ವಿಚ್ಛೇದನ ಪ್ರಕರಣ: ಒಂದಾದ ದಂಪತಿಗಳು

KannadaprabhaNewsNetwork | Published : Dec 17, 2024 1:01 AM

ಸಾರಾಂಶ

ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿದ್ದು ವಿಚ್ಛೇದನ ಪ್ರಕರಣ ಎದುರಿಸುತ್ತಿದ್ದ ಮೂವರು ಜೋಡಿ ದಂಪತಿಗಳನ್ನು ಒಂದು ಗೂಡಿಸುವ ಮೂಲಕ ಬೈಲಹೊಂಗಲ ನ್ಯಾಯಾಲಯ ಗಮನ ಸೆಳೆದಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿದ್ದು ವಿಚ್ಛೇದನ ಪ್ರಕರಣ ಎದುರಿಸುತ್ತಿದ್ದ ಮೂವರು ಜೋಡಿ ದಂಪತಿಗಳನ್ನು ಒಂದು ಗೂಡಿಸುವ ಮೂಲಕ ಬೈಲಹೊಂಗಲ ನ್ಯಾಯಾಲಯ ಗಮನ ಸೆಳೆದಿದೆ.

ಕಳೆದ ಎರಡ್ಮೂರು ವರ್ಷಗಳಿಂದ ಹಣಕಾಸಿನ ಸಮಸ್ಯೆ, ತಪ್ಪು ತಿಳಿವಳಿಕೆ ಮೂಲಕ ಬೇರ್ಪಟ್ಟ ಜೋಡಿಗಳಿಗೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರವಿ ಚವ್ಹಾನ ಜೀವನದಲ್ಲಿ ಹೊಂದಿಕೊಂಡು ನಡೆದರೇ ಮಾತ್ರ ಈ ಬದುಕು ಸಾರ್ಥಕವಾಗಲಿದೆ. ಅನಾವಶ್ಯಕವಾಗಿ ಸಣ್ಣ, ಸಣ್ಣ ಸಮಸ್ಯೆಗಳನ್ನು ಪ್ರತಿಷ್ಟೆಗೆ ಒಡ್ಡಿದರೇ ಯವ್ವನದ ಬದುಕು ಹಾಳಾಗಲಿದೆ. ಕಳೆದು ಹೊದ ಸಮಯ ಮತ್ತೆ ಬರುವುದಿಲ್ಲ. ಇದನ್ನರಿತು ಬಾಳಬೇಕೆಂದು ಲೋಕ ಅದಾಲತನಲ್ಲಿ ಸಲಹೆ ನೀಡಿದ್ದನ್ನು ಒಪ್ಪಿ ತಮ್ಮ, ತಮ್ಮ ಬಾಳ ಸಂಗಾತಿಗಳೊಂದಿಗೆ ಬಾಳು ನಡೆಸಲು ಸಮ್ಮತಿಸಿದರು. ನ್ಯಾಯಾಲಯದಲ್ಲಿಯೇ ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ಹಂಚಿಕೊಳ್ಳುವ ಮೂಲಕ ಜೋಡಿಗಳು ಒಂದಾಗಿ, ಸಂತಸಪಟ್ಟ ಕ್ಷಣ ಸಾಕ್ಷಿಯಾಯಿತು.ವಕೀಲರಾದ ಡಿ.ಎಸ್.ಬೊಂಗಾಳೆ, ಆನಂದ ತುರಮರಿ, ಐ.ಎಂ.ಹುಣಶಿಕಟ್ಟಿ, ಜಯಶ್ರೀ ಬೂದಿಹಾಳ ಜೋಡಿಗಳ ಪರ ವಕಾಲತು ವಹಿಸಿದ್ದರು. ಡಿ.ವೈ.ಗರಗದ, ಪೂಜಾ ದುಮಾಲೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದರು.ನ್ಯಾಯಾಧೀಶರಾದ ರವಿ ಚವ್ಹಾನ, ಬಸವರಾಜ ನಾಯ್ಕ್ ಮಾರ್ಗದರ್ಶನದಲ್ಲಿ 931 ಬಾಕಿ ಎಕ್ಸಿಡೆಂಟ್, ಆಸ್ತಿವಿವಾದ, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ ಸೇರಿ ಅನೇಕ ಪ್ರಕರಣಗಳು ಇತ್ಯರ್ಥಗೊಂಡವು. ಸುಮಾರು 2 ಕೋಟಿ 56 ಲಕ್ಷ ರೂ. ಲೋಕ ಅದಾಲತನಲ್ಲಿ ಸೆಟ್ಲಮೆಂಟ್‌ಗೊಂಡಿತು. ಶಿರಸ್ತೆದಾರ ಸಿ.ಎಸ್.ಮಠಪತಿ, ಜ್ಯೋತಿ ಕುಲಕರ್ಣೀ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಎ.ಎಫ್.ಪಟ್ಟಿಹಾಳ, ಸುಜಾತಾ ಚಿಕ್ಕಮಠ, ಎಸ್.ಎಸ್.ಮಠದ, ಎಸ್.ವೈ.ಪಾಟೀಲ, ಬಸವರಾಜ ದೋತರದ, ಎಸ್.ವಿ.ಸಿದ್ದಮನಿ, ಐ.ಡಿ.ವಂಟಿ, ಕೆ.ಎಸ್.ಕುಲಕರ್ಣಿ, ಡಿ.ಎಸ್.ದೊಡಮನಿ, ಐ.ಎಸ್.ಪಾಟೀಲ, ತಾಲೂಕು ಕಾನೂನು ಸೇವಾ ಸಮೀತಿ ಸಂಚಾಲಕ ಉಮೇಶ ಕಾರಜೋಳ ಹಾಗೂ ನ್ಯಾಯವಾದಿಗಳು, ಕಕ್ಷಿದಾರರು ಇದ್ದರು.

Share this article