿಗಾರ್ ಸಹಕರಿಸಿದರು. ಡಾ. ಅರುಣ್ ಕುಮಾರ್ ಹೆಗ್ಡೆ, ರಪಾಯಲ್ ಮತಾಯಸ್, ಹೆರಾಲ್ಡ್ ಕುಟಿನೊಹೊ, ಮೈಕಲ್ ಮಥಾಯಸ್,ಮೌರಿಸ್ ಕ್ವಾಡ್ರಸ್, ಲೂಕಾಸ್ ಡಿಸೋಜಾ,ಸಾರ್ಜಂಟ್ ಗ್ರೇಸಿ ಕರ್ಡೋಜಾ, ಸಹಿತ ವಲಯದ ಪದಾಧಿಕಾರಿಗಳು, ದಾನಿಗಳು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಜಯಕೃಷ್ಣ ಆಳ್ವ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.