- ಹೈಯರ್ ಪ್ರೈಮರಿ ಮಕ್ಕಳಿಗೆ ಜಿಲ್ಲಾಮಟ್ಟಕ್ಕೆ ಸೀಮಿತ ಸ್ಪರ್ಧೆ - ಹೈಸ್ಕೂಲ್ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಗೆದ್ದರೆ ರಾಜ್ಯಮಟ್ಟಕ್ಕೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯಾರ್ಥಿಗಳಲ್ಲಿ ಪರಿಸರ, ವನ್ಯಜೀವಿ ಮತ್ತು ವನ್ಯ ಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಕನ್ನಡಪ್ರಭದಿಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಜ.18ರಂದು ನಗರದ ಶ್ರೀ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದ ಹಿಂಭಾಗದ ನೂತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಗ್ಗೆ 9.30 ಗಂಟೆಗೆ ದಾವಣಗೆರೆ ನಗರ ಮತ್ತು ತಾಲೂಕು ಹಾಗೂ ಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಜಿಲ್ಲಾ ಮಟ್ಟಕ್ಕೆ ಪಾಲ್ಗೊಳ್ಳಬಹುದು. ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿ ಪಾಲಕರು, ಪುಟ್ಟ ಮಕ್ಕಳ ಒತ್ತಾಸೆ ಮೇರೆಗೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಗಾಗಿ ಪ್ರತ್ಯೇಕವಾಗಿ ಅದೇ ಸ್ಥಳದಲ್ಲಿ ಕನ್ನಡಪ್ರಭದಿಂದ ಸ್ಪರ್ಧೆ ಆಯೋಜಿಸಲಾಗಿದೆ.
ಸೇವ್ ವೈಲ್ಡ್ ಲೈಫ್ ಅಭಿಯಾನದಡಿ ರಾಜ್ಯಮಟ್ಟದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಹಕಾರದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಸಹಯೋಗದಲ್ಲಿ ಹಾಗೂ ದಾವಣಗೆರೆ ಜಿಲ್ಲಾಮಟ್ಟದ ಸ್ಪರ್ಧೆ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳು, ಸರ್ಕಾರಿ ಶಾಲೆಗಳು, ಸಾಶಿಇ, ಗಣ್ಯರ ಸಹಕಾರದಲ್ಲಿ ನಡೆಯಲಿದೆ. ಸ್ಪರ್ಧೆಯ ವಿಷಯವು ವನಸಂಪತ್ತು, ವನ್ಯಜೀವಿಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ (ಮೊ-98440- 24995), ಹಿರಿಯ ಜಾಹೀರಾತು ಪ್ರತಿನಿಧಿ ಟಿ.ಆರ್. ಸುಧೀಂದ್ರ (98449-13226), ಪ್ರಸಾರಾಂಗ ವಿಭಾಗದ ಶಿವರಾಜ (63661-59404) ಅವರನ್ನು ಸಂಪರ್ಕಿಸುವಂತೆ ಕನ್ನಡಪ್ರಭ ಕೋರಿದೆ.
-16ಕೆಡಿವಿಜಿ9: ದಾವಣಗೆರೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬ್ಯಾನರ್.