ಬೆಲೆ ಏರಿಕೆ ಬಿಸಿ ಮಧ್ಯದಲ್ಲಿಯೇ ಸಂಭ್ರಮದ ದೀಪಾವಳಿ ಹಬ್ಬದಾಚರಣೆ

KannadaprabhaNewsNetwork |  
Published : Nov 10, 2026, 01:00 AM IST
ಬರಗಾಲದ ಬೆಲೆ ಏರಿಕೆಯ ಮಧ್ಯದಲ್ಲಿಯೇಕುಮಾರಪಟ್ಟಣದ ಸರ್ಕಲ್‌ನಲ್ಲಿದೀಪಾವಳಿ ಹಬ್ಬದಾಚರಣೆಗೆಬೆಕಾಗುವ ಪರಿಕರಗಳನ್ನು ಗ್ರಾಹಕರುಖರೀದಿಸಿದರು | Kannada Prabha

ಸಾರಾಂಶ

ಬಸ್, ಹಾಲು, ಮೊಸರು, ಡೀಸೆಲ್, ಪೆಟ್ರೋಲ್, ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯ ಮಧ್ಯೆ ದೀಪಾವಳಿ ಹಬ್ಬದಾಚರಣೆಗೆ ಬೇಕಾಗುವ ತರತರದ ಹಣ್ಣು ಹಂಪಲುಗಳನ್ನು ಸೋಮವಾರ ಖರೀದಿಸಿದರು.

ಕುಮಾರಪಟ್ಟಣ:ಬಸ್, ಹಾಲು, ಮೊಸರು, ಡೀಸೆಲ್, ಪೆಟ್ರೋಲ್, ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯ ಮಧ್ಯೆ ದೀಪಾವಳಿ ಹಬ್ಬದಾಚರಣೆಗೆ ಬೇಕಾಗುವ ತರತರದ ಹಣ್ಣು ಹಂಪಲುಗಳನ್ನು ಸೋಮವಾರ ಖರೀದಿಸಿದರು.ಬರಗಾಲದ ಪರಿಣಾಮ ಪೇರಲ, ಚಿಕ್ಕು, ಬಾಳೆ, ದಾಳಿಂಬೆ, ಸಪೋಟಾ, ಕಿತ್ತಳೆ, ಲಿಂಬೆ ಹಣ್ಣು, ಸೀತಾಫಲ, ಎಳನೀರು, ತೆಂಗಿನ ಕಾಯಿಗಳ ಬೆಲೆ ಗಗನಕ್ಕೇರಿವೆ. ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಕನಕಾಂಬರಿ ಹೂವುಗಳ ಬೆಲೆಯೂ ಏರಿಕೆಯು ಗ್ರಾಹಕರಿಗೆ ತಟ್ಟಿದೆ.

ಬೆಳೆ ಹಾನಿಯ ಸಂಕಷ್ಟದಲ್ಲಿ ಹಬ್ಬದ ಸಂಭ್ರಮಾಚರಣೆ :ರಾಜ್ಯ ಹಲವಾರು ಜಿಲ್ಲೆಯಲ್ಲಿ ಸರ್ಮಪಕವಾಗಿ ಮಳೆ ಸುರಿಯದ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮೀಕ್ಷೆ ನಡೆಸಿ ರಾಜ್ಯದ ಅನೇಕ ಜಿಲ್ಲೆ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿದ್ದಾರೆ. ಮಳೆಯನ್ನು ನಂಬಿ ಅಪಾರ ಪ್ರಮಾಣದಲ್ಲಿ ಸಾಲಮಾಡಿ ಬಿತ್ತಿರುವ ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಬತ್ತ, ರಾಗಿ, ಜೋಳ, ಹತ್ತಿ, ಶೇಂಗಾ, ಕಬ್ಬು, ಬಾಳೆ ಸೇರಿದಂತೆ ಇತರೆ ಬೆಳೆಗಳೆಲ್ಲಾ ಅನ್ನದಾತನ ನಿರೀಕ್ಷೆಯಂತೆ ಇಳುವರಿ ಬಂದಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ