ರಪ್ತು ದೇಶದ ಆದಾಯವನ್ನೂ ಹೆಚ್ಚಿಸುತ್ತದೆ: ಟಿ. ದಿನೇಶ್

KannadaprabhaNewsNetwork |  
Published : Jun 25, 2024, 12:33 AM IST
2 | Kannada Prabha

ಸಾರಾಂಶ

ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜೊತೆಗೆ ದೇಶದ ಆದಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ತಿಳಿಸಿದರು.

ನಗರದ ಹೋಟೆಲ್ ಪ್ರೆಸಿಡೆಂಟ್ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರವು ಆಯೋಜಿಸಿರುವ ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದನ್ನು ಮಾಡಿಕೊಂಡಿದ್ದೇವೆ. ಕರ್ನಾಟಕವು ರಪ್ತು ಮಾಡುವುದರಲ್ಲಿ 4ನೇ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯವು ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದು ಅವರು ಹೇಳಿದರು.

ಭಾರತ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ರಫ್ತು ಉತ್ತೇಜನ ಕೇಂದ್ರವನ್ನು ಸ್ಥಾಪಿಸಿದೆ. ಮೈಸೂರು ಜಿಲ್ಲೆಯಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶಗಳಿವೆ. ಪ್ರತಿ ವರ್ಷ ಶೇ.5 ರಫ್ತನ್ನು ಹೆಚ್ಚಳ ಮಾಡಬೇಕು ಎಂದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಸ್. ಬಾಬು ನಾಗೇಶ್ ಮಾತನಾಡಿ, ಯುವ ಉದ್ಯಮಿಗಳು 6 ದಿನಗಳ ರಪ್ತು ನಿರ್ವಹಣಾ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ. ರಪ್ತು ಕೈಗಾರಿಕೆಗಳ ಆರ್ಥಿಕ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆಯು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್‌. ಸುರೇಶ್ ಕುಮಾರ್ ಜೈನ್ ಮಾತನಾಡಿ, ಮೈಸೂರಿನಲ್ಲಿ ರಪ್ತು ಕೇಂದ್ರ ಸ್ಥಾಪನೆ ಆಗುತ್ತಿದೆ. ಕಟ್ಟಡ ಈಗಾಗಲೇ ಪ್ರಾರಂಭವಾಗಿದೆ. ರಫ್ತಿನಲ್ಲಿ ಪ್ಯಾಕಿಂಗ್ ಉತ್ತಮ. ನಮ್ಮ ವಸ್ತುಗಳು ತಲುಪಬೇಕಾದ ಸ್ಥಳವನ್ನು ಕೆಡದಂತೆ ಸಕಾಲದಲ್ಲಿ ತಲುಪಬೇಕು. ರಪ್ತು ದೇಶದ ಆದಾಯವನ್ನು ಹೆಚ್ಚಿಸುತ್ತದೆ. ರಫ್ತಿನಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಶೇ.45 ರಷ್ಟು ಇದೆ ಎಂದರು.

ನೋಟು ಮುದ್ರಣವನ್ನು ಸಹ ಮೈಸೂರಿನಲ್ಲಿ ಮಾಡುತ್ತೇವೆ. ಮೈಸೂರು ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಸೆಮಿ ಕಂಡಕ್ಟರ್ ಗಳ ಉತ್ಪಾದನಾ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದು ಹೇಳಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕಿ ಮೇಘಲಾ ಹಾಗೂ ಕೈಗಾರಿಕೋದ್ಯಮಿಗಳು ಇದ್ದರು.

----

ಕೋಟ್...

ಯಾವುದೇ ಪದಾರ್ಥವನ್ನು ನಾವು ರಪ್ತು ಮಾಡಲು ರಾಸಾಯನಿಕ ಮುಕ್ತವಾಗಿ ಇರಬೇಕು. ನಾವು ರಪ್ತು ಮಾಡುವ ಉತ್ಪಾದನೆ ಗುಣಮಟ್ಟದಿಂದ ಕೂಡಿರಬೇಕು. ಮೈಸೂರಿನಲ್ಲಿ ಈಗಾಗಲೇ ಸುಮಾರು 165 ಜನ ರಪ್ತು ಮಾಡುತ್ತಾ ಇದ್ದಾರೆ. ಇನ್ನು ಹೆಚ್ಚಿನ ಜನರು ದೇಶ ವಿದೇಶಕ್ಕೆ ರಪ್ತು ಮಾಡಬೇಕು.

- ಕೆ.ಬಿ. ಲಿಂಗರಾಜು, ಅಧ್ಯಕ್ಷರು, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ