ಆ.೩೦ರಂದು ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ; ದಿವ್ಯಶ್ರೀ

KannadaprabhaNewsNetwork |  
Published : Jul 27, 2025, 12:00 AM IST
26ಕೆಎಂಎನ್‌ಡಿ-7ಬೆಂಗಳೂರಿನ ವಿಧಾನಸೌಧ ಕೊಠಡಿಯಲ್ಲಿ ಆಧ್ಯಾಪನಾ ವಿಜ್ಞಾನೋತ್ಸವದ ಲೋಗೋವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳ ನೋಂದಣಿ ಪ್ರಕ್ರಿಯೆಯನ್ನು ಜು.೩೦ರೊಳಗೆ ಪೂರ್ಣಗೊಳಿಸಲಾಗುವುದು. ಕಳೆದ ಬಾರಿ ನಡೆದ ಸ್ಪರ್ಧೆಗೆ ೬೭೦೨ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ ೧೦ ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಧ್ಯಾಪನಾ ಟ್ರಸ್ಟ್ ವತಿಯಿಂದ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ಆ.೩೦ರಂದು ನಗರದ ಎ ಆ್ಯಂಡ್ ಎ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಸಿಇಒ ಎಂ.ಜಿ.ದಿವ್ಯಶ್ರೀ ತಿಳಿಸಿದರು.

ಈ ಬಾರಿಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನವೀನ ವಿಜ್ಞಾನ ಮಾದರಿಗಳು, ಗ್ರಾಮೀಣಾಭಿವೃದ್ಧಿಗಾಗಿ ಹ್ಯಾಕಥಾನ್, ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ರೀಡೆ (ಟೆಕ್ಲೆಟಿಕ್ಸ್), ವಿಜ್ಞಾನ ಶಿಕ್ಷಕರಿಗಾಗಿ ಪೋಯೆಟಿಕ್ ಸೈನ್ಸ್, ವಿಜ್ಞಾನ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜ್ಞಾನ ಮಾದರಿ ತಯಾರಿಕೆಗೆ ವಿದ್ಯಾರ್ಥಿಗಳಿಗೆ ಯಾವುದೇ ನಿರ್ದಿಷ್ಟ ವಿಷಯವನ್ನು ನೀಡಿಲ್ಲ. ಅವರು ಯಾವುದೇ ವಿಜ್ಞಾನ ಮಾದರಿಗಳನ್ನು ತಯಾರಿಸಿಕೊಂಡು ಬರಬಹುದು. ಕಾರ್ಯಕ್ರಮದಲ್ಲಿ ಆಯೋಜನೆಯಾಗಿರುವ ಸ್ಪರ್ಧೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವ ಪೂರ್ವತಯಾರಿ ಸಭೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸುಮಾರು ೨೨೦೦ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳ ನೋಂದಣಿ ಪ್ರಕ್ರಿಯೆಯನ್ನು ಜು.೩೦ರೊಳಗೆ ಪೂರ್ಣಗೊಳಿಸಲಾಗುವುದು. ಕಳೆದ ಬಾರಿ ನಡೆದ ಸ್ಪರ್ಧೆಗೆ ೬೭೦೨ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ ೧೦ ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಇದೆ ಎಂದರು.

೨೦೨೫-೨೬ನೇ ವಿಜ್ಞಾನೋತ್ಸವವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯಯದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಜೇಷನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕೆ.ಆರ್.ಪೃಥ್ವಿ, ಜಿ.ಟಿ.ಪ್ರವೀಣ್‌ಕುಮಾರ್, ಜೆ.ವಿ.ಮನು ಇದ್ದರು.

ಇಂದು ಅಭಿನಂದನೆ, ಹಾಸ್ಯಸಂಜೆ ಕಾರ್ಯಕ್ರಮ

ಮಂಡ್ಯ:

ಭಾರತ ಸೇವಾದಳ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನಿಂದ ಭಾನುವಾರ (ಜು.೨೭) ಸಂಜೆ ೪ ಗಂಟೆಗೆ ನಗರದ ಬಾಲಭವನ ಉದ್ಯಾನವನದಲ್ಲಿ ಅಭಿನಂದನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಚುಸಾಪ ಅಧ್ಯಕ್ಷ ಜಿ.ವಿ.ನಾಗರಾಜು ತಿಳಿಸಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಸಮಾರಂಭ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅವರು ರೋಟರಿ ಮಾಜಿ ಅಧ್ಯಕ್ಷ ರವೀಂದ್ರ ಕೆಂಪಯ್ಯ, ಹಾಲಹಳ್ಳಿ ಮಹೇಶ್, ಜಿ.ವಿ.ಕುಮಾರ್, ಚಿಕ್ಕಸಿದ್ದಪ್ಪ, ಕೃಷ್ಣಸ್ವರ್ಣಸಂದ್ರ, ಕೆ.ಶಂಭು, ಪ್ರತಿಮಾ ರಮೇಶ್, ಉಷಾರಾಣಿ ಅವರನ್ನು ಅಭಿನಂದಿಸುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಚಲನಚಿತ್ರ ನಟ ಶಂಕರ್ ಅಶ್ವತ್ಥ್, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬೇಲೂರು ಸೋಮಶೇಖರ್, ಭಾರತ್ ಸೇವಾದಳ ಖಜಾಂಚಿ ಎಸ್.ಕೆ.ಶಿವಪ್ರಕಾಶ್‌ಬಾಬು, ನಗರಸಭಾ ಸದಸ್ಯರಾದ ಮಂಜುಳಾ ಉದಯಶಂಕರ್, ಎಂ.ಎನ್.ಶ್ರೀಧರ್, ಸೆಂಟ್‌ಜಾನ್ ಅಂಬ್ಯುಲೆನ್ಸ್ ಖಜಾಂಚಿ ಸಜ್ಜನ್ ಕೊಠಾರಿ ಅವರು ಸಮಾರಂಭದಲ್ಲಿ ಭಾಗವಹಿಸುವರು ಎಂದರು.

ಇದೇ ವೇಳೆ ಹಾಸ್ಯ ಕಲಾವಿದ ಮೈಸೂರು ಆನಂದ್, ಮಿಮಿಕ್ರಿ ರಮೇಶ್ ಬಾಬು, ಮಂಡ್ಯ ಸತ್ಯ ಮತ್ತು ಜನಾರ್ಧನ್ ಕೊಂಡ್ಲಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.

ಚುಸಾಪದ ಎಸ್.ಕೆ. ಶಿವಪ್ರಕಾಶ್‌ಬಾಬು, ನಾರಾಯಣಸ್ವಾಮಿ, ಗಣೇಶ್ ಗೋಷ್ಠಿಯಲ್ಲಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ