ಕನ್ನಡಪ್ರಭ ವಾರ್ತೆ ಮೈಸೂರು
ಮಹಾರಾಜ ಸರ್ಕಾರಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಇತಿಹಾಸ ವೇದಿಕೆಯು ಭಾನುವಾರ ಆಯೋಜಿಸಿದ್ದ ಇತಿಹಾಸ ಸಂಭ್ರಮ-3 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸವನ್ನು ಕೇವಲ ಘಟನೆಗಳ ದಾಖಲೆಯಾಗಿ ಬೋಧಿಸದೆ, ವಾಸ್ತವಾಂಶಗಳು ಮತ್ತು ಸಂಶೋಧನಾ ದೃಷ್ಟಿಕೋನದೊಂದಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಪ್ರತಿಯೊಬ್ಬ ಇತಿಹಾಸ ಉಪನ್ಯಾಸಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಇತಿಹಾಸ ಬೋಧನೆ ಅತ್ಯಂತ ಸವಾಲಿನ ಕೆಲಸವಾಗಿದೆ. ಹಿಂದಿನ ಘಟನೆಗಳನ್ನು ವಿವರಿಸುವಾಗ ವಾಸ್ತವದ ನೆಲೆಗಟ್ಟಿನಲ್ಲಿ ಪರಿಶೀಲಿಸಿ, ಸರಿ- ತಪ್ಪುಗಳನ್ನು ವಿಮರ್ಶಾತ್ಮಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಇತಿಹಾಸದ ಹಲವು ಸಂಗತಿಗಳು ಕೇಳಲು ಸತ್ಯವೆನಿಸಿದರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಬಹುದು. ಅಂತಹ ಸಂದರ್ಭಗಳಲ್ಲಿ ಸಂಶೋಧನೆ ಮತ್ತು ದಾಖಲೆಗಳ ಆಧಾರದ ಮೇಲೆ ಸತ್ಯವನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವುದು ಇಂದಿನ ಉಪನ್ಯಾಸಕರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.ಇತಿಹಾಸ ಎಂದರೆ ಬರೀ ರಾಜರು, ಪಾಳೇಗಾರರಷ್ಟೇ ಅಲ್ಲ, ಅದು ಜನಸಾಮಾನ್ಯರ ಬದುಕಿನ ಚಿತ್ರಣ. ಅದು ಅಂದಿನ ಜನರ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಹೀಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯಕ್ರಮದೊಂದಿಗೆ ಇತಿಹಾಸವನ್ನೂ ಓದಿಕೊಳ್ಳಬೇಕು ಎಂದರು.
ಈಗ ಜ್ಞಾನವೊಂದಿದ್ದರೆ ಸಾಕಾಗದು. ಅದರೊಂದಿಗೆ ಕೌಶಲ ಮತ್ತು ಮೌಲ್ಯವೂ ಬೇಕು. ಅಂಕ ಮುಖ್ಯವಲ್ಲ, ಮನಸ್ಥಿತಿ ಮುಖ್ಯ. ಸೃಜನಶೀಲತೆ, ಕ್ರಿಯಾಶೀಲತೆ ಇರಬೇಕು. ಕಾಲಕ್ಕೆ ತಕ್ಕಂತೆ ಜ್ಞಾನವನ್ನೂ ಉನ್ನತೀಕರಣಗೊಳಿಸಿಕೊಳ್ಳಬೇಕು. ಎಐ ತಂತ್ರಜ್ಞಾನದಿಂದ ಕೆಲಸ ಹೋಗಲ್ಲ. ಅದು ಹೊಸ ಅವಕಾಶವನ್ನು ಸೃಷ್ಟಿಸುತ್ತದೆ. ಇಂತಹ ತಂತ್ರಜ್ಞಾನ ಬಳಕೆಗೆ ಸಜ್ಜಾಗಬೇಕಿದೆ ಎಂದು ಅವರು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎ. ರಾಮೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ. ಮಹದೇವ್, ಪ್ರಾಂಶುಪಾಲರಾದ ಎನ್. ಉದಯಶಂಕರ್, ಎನ್.ಎಂ. ಶಿವಪ್ರಕಾಶ್, ಬಿ.ಸಿ. ಶಿವಮಲ್ಲು, ಎಂ.ಎನ್. ಮಹದೇವಯ್ಯ, ಜಿಲ್ಲಾ ಇತಿಹಾಸ ವೇದಿಕೆಯ ಅಧ್ಯಕ್ಷ ಹೆಚ್.ಬಿ. ವಾಸು, ಗೌರವಾಧ್ಯಕ್ಷ ಎಂ.ಸಿ. ಚಂದ್ರಶೇಖರ್, ಪದಾಧಿಕಾರಿಗಳಾದ ಪೂರ್ಣಚಂದ್ರ, ಉಮೇಶ್, ವಿನೀಶ್, ಮಹೇಶ್, ಪುಟ್ಟಸ್ವಾಮಿ, ಉಮೇಶ್ ಮೊದಲಾದವರು ಇದ್ದರು. ನಂಜುಂಡಯ್ಯ ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.
ಕೋಟ್...
- ಎಂ.ಪಿ. ನಾಗಮ್ಮ, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ