ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಾದ್ಯಂತ ಕೊನೆ ಶ್ರಾವಣ ಶನಿವಾರದ ಹಿನ್ನಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು, ಬಜರಂಗದಳ ಸಂಘಟನೆಯ ಕಾರ್ಯಕರ್ತರು ಇಡೀ ದಿನ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಿದ್ದರು.ಬಜರಂಗದಳ ಕಾರ್ಯಕರ್ತರು ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯವನ್ನು ವಿಶಿಷ್ಟ ರೀತಿಯ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಇಡೀ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ಸಾಲುಗಟ್ಟಿ ನಿಂತು ಸ್ವಾಮಿಯ ದರ್ಶನ ಪಡೆಯಲು ನೆರವಾದರು.ಬಜರಂಗದಳದ ಸೇವೆ
ಭಕ್ತರಿಗೆ ಪ್ರಸಾದ ವಿನಿಯೋಗ
ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಇಡೀ ದಿನ ಪೂಜಾ ವ್ಯವಸ್ಥೆ ಮಾಡಿಸಿದ್ದ ಬಜರಂಗದಳ ಕಾರ್ಯಕರ್ತರು ಮತ್ತು ಹಲವಾರು ಭಕ್ತರು ಸಿಹಿಪೊಂಗಲ್, ಖಾರಾಪೊಂಗಲ್, ಪುಳಿಯೊಗರೆ, ಚಿತ್ರಾನ್ನ ಪ್ರಸಾದ ಹಂಚಿಕೆಯಲ್ಲಿ ತೊಡಗಿದ್ದು, ಕಂಡು ಬಂತು.ಜಿಲ್ಲಾದ್ಯಂತ ವಿಶೇಷ ಪೂಜೆ
ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದ್ದು, ನಗರದ ಎಸ್ಪಿ ನಿವಾಸದ ಎದುರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ಅರ್ಚಕವೆಂಕಟೇಶ್ ಪೂಜೆಯ ನೇತೃತ್ವ ವಹಿಸಿದ್ದರು. ಉಳಿದಂತೆ ನಗರದ ಪಂಚಮುಖಿ ಆಂಜನೇಯ, ಶನೇಶ್ವರ ಮತ್ತಿತರ ದೇವಾಲಯಗಳಲ್ಲಿ ವಿಶೇಷತೆ ಇತ್ತು.