ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನ ಗೋ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ದೇಸಿ ತಳಿಗಳು ವಿನಾಶದ ಅಂಚಿನಲ್ಲಿದ್ದು, ಅವುಗಳನ್ನು ಉಳಿಸಿ ಬೆಳಸುವಂತ ಮಹತ್ವದ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಮಲೆನಾಡು ಗಿಡ್ಡ ತಳಿಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಅನುಕೂಲವಾಗಿದ್ದು ಹಲವಾರು ಮಾರಕ ರೋಗಗಳಿಗೆ ರಾಮಬಾಣವಾಗಿದೆ ಎಂದರು.ಅದರ ಸಗಣಿ ಉತ್ತಮ ಗೊಬ್ಬರವಾಗಿದ್ದು, ರೈತನ ಉತ್ತಮ ಫಸಲುಗಳಿಗೆ ನಾಂದಿಯಾಗಿದೆ. ಎಲ್ಲರು ಇದನ್ನು ಸಾಕುವ ಮೂಲಕ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಇದರ ಒಂದು ಲೋಟ ಹಾಲು, ಜರ್ಸಿ ಹಸುಗಳ 7 ಲೀಟರ್ ಹಾಲಿಗೆ ಸಮ ಎಂದು ತಿಳಿಸಿದರು.
ಕುಂತನಹಳ್ಳಿ ದೇವರಾಜು, ಗೋ ವಿತರಣಾ ಕಾರ್ಯಕ್ರಮದಲ್ಲಿ ಒಂದು ಜೊತೆ ಹಸು ನೀಡಲಾಗುತ್ತಿದ್ದು, ಪಡೆದುಕೊಂಡವರು ಅದನ್ನು ಉತ್ತಮ ರೀತಿಯಲ್ಲಿ ಪೋಷಣೆ ಮಾಡುವಂತೆ ತಿಳಿಸಿದರು.
ನಂತರ ಹೆಸರು ನೊಂದಾಯಿಸಿದವರಿಗೆ ಉಚಿತವಾಗಿ ಹಸುಗಳನ್ನು ನೀಡಲಾಯಿತು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ, ಎಂ. ಪ್ರಕಾಶ್, ಕರವೇ ತಾಲೂಕು ಅಧ್ಯಕ್ಷ ಬಾಲರಾಜ್, ಪುಣ್ಯಕೋಟಿ ಗೋಶಾಲೆಯ ಸಿದ್ದೇಶ್ ಕುಮಾರ್, ಕುಂತನಹಳ್ಳಿ ದೇವರಾಜು, ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ, ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಧ್ಯಕ್ಷ ಅಕ್ಷಯ್ ಆಳ್ವಾ, ಕರವೇ ಜಿಲ್ಲಾಧ್ಯಕ್ಷ ಪ್ರವೀಣ್, ಮಂಜೇಗೌಡ, ಎಂ.ಜೆ. ಕಿರಣ್ ಕುಮಾರ್, ಮಹೇಶ್ ಗೌಡ, ಭಾರ್ಗವ ಶರ್ಮ, ಡಿ. ರಘು, ಅತ್ತಳ್ಳಿ ಸತೀಶ್, ಡಾ. ನಾಗೇಶ್, ಸತ್ಯಮೂರ್ತಿ, ಗುರುರಾಜ್ ಆಚಾರ್ಯ, ಬಿ.ಆರ್. ಮಂಜುನಾಥ ಪ್ರಭು, ರಾಘವೇಂದ್ರ, ನಯೀಂ ಪಾಷ, ಉಮಾಯೂನ್ ಪಾಷ, ರಾಜಣ್ಣ, ಬಾಲು, ಶಿವಣ್ಣ ಮೊದಲಾದವರು ಇದ್ದರು.
ಬಕ್ಸ್ ಸುದ್ದಿ
ವೈ.ಎಸ್. ರಾಮಸ್ವಾಮಿ, ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ.