ಮುಂಡಗೋಡದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ತರಬೇತಿ ಶಿಬಿರ

KannadaprabhaNewsNetwork |  
Published : Dec 06, 2024, 08:58 AM IST
ಮುಂಡಗೋಡ: ೧) ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್, ಮುಂಡಗೋಡ ತಾಲ್ಲೂಕು ಕಬಡ್ಡಿ ಅಸೋಸಿಯೇಷನ್ ಹಾಗೂ ಜೈ ಮಾತಾ ಸ್ಪೋರ್ಟ್ಸ್ ಕ್ಲಬ್ ಮೈನಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ  ತಾಲೂಕಿನ ಮೈನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ೨೦ ವರ್ಷದೊಳಗಿನ ಬಾಲಕರ ಕಬಡ್ಡಿ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭ೨) ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾವರಣದ ಸುತ್ತ ತೆಂಗಿನ ಸಸಿ ನೆಡಲಾಯಿತು.             | Kannada Prabha

ಸಾರಾಂಶ

ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು, ತಾಳ್ಮೆ ಕ್ರೀಡಾಪಟುಗಳಿಗೆ ಅತ್ಯಗತ್ಯ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆ ಬೆಳೆಸಿಕೊಂಡರೆ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ.

ಮುಂಡಗೋಡ: ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ರಾಜ್ಯಮಟ್ಟದ ಹಿರಿಯ ಕ್ರೀಡಾಪಟು ಪಾಪಚ್ಚನ್ ತಿಳಿಸಿದರು.

ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್, ತಾಲೂಕು ಕಬಡ್ಡಿ ಅಸೋಸಿಯೇಷನ್ ಹಾಗೂ ಜೈಮಾತಾ ಸ್ಪೋರ್ಟ್ಸ್ ಕ್ಲಬ್ ಮೈನಳ್ಳಿ ಇವರ ಆಶ್ರಯದಲ್ಲಿ ತಾಲೂಕಿನ ಮೈನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ೨೦ ವರ್ಷದೊಳಗಿನವರ ಕಬಡ್ಡಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ಶಿಸ್ತು, ತಾಳ್ಮೆ ಕ್ರೀಡಾಪಟುಗಳಿಗೆ ಅತ್ಯಗತ್ಯ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆ ಬೆಳೆಸಿಕೊಂಡರೆ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ ಎಂದರು.

ಸಾಮಾಜಿಕ ಧುರೀಣ ಸಿ.ಕೆ. ಅಶೋಕ ಮಾತನಾಡಿ, ಮೈನಳ್ಳಿ ಗ್ರಾಮದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಕ್ರೀಡಾಪಟುಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಮಾರ್ಗದರ್ಶಕರನ್ನು ಮರೆಯಬಾರದು. ಹಿರಿಯರಿಗೆ ಗೌರವ ನೀಡಬೇಕು ಎಂದರು.

ಸಿ.ಕೆ. ಮಧುಸೂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ ಹೆಗಡೆ, ಗ್ರಾಪಂ ಅಧ್ಯಕ್ಷೆ ಸಕ್ಕುಬಾಯಿ ಪಟಕಾರೆ, ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ರೆಫ್ರಿ ಕನ್ವಿನರ್ ಸಿ.ಕೆ. ವಿಜಯಕುಮಾರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಗು ಅವನೆ, ಗೋಪಾಲ ಕಾನಸೆ, ಉದಯಕುಮಾರ ನಾಯ್ಕ, ರಾಜು ನಾಯರ ಡಾನಿಯಲ್ ಫರ್ನಾಂಡೀಸ್, ಬಮ್ಮು ಪಟಕಾರೆ, ಯಮ್ಮು ಜೋರೆ, ಶರೀಪಸಾಬ್, ಮಹ್ಮದ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾವರಣದ ಸುತ್ತ ತೆಂಗಿನ ಸಸಿ ನೆಡಲಾಯಿತು.ಐವರು ಶಿಕ್ಷಕರಿಗೆ ನೇಷನ್ ಬಿಲ್ಡರ್ ಅವಾರ್ಡ್

ಹೊನ್ನಾವರ: ತಾಲೂಕಿನ ಆಯ್ದ ಐದು ಮಂದಿ ಶಿಕ್ಷಕರಿಗೆ ರೋಟರಿ ಕ್ಲಬ್ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು.ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಮತ್ತು ಅರ್ಚನಾ ಅವರು ಶಿಕ್ಷಕರನ್ನು ಸನ್ಮಾನಿಸಿದರು. ಶಿಕ್ಷಕ ದಿನಾಚರಣೆ ಅಂಗವಾಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ನಡೆಸಿದ ಆನ್‌ಲೈನ್ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ರೋಟರಿ ಅಧ್ಯಕ್ಷ ಸೂರ್ಯಕಾಂತ ಸಾರಂಗ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಯೋಜಕರಾದ ರೋ. ಜಿ.ಟಿ. ಹೆಬ್ಬಾರ್, ರೋ. ವಿ ಜಿ ನಾಯ್ಕ, ರೋ. ಮಹೇಶ್ ಕಲ್ಯಾಣಪುರ ಮತ್ತು ಎಸ್.ಎನ್. ಹೆಗಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಎಂ. ಹೆಗಡೆ ವಂದಿಸಿದರು. ದಿನೇಶ ಕಾಮತ್ ನಿರೂಪಿಸಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು