ಕನ್ನಡಪ್ರಭ ವಾರ್ತೆ ಸುತ್ತೂರು
ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಎಚ್. ರವಿ ಮಾತನಾಡಿ, ಜಿಲ್ಲೆಯಲ್ಲಿ ಮಣ್ಣಿನ ಆರೋಗ್ಯ ಶೇ. 52.07ರಷ್ಟು ಅನಾರೋಗ್ಯದಿಂದ ಕೂಡಿದೆ. ಶೇ. 48 ರಷ್ಟು ಮಣ್ಣಿನ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. ರೈತರು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕಡೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅಂಗಡಿ ಮಾತನಾಡಿ, ಕೃಷಿ ಸಂಬಂಧಿತ ಎಲ್ಲ ಸರ್ಕಾರಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರ ಜೊತೆ ವಿಕಸಿತ ಕೃಷಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ತಾಂತ್ರಿಕತೆಗಳು ಹಾಗೂ ಸರ್ಕಾರಿ ಯೋಜನೆಗಳನ್ನು ರೈತರಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ನಾಗರಾಜು ಮಾತನಾಡಿ, ಕಳೆದ 13 ದಿನಗಳಿಂದ ಮೈಸೂರು ಜಿಲ್ಲೆಯಾದ್ಯಂತ ವಿವಿಧ ಗ್ರಾಮಗಳಲ್ಲಿ ಪಶು ಸಂಬಂಧಿತ ಸಮಸ್ಯೆಗಳಾದ ಕಾಲುಬಾಯಿ ಜ್ವರ, ಕೆಚ್ಚಲು ಬಾವು ಹಾಗೂ ಇನ್ನಿತರ ಸಮಸ್ಯೆಗಳಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಂಶೋಧನಾ ಇಲಾಖೆಯ ವಿಜ್ಞಾನಿಗಳೊಂದಿಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಬೆಂಗಳೂರಿನ ಐಸಿಎಆರ್ ಎನ್‌ಐಎಎನ್‌ಪಿ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಕಾಜಲ್ ಸಂಕರ್ ರಾಯ್ ಮಾತನಾಡಿ, ನಾವು ಕೈಗೊಂಡ ಸಂಶೋಧನೆಗಳು ರೈತರ ಮಟ್ಟದಲ್ಲಿ ಹೇಗೆ ಉಪಯೋಗವಾಗುತ್ತಿದೆ ಎಂದು ಈ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಿಂದ ತಿಳಿಯುವಂತಾಯಿತು. ಇದರಿಂದಾಗಿ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವ ಪ್ರೇರೇಪಣೆ ದೊರೆತಂತಾಯಿತು ಎಂದರು.
ಪ್ರಗತಿಪರ ರೈತರಾದ ಕುರುಬೂರು ಸಿದ್ದೇಶ್, ಮಹದೇವಮ್ಮ, ಶಿವಮಲ್ಲಪ್ಪ ಇದ್ದರು. ಕಿರಗಸೂರು ಶಂಕರ್ ರೈತರು ಸಮಸ್ಯೆಗಳನ್ನು ಇಲಾಖೆಯ ಅಧಿಕಾರಿಗಳೊಂದಿಗೆ ಹಂಚಿಕೊಂಡು ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಡಾ. ಬಿ.ಎನ್. ಜ್ಞಾನೇಶ್ ಸ್ವಾಗತಿಸಿದರೆ, ಡಾ. ಜಿ.ಎಂ. ವಿನಯ್ ವಂದಿಸಿದರು. ಡಾ. ವೈ.ಪಿ. ಪ್ರಸಾದ್ ನಿರೂಪಿಸಿದರು.