ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಬಿ.ಸಿ.ಶಿವಾನಂದಮೂರ್ತಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಪಾಂಡವಪುರ ಮತ್ತು ಮಂಡ್ಯ ಉಪವಿಭಾಗಾಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶಿವಾನಂದ ಮೂರ್ತಿ ಅವರು ರಾಮನಗರ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತರಾಗಿ (ಮಾರುಕಟ್ಟೆ) ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಂದ ಮೂರ್ತಿ ಅವರನ್ನು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ವರ್ಗಾವಣೆ ಮಾಡಿದೆ.
ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್.ಎಲ್.ನಾಗರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಬಿ.ಸಿ. ಶಿವಾನಂದಮೂರ್ತಿ ಅವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಸದ್ಯ ಡಾ.ಎಚ್.ಎಲ್.ನಾಗರಾಜು ಅವರು ರಜೆ ಮೇಲೆ ತೆರಳಿದ್ದಾರೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಉತ್ತರಾಕಾರಿಯಾಗಿ ಧೀಕ್ಷೆ ಪಡೆಯುತ್ತಿರುವ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗಿದೆ.ಅರ್ಜುನ ಆನೆ ಮೊದಲನೇ ವರ್ಷದ ಪುಣ್ಯಸ್ಮರಣೆ, ಅನ್ನಸಂತರ್ಪಣೆಮಂಡ್ಯ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಕ್ಯಾಪ್ಟನ್ ಅರ್ಜುನ ಅಭಿಮಾನಿಗಳ ಬಳಗದಿಂದ ಮೈಸೂರು ದಸರಾ ಕ್ಯಾಪ್ಟನ್ ಅರ್ಜುನ ಆನೆ ಮೊದಲನೇ ವರ್ಷದ ಪುಣ್ಯ ಸ್ಮರಣೆ ನಡೆಯಿತು.
ಮುಖಂಡ ರಾಜೇಶ್ ಮಾತನಾಡಿ, ಮೈಸೂರು ದಸರಾ ಅಂಬಾರಿ ಖ್ಯಾತಿಯ ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದು, ಎಲ್ಲಾ ಪ್ರೇಕ್ಷಕರನ್ನು ಗಮನ ಸೆಳೆದಿತ್ತು. ಕ್ಯಾಪ್ಟನ್ ಅರ್ಜುನ ಆನೆ ಕಾಡಾನೆ ಕಾರ್ಯಾಚರಣೆಯಲ್ಲಿ ಒಂಟಿ ಸಲಗದ ಜೊತೆ ಹೋರಾಡಿ ವೀರ ಮರಣ ಹೊಂದಿ ಇಂದಿಗೆ ಒಂದು ವರ್ಷ ಕಳೆದಿದೆ. ಇದರ ನೆನಪಿನ ಅಂಗವಾಗಿ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನ ಸಂತರ್ಪಣೆ ನಡೆಯಿತು.ಈ ವೇಳೆ ರಾಜೇಶ್, ರಘು, ದೇವಂತ್, ಸೋಮು, ಮಂಜು, ರಾಜು, ನವೀನ್, ಶಶಾಂಕ್, ಪ್ರಜ್ವಲ್, ಸಂತೋಷ್ ಭಾಗವಹಿಸಿದ್ದರು.