ಬರದಲ್ಲೂ ದೀಪಾವಳಿ ಹಬ್ಬ ಬಲು ಜೋರು

KannadaprabhaNewsNetwork |  
Published : Nov 09, 2026, 02:30 AM IST
ಫೋಟೋವಿವರ- (8ಎಚ್‌ಪಿಟಿ1) ಹೊಸಪೇಟೆ ನಗರದಲ್ಲಿ ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆಗಳನ್ನು ಖರೀದಿಸುತ್ತಿರುವುದು | Kannada Prabha

ಸಾರಾಂಶ

ದೀಪಾವಳಿ ಹಬ್ಬದ ಸಡಗರ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಅಲಂಕಾರಿಕ ಹಣತೆಗಳ ಮಾರಾಟ ಜೋರಾಗಿದೆ.

ಸಿ.ಕೆ. ನಾಗರಾಜ ಹೊಸಪೇಟೆ

ಮುಂಗಾರು ಮಳೆ ಕೊಟ್ಟು, ಹಿಂಗಾರು ಹಿನ್ನಡೆಯಾಗಿ ಜಿಲ್ಲಾದ್ಯಂತ ಮಳೆ, ಬೆಳೆ ಇಲ್ಲದೇ ಬರ ತಾಂಡವವಾಡುತ್ತಿದೆ. ಆದರೂ ಸಂಪ್ರದಾಯದಂತೆ ದೀಪಾವಳಿ ಹಬ್ಬ ಮಾತ್ರ ಜೋರಾಗಿಯೇ ನಡೆಯುತ್ತಿದೆ.

ಮನುಷ್ಯನ ಕತ್ತಲೆ ಬದುಕಿಗೆ ಹೊಸ ಬೆಳಕು ಚೆಲ್ಲುವ ಸಂಭ್ರಮಕ್ಕೆ ದೀಪಗಳು ದೀಪಾವಳಿ ಹಬ್ಬಕ್ಕೆ ಸಾಕ್ಷಿ ಎನ್ನುವಂತೆ ಮನೆಗಳ ಮುಂದೆ ದೀಪಗಳ ಬೆಳಕಿನ ಸಡಗರ ಹಾಗೂ ವಿವಿಧ ಆಕರ್ಷಕವಾದ ಚಿತ್ತಾರದ ಆಕಾಶ ಬುಟ್ಟಿಗಳು ಹಬ್ಬದ ವಿಶೇಷ ಮೆರಗನ್ನು ಹೆಚ್ಚಿಸುತ್ತಿವೆ.

ಮನೆ ಹಾಗೂ ಮನಗಳಿಗೆ ಮುದ ನೀಡುವ ಬಣ್ಣಬಣ್ಣದ ವಿವಿಧ ಆಕಾರದ ಬುಟ್ಟಿಗಳು ಆಗಸದಲ್ಲಿರುವ ನಕ್ಷತ್ರ ತಾರೆಗಳ ಬೆಳಕಿಗೆ ಪೈಪೋಟಿ ನೀಡುವಂತೆ ಕಂಗೊಳಿಸುವ ರೀತಿಯಲ್ಲಿ ಬೆಳಗುವ ಆಕಾಶ ಬುಟ್ಟಿಗಳ ಖರೀದಿ ದೀಪಾವಳಿ ಹಬ್ಬದ ಸಡಗರಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ದೀಪಾವಳಿ ಹಬ್ಬದ ಸಡಗರ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಅಲಂಕಾರಿಕ ಹಣತೆಗಳ ಮಾರಾಟ ಜೋರಾಗಿದೆ. ವಿವಿಧ ಬಗೆಯ ಹಣತೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಹಣತೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಇಲ್ಲಿನ ನಗರಸಭೆ ಮುಂದಿನ ರಸ್ತೆ, ಗಡಿಗೆ ಮಾರುಕಟ್ಟೆ, ಗಾಂಧಿ ಚೌಕ್, ಹಳೇ ಬಸ್ ನಿಲ್ದಾಣ ಪ್ರದೇಶ, ರಾಜವೀರ ಮದಕರಿ ನಾಯಕ ವೖತ್ತ, ಕೆಇಬಿ ಕಚೇರಿ ಮುಂದೆ, ಎಪಿಎಂಸಿ ಮುಂದೆ, ತಹಸೀಲ್ದಾರ್ ಕಚೇರಿ ಮಂದೆ, ಕೋರ್ಟ್ ಮುಂದೆ, ನಗರ ಪೊಲೀಸ್ ಠಾಣೆ ರಸ್ತೆ ಬದಿಯಲ್ಲಿ ಸೇರಿದಂತೆ ನಗರದ ಇತರೆ ರಸ್ತೆ ಬದಿಯಲ್ಲಿ ಜನಸಂದಣಿ ಸ್ಥಳಗಳಲ್ಲಿ ವಿವಿಧ ಮಾದರಿಯ ಹಣತೆ ಮಾರಾಟಕ್ಕೆ ಇಡಲಾಗಿದ್ದು, ಹೊಸ ಮಾದರಿಯ ಹಣತೆಗಳ ಹುಡುಕಾಡಿ ಖರೀದಿಸುತ್ತಿದ್ದರು.

ಈ ಬಾರಿ ಅಮಾವಾಸ್ಯೆ ಎರಡು ದಿನ ಬಂದಿರುವುದರಿಂದ ಕೆಲವರು ಭಾನುವಾರ, ಇನ್ನೂ ಕೆಲವರು ಸೋಮವಾರ ಆಚರಿಸುತ್ತಿದ್ದಾರೆ. ಕೆಲವರು ಭಾನುವಾರ ರಾತ್ರಿ ಲಕ್ಷ್ಮೀ ಪೂಜೆ, ಸೋಮವಾರ ಪಾಡ್ಯ ಆಚರಿಸಲು ಮುಂದಾದರೆ ಇನ್ನೂ ಕೆಲವರು ಸೋಮವಾರ ಲಕ್ಷ್ಮೀ ಪೂಜೆ, ಮಂಗಳವಾರ ಪಾಡ್ಯ ಆಚರಿಸಲು ಮುಂದಾಗಿದ್ದಾರೆ.

ದೀಪಾವಳಿ ಹಬ್ಬದಲ್ಲಿ ವಿವಿಧ ವಸ್ತುಗಳ ದರ ತುಸು ಹೆಚ್ಚಾಗಿದ್ದರೂ ಜನರು ಖುಷಿಯಿಂದಲೇ ಖರೀದಿ ಮಾಡಿಕೊಂಡು ಹಬ್ಬ ಸಂಭ್ರಮಿಸುತ್ತಿದ್ದಾರೆ. ಮನೆಯಂಗಳದಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ ಅದರ ಮೇಲೆ ಹಣತೆ ಇಟ್ಟು ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ.

ಒಂದು ದೀಪದಲ್ಲಿ 2 ಮತ್ತು 5, 7 ಕಡೆ ಬತ್ತಿ ಹಚ್ಚಬಹುದಾದ ವಿನ್ಯಾಸದ ಹಣತೆ, ತೆಂಗಿನ ಕಾಯಿ ಮಾದರಿ, ಗೊಂಬೆಯಾಕಾರ, ತಟ್ಟೆ, ಹೂವು, ನವಿಲು ಮಾದರಿ ಹಣತೆ, ಗಾಜಿನ ಹಣತೆ, ದೀಪದ ಆಕಾರದ ಹಣತೆಗಳು ಸೇರಿದಂತೆ ವಿವಿಧ ಮಾದರಿಯ ಹಣತಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಲಕ್ಷ್ಮೀ ದೀಪ ಜೋಡಿಗೆ 400, ತೆಂಗಿನಕಾಯಿ ಮಾದರಿಯವು ಜೋಡಿಗೆ 300, ಗೊಂಬೆ ಮಾದರಿ ಜೋಡಿಗೆ 150, ಗಾಜಿನ ಹಣತೆ ಜೋಡಿಗೆ 120, ಪಿಂಗಾಣಿ ದೀಪ 60, ಚಿಕ್ಕ ಹಣತೆಗೆ 40, ಮಧ್ಯಮ ಗಾತ್ರದ್ದು 50, ದೊಡ್ಡವು ಜೋಡಿಗೆ 60 ದರ ಇದೆ.

ದೀಪಾವಳಿ ಹಬ್ಬದಲ್ಲಿ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆ ಕಣ್ಮನ ಸೆಳೆಯುತ್ತಿವೆ. ಮಾರುಕಟ್ಟೆಯಲ್ಲಿ ಪಿಒಪಿ ಹಣತೆಗಳು ಆಕರ್ಷಕವಾಗಿ ಕಾಣುತ್ತಿರುವುದರಿಂದ ಕೆಲವರು ಪಿಒಪಿ ಹಣತೆಗಳಿಗೆ ಆಕರ್ಷಕರಾಗುತ್ತಾರೆ. ಇನ್ನೂ ಕೆಲವರು ದೀಪಾವಳಿ ಹಬ್ಬದಂದು ಹೊಸ ಮಣ್ಣಿನ ಹಣತೆಗಳನ್ನೇ ಖರೀದಿಸಿಕೊಂಡು ಬಂದು ದೀಪಾವಳಿ ಆಚರಿಸುವುದು ವಾಡಿಕೆಯಾಗಿದೆ.

ದೀಪಾವಳಿ ಹಬ್ಬದಲ್ಲಿ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುವ ದೀಪ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಪಿಒಪಿ ದೀಪಗಳ ನಡುವೆಯೂ ಮಣ್ಣಿನ ಹಣತೆಗಳನ್ನು ಇಷ್ಟಪಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಈ ವರ್ಷ ವ್ಯಾಪಾರ ಅಷ್ಟೊಂದು ಜೋರಾಗಿ ಇಲ್ಲ. ಬಹಳಷ್ಟು ಅಂಗಡಿಗಳಲ್ಲಿ ಮಣ್ಣಿನ ಹಣತೆ ದೀಪಗಳ ಮಾರಾಟ ನಡೆಯುತ್ತಿದೆ ಎಂದು ಹೊಸಪೇಟೆ ಕುಂಬಾರ ಸುವರ್ಣಮ್ಮ ತಿಳಿಸಿದ್ದಾರೆ.

ದೀಪಾವಳಿ ಪವಿತ್ರವಾದದ್ದು, ಮನೆ, ಮನ ಬೆಳಗಿಸಿ ಲಕ್ಷ್ಮಿದೇವತೆ ಪೂಜಿಸುವ ಹಬ್ಬ. ದೀಪಾವಳಿ ಹಬ್ಬ ಮನೆಯ ಒಳಗೂ ಮತ್ತು ಹೊರಗೂ ಆಚರಿಸಲಾಗುತ್ತಿದೆ. ಹೊಸ ಮಣ್ಣಿನ ಹಣತೆ ತಂದು ಮನೆಯ ಮಂದೆ ಹಚ್ಚುವ ಮೂಲಕ ವಿವಿಧ ಮಾದರಿಯ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ ಎಂದು ಹೊಸಪೇಟೆ ನಿವಾಸಿಗಳಾದ ಇಂದಿರಾ, ಜ್ಯೋತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ