ಆಂಜನೇಯ ದೇವಾಲಯದಲ್ಲಿ ದೀಪಾವಳಿ ಹಬ್ಬ ಗೋ ಪೂಜೆ ಸಂಪನ್ನ

KannadaprabhaNewsNetwork |  
Published : Oct 27, 2025, 12:30 AM IST
ಶ್ರೀ ಆಂಜನೇಯ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ  ಗೋ ಪೂಜೆ | Kannada Prabha

ಸಾರಾಂಶ

ಶ್ರೀ ಆಂಜನೇಯ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಗೋ ಪೂಜೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಶ್ರೀ ಆಂಜನೇಯ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೇವಾಲಯದ ಆವರಣದಲ್ಲಿ ಗೋ ಪೂಜೆ ಬುಧವಾರ ನಡೆಯಿತು.

ದೇವಾಲಯ ಅರ್ಚಕ ನಂಜುಂಡಸ್ವಾಮಿ ಪೂಜಾ ಕಾರ್ಯವನ್ನು ನಡೆಸಿದರು. ಈ ಸಂದರ್ಭ ದೇವಾಲಯ ಅಧ್ಯಕ್ಷ ಸಿ.ಪಿ. ಗೋಪಾಲ್, ಉಪಾಧ್ಯಕ್ಷ ಅಪ್ಪಯ್ಯ, ಪ್ರಮುಖರಾದ ಸಿ.ಎಲ್. ಸೀತಾರಾಮ್, ಎಂ.ಸಿ. ರಾಘವ, ಜಿ.ಬಿ. ಸೋಮಯ್ಯ, ಕೆ.ಜಿ. ಸುರೇಶ್, ಗಣೇಶ್ ಇದ್ದರು.

-------------------------------------------

ನ. 2ರಂದು ಸೈನಿಕಶಾಲೆ ಸೇರಲಿಚ್ಚಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾಹಿತಿ ಕಾಯಾ೯ಗಾರ

ಮಡಿಕೇರಿ: ಸೈನಿಕ ಶಾಲೆಗಳ 6 ಮತ್ತು 9 ನೇ ತರಗತಿಗೆ ಸೇರ್ಪಡೆ ಸಂಬಂಧಿತ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.ನಗರದ ಸರ್ಕಾರಿ ಬಸ್ ನಿಲ್ದಾಣ ಬಳಿಯಿರುವ ಕೊಡಗು ಶಿಶುಕಲ್ಯಾಣ ಸಂಸ್ಥೆಯಲ್ಲಿ ನ. 2 ರ ಭಾನುವಾರದಿಂದ ಪ್ರತೀ ಭಾನುವಾರಗಳಂದು 10 ಭಾನುವಾರಗಳ ಕಾಲ ಸೈನಿಕ ಶಾಲಾ ಪರೀಕ್ಷಾ ಮಾಹಿತಿ ಕಾರ್ಯಾಗಾರ ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ.ಸರಗೂರು ಸೈನಿಕಶಾಲೆಯ ಪರಿಣಿತ ಅಧ್ಯಾಪಕರು ಸೇರಿದಂತೆ ವಿವಿಧ ವಿಷಯ ತಜ್ಞರು ಈ ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ನವೆಂಬರ್ 2 ರಂದು ಬೆಳಗ್ಗೆ 9.30 ಗಂಟೆಗೆ ಉದ್ಘಾಟನೆ ನಂತರ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ಶಿಬಿರ ಆಯೋಜಿತವಾಗಿದೆ.

ಸೈನಿಕಶಾಲೆಗೆ ಸೇರಲಿಚ್ಚಿಸುವ ಕೊಡಗಿನ ವಿದ್ಯಾರ್ಥಿಗಳು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಕೋರಿದ್ದಾರೆ. ಕಾರ್ಯಾಗಾರಕ್ಕೆ ಹೆಸರು ನೋಂದಾಯಿಸಲು ಮತ್ತು ಹೆಚ್ಚಿ ಮಾಹಿತಿಗೆ ಸಂಪರ್ಕ ಸಂಖ್ಯೆಗಳು - ಡಾ. ಸಿ. ಆರ್. ಪ್ರಶಾಂತ್ -9448246950, ಅಂಕಾಚಾರಿ 9964103322. ಪ್ರಕಾಶ್ ಪೂವಯ್ಯ. 7760940616

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ