ಬೆಳಗಾವಿ: ಜೆಪಿಸಿ ಸದಸ್ಯರಾಗಲೀ ಅಥವಾ ಪಕ್ಷದ ವರಿಷ್ಠರಾಗಲೀ ವಕ್ಫ್ ವಿರುದ್ಧ ಹೋರಾಟ ಕೈಬಿಡುವಂತೆ ನಮಗೆ ಹೇಳಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಬೆಳಗಾವಿ: ಜೆಪಿಸಿ ಸದಸ್ಯರಾಗಲೀ ಅಥವಾ ಪಕ್ಷದ ವರಿಷ್ಠರಾಗಲೀ ವಕ್ಫ್ ವಿರುದ್ಧ ಹೋರಾಟ ಕೈಬಿಡುವಂತೆ ನಮಗೆ ಹೇಳಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್‌ಫ್ಯಾಕ್ಟ್ ತಾವು ಹೋರಾಟ ಮಾಡಿ ನೀಡಿದ ವರದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಬಹಳಷ್ಟು ನೆರವಾಗಲಿದೆ ಎಂದು ಜೆಪಿಸಿ ಚೇರ್ಮನ್ ಜಗದಂಬಿಕಾ ಪಾಲ್ ಹೇಳಿದ್ದಾರೆ. ತಮ್ಮ ಹೋರಾಟ ಕೊನೆಗೊಳ್ಳುವವರೆಗೆ ಮತ್ತು ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರುವವರೆಗೆ ವಕ್ಫ್ ತಟಸ್ಥವಾಗಿರಲು ಕೇಂದ್ರದಿಂದ ಸೂಚನೆ ಹೊರಡಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಹೇಳಿದರು.ನಾನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷನಿದ್ದಾಗ ಕೊಟ್ಟಿರುವ ವರದಿಯಲ್ಲಿ ವಾಣಿಜ್ಯ ಆಸ್ತಿಗೆ ಸಂಬಂಧಿಸಿ 2,500 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದೇ ವೆ. ಆದರೆ, ರೈತರಿಗೆ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ ಎಂದು ಸ್ಪಷ್ಪಪಡಿಸಿದ ಅವರು, ಬಿಜೆಪಿ ಅವಧಿಯಲ್ಲೇ ರೈತರಿಗೆ ಹೆಚ್ಚಿನ ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರ ಅವಧಿಯಲ್ಲಿ ನಾವು ಕೊಟ್ಟಿರುವ ನೋಟಿಸ್‍ಗೂ, ರೈತರಿಗೂ ಸಂಬಂಧವೇ ಇಲ್ಲ ಎಂದು ಹೇಳಿದರು.
ಪಕ್ಷದಲ್ಲಿನ ಅಸಮಾಧಾನಿತ ನಾಯಕರ ವಿರುದ್ಧ ವಿಜಯೇಂದ್ರ ಜಿದ್ದಾಜಿದ್ದಿಗೆ ಬಿದ್ದಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ರೀತಿ ನಮ್ಮೊಂದಿಗೆ ಜಿದ್ದಿಗೆ ಬೀಳುವುದಕ್ಕಿಂತ, ತಮಗೆ ಕೊಟ್ಟಿರುವ ಜವಾಬ್ದಾರಿಯುತ ಸ್ಥಾನ ಗಟ್ಟಿ ಮಾಡಿಕೊಂಡು ಹೋಗುವ ಅಗತ್ಯವಿದೆ ಎಂದು ಸಲಹೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.