ಬೀರೂರಲ್ಲಿ ಜಿಲ್ಲಾ ದಲಿತ ಮುಖಂಡರಿಂದ ನಡೆದ ಆಯ್ಕೆ ಮಾದಿಗ ಸಮಾಜವನ್ನು ಮುನ್ನಡೆಗೆ ತರುವುದೇ ನನ್ನ ಧ್ಯೇಯಕನ್ನಡಪ್ರಭವಾರ್ತೆ,ಬೀರೂರು:ರಾಜ್ಯಾದ್ಯಂತ ಮಾದಾರ ಮಹಾಸಭಾ ಸಂಘಟನೆಯು ಒಗ್ಗೂಡುತ್ತಿದ್ದು ಅದರಂತೆ ಜಿಲ್ಲೆಯ ಚಿಕ್ಕಮಗಳೂರಿನಲ್ಲಿಯೂ ಸಹ ಸಂಘಟನೆ ಬಲವರ್ಧನೆಯಾಗಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಮಾದಿಗ ಹಾಗೂ ಡಿ.ಎಸ್.ಎಸ್. ಸಂಘಟನೆಯ ಮುಖಂಡರ ಸಮ್ಮುಖದಲ್ಲಿ ಯಳ್ಳಂಬಳೆಸೆಯ ವೈ.ಟಿ.ಗೋವಿಂದಪ್ಪನರವರನ್ನು ಅವಿರೋಧವಾಗಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ಮಾದಿಗ ಸಮಾಜದ ಮುಖಂಡರುಗಳು ಒಂದೆಡೆ ಸೇರಿ ವೈ.ಟಿ.ಗೋವಿಂದಪ್ಪನರವರನ್ನು ಆಯ್ಕೆ ಮಾಡಲಾಯಿತು.ಇದಕ್ಕೂ ಮುಂಚೆ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ಬ್ಲೂ ಆರ್ಮಿ ಮಾದಿಗರ ಸಂಘಟನೆಯ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಸಭೆಯಲ್ಲಿ ಗೋವಿಂದಪ್ಪನವರನ್ನು ಸೂಚಿಸಿದಾಗ ತರೀಕೆರೆ ಜಿಲ್ಲಾ ಮಾದಿಗ ದಂಡೋರದ ಟಿ.ಎಸ್.ಬಸವರಾಜ್ ಅನುಮೋದಿಸುತ್ತಿದ್ದಂತೆ ಜಿಲ್ಲಾ ಮಾದಿಗ ಸಮಾಜದ ಎಲ್ಲಾ ಮುಖಂಡರು ಜಿಲ್ಲಾಧ್ಯಕ್ಷರಾಗುವಂತೆ ಸಭೆಯಲ್ಲಿ ಅನುಮೋದಿಸಲಾಯಿತು.ಸಭೆಯಲ್ಲಿ ಮಾತನಾಡಿದ ಎಂ.ಆರ್.ಎಚ್.ಎಸ್ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್, ಮಾದಾರ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಎಚ್.ಮುನಿಯಪ್ಪ ಹಾಗೂ ಮುಖಂಡ ಮಾಜಿ ಸಚಿವ ಆಂಜನೇಯ , ಎ. ನಾರಾಯಣ ಸ್ವಾಮಿ ಮತ್ತಿತರ ತಂಡ ಈ ಮಾದಾರ ಸಭಾವನ್ನು ಮಾದಿಗರ ಸಮಸ್ಯೆ ಮತ್ತಿತರ ಹೋರಾಟಗಳಿಗೆ ಧ್ವನಿಯಾಗಲು ರಾಜ್ಯಾದ್ಯಂತ ಸ್ಥಾಪಿಸಿದ್ದಾರೆ , ಜಿಲ್ಲೆಯ ಪ್ರತಿ ಮಾದಿಗ ಸಮಾಜದ ಜನರ ನೋವು ನಲಿವಿಗೆ ಸ್ಪಂದಿಸಿ ಜಿಲ್ಲಾಧ್ಯಕ್ಷರು ಕಾರ್ಯನಿರ್ವಸುವ ಜೊತೆಗೆ ಪಕ್ಷಾತೀತವಾಗಿ ಮಾದಾರ ಮಹಾಸಭಾದ ಬುನಾದಿ ಮೇಲೆತ್ತಲಿ ಎಂದು ಆಶಿಸಿದರು.ಕರ್ನಾಟಕ ಬ್ಲೂ ಆರ್ಮಿ ಮಾದಿಗರ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ನಮ್ಮ ಒಗ್ಗಟ್ಟು ಎಷ್ಟಿದ್ದೆಯೆಂಬುದನ್ನು ತೋರಿಸುವಸಮಯ ಬಂದಿದ್ದು, ನಾವೆಲ್ಲರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಒಳಮೀಸಲಾತಿ ಹೋರಾಟದಲ್ಲಿ ಶ್ರಮಿಸಿದ ರಾಜ್ಯದ ಎಲ್ಲಾ ಮುಂಚೂಣಿ ನಾಯಕರಿಗೂ ಅಭಿನಂದನೆ ಸಲ್ಲಿಸಿದ ಅವರು, ಮಾದಿಗ ಮಹಾ ಸಭಾವನ್ನು ನಾವೆಲ್ಲರು ಮುಂಚೂಣಿಗೆ ತಂದು ಸಮಾಜದ ಕಟ್ಟಕಡೆ ವ್ಯಕ್ತಿಗೆನಾದರೂ ಅನ್ಯಾಯವಾದರೇ ಅದರ ವಿರುದ್ದ ಹೋರಾಟ ನಡೆಸಿ ನ್ಯಾಯ ಪಡೆಯಲು ಶ್ರಮಿಸೋಣ ಎಂದರು.ನೂತನ ಜಿಲ್ಲಾಧ್ಯಕ್ಷ ಯಳ್ಳಂಬಳಸೆ ವೈ.ಟಿ.ಗೋವಿಂದಪ್ಪ ಮಾತನಾಡಿ, ಸಮಾಜದ ಎಲ್ಲಾ ನಾಯಕರು ಮತ್ತು ಮುಖಂಡರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಿಮ್ಮ ಅಭಿಮಾನ ಮತ್ತು ನೀವಿಟ್ಟಿರುವ ನಂಬಿಕೆಗೆ ಯಾವುದೇ ಕಳಂಕ ತರದೇ ಸಮಾಜದ ಅಭಿವೃದ್ದಿಗೆ ದುಡಿಯುತ್ತೇನೆ.ಆದರೆ ಸಮಾಜ ಮತ್ತು ಡಿ.ಎಸ್.ಎಸ್. ನ ಮುಖಂಡರು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ. ಮಾದಿಗ ಸಮಾಜದ ಉನ್ನತಿಗೆ ಮತ್ತು ಸಮಸ್ಯೆಗಳ ನಿವಾರಣೆಗೆ ಸಿಕ್ಕಂತಹ ಅವಕಾಶ ಉತ್ತಮವಾಗಿ ಬಳಸಿ ತಮ್ಮ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷರನ್ನು ಹಲವು ಮುಖಂಡರಾದ ಕಡೂರು ಪ್ರಮೋದ್, ಡಿ.ಎಸ್.ಎಸ್. ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಎಂ.ಆರ್.ಎಚ್.ಎಸ್.ಜಿಲ್ಲಾಧ್ಯಕ್ಷ ಕುಡ್ಲೂರು ಕುಮಾರ್, ಪುರಸಭೆ ಆಶ್ರಯ ಸಮಿತಿ ಸದಸ್ಯ ಮೈಲಾರಪ್ಪ, ಮಾದಿಗ ಶ್ರೇಯೋಭಿವೃದ್ದಿ ಟ್ರಸ್ಟ್ ಕಾರ್ಯದರ್ಶಿ ತಂಗಲಿ ರಾಘು, ಬಿ.ಜೆಪಿ ಎಸ್ಸ್.ಎಸ್ಟಿ ಉಪಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮಣಪ್ಪ, ತಾಲ್ಲೂಕು ನೌಕರರ ಸಂಘದ ಉಪಾಧ್ಯಕ್ಷ ಜಯಣ್ಣ, ಮಾದಿಗ ನೌಕರರ ಸಂಘದ ಬಿ.ಎಂ.ಮೈಲಾರಪ್ಪ, ಈಶ್ವರಪ್ಪ, ಸಖರಾಯಪಟ್ಟಣ ನಾಗರಾಜ್, ಪಟ್ಟಣಗೆರೆ ಸಗುನಪ್ಪ, ಕಡೂರು ಗೋಪಿನಾಥ್, ಕೆದಿಗೆರೆ ಗ್ರಾ.ಪಂ.ಸದಸ್ಯ ಚಂದ್ರಪ್ಪ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಗಿರೀಶ್, ಮಾದಿಗ ದಂಡೋರ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ , ಮೈಲಾರಲಿಂಗಸ್ವಾಮಿ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗೌಡರುಗಳು , ಕೆ.ವೈ.ವಾಸು, ಕೆದಿಗೆರೆ ಬಸವರಾಜ್ ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರುಗಳು, ಡಿಎಸ್.ಎಸ್.ನಾಯಕರುಗಳು ಶುಭಹಾರೈಸಿದರು. 5 ಬೀರೂರು 1ಬೀರೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ಮಾದಿಗ ಸಮಾಜದ ಮುಖಂಡರುಗಳು ಒಂದೆಡೆ ಸೇರಿ ಮಾದಾರ ಮಹಾಸಭಾ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ವೈ.ಟಿ.ಗೋವಿಂದಪ್ಪನರವರನ್ನು ಆಯ್ಕೆ ಮಾಡಲಾಯಿತು.