ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಷಯಾಧಾರಿತ ಸ್ಪರ್ಧೆ: ವಿಜ್ಞಾನ ಮೇಳ ಗುಂಪು ಸ್ಪರ್ಧೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಧುನಿಕತೆ ವಿಷಯದ ಬಗ್ಗೆ ಪ್ರದರ್ಶನವಿರಬೇಕು. ಇದರಲ್ಲಿ ನಾವಿನ್ಯತೆಗೆ ಪ್ರಾತಿನಿಧ್ಯ ನೀಡಲಾಗುವುದು ಸಕ್ರಿಯ ಮಾದರಿ ತಯಾರಿಕೆಯ ಪ್ರದರ್ಶನವಿರಬೇಕು. ಪ್ರಥಮ 7 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ ರು. ಬಹುಮಾನ ನೀಡಲಾಗುತ್ತದೆ. ವೈಯಕ್ತಿಕ ಸ್ಪರ್ಧೆಗಳು ಬೇರೆ ಪ್ರತ್ಯೇಕವಾಗಿದೆ. ಗುಂಪು ಸ್ಪರ್ಧೆ: ಜನಪದ ನೃತ್ಯ (ತಂಡ) ಸಾಂಸ್ಕೃತಿಕ ಉತ್ಸವ: 10 ಜನ ಇರಬೇಕು. 15 ನಿಮಿಷ, ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದು. ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು.
ಜನಪದ ಗೀತೆ(ತಂಡ): 10 ಜನ ಇರಬೇಕು. 7 ನಿಮಿಷ ಕಾಲಾವಕಾಶ ಇರುತ್ತದೆ. ಯಾವುದೇ ರೀತಿಯ ರಿಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸಬೇಕು. ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು.ವೈಯಕ್ತಿಕ ಸ್ಪರ್ಧೆಗಳು: 15 ನಿಮಿಷ ಅವಧಿಯ ಜನಪದ ಗೀತೆ (ವೈಯಕ್ತಿಕ), ಕಥೆ ಬರೆಯುವುದು ಯುವ ಬರಹಗಾರರ ಸ್ಪರ್ಧೆ ಮತ್ತು ಕವಿತೆ ಬರೆಯುವುದು ಯುವ ಬರಹಗಾರರ ಸ್ಪರ್ಧೆ (ವೈಯಕ್ತಿಕ) 60 ನಿಮಿಷ . ಆಂಗ್ಲ/ ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು. ವಿಷಯವು ಆಕ್ರಮಣಕಾರಿಯಾಗಿರಬಾರದು ಈಗಾಲೇ ಪ್ರಕಟವಾಗಿರಬಾರದು. ಅಕ್ಷರಗಳು ಸ್ಪಷ್ಟವಾಗಿರಬೇಕು. ಯಾವುದೇ ಜಾತಿ/ಪಂಥ/ಧರ್ಮ ಜನಾಂಗವನ್ನು ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು (1000 ಪದಗಳಿಗೆ ಮೀರಬಾರದು).
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಯುವಕ, ಯುವತಿಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಯೋಮಿತಿಯು 15 ರಿಂದ 29 ವರ್ಷಗಳಾಗಿರಬೇಕು. ಹಾಗೂ ವಯೋಮಿತಿಯ ಬಗ್ಗೆ ಯಾವುದಾದರು ದಾಖಲೆ ಅಥವಾ ಆಧಾರ್ ಕಾರ್ಡ್ ದೃಢೀಕರಣ ಪ್ರತಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯನ್ನು ಕಡ್ಡಾಯವಾಗಿ ತರುವುದು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಳಗ್ಗೆ 9.30ರ ಒಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ. ವಿಸ್ಮಯಿ ಅವರು ತಿಳಿಸಿದ್ದಾರೆ.
ಭಾಗವಹಿಸುವ ತಂಡಗಳಿಗೆ ಸಾಮಾನ್ಯದರದ ಪ್ರಯಾಣ ಭತ್ಯೆ ನೀಡಲಾಗುವುದು.