ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ನಗರದ ವಿವಿಧ ಶಾಲೆಗಳಿಗೆ ವೈದ್ಯರ ತಂಡ ಭೇಟಿ ನೀಡಿ, ಪಟಾಕಿ ಸಿಡಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಕಣ್ಣಿಗೆ ಗಾಯವಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಿದೆ. ಜತೆಗೆ ಜಾಗೃತಿ ಸಾರುವ ಪೋಸ್ಟರ್ ವಿತರಿಸಲಾಗುತ್ತದೆ ಎಂದರು.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವವರಷ್ಟೇ ಅಲ್ಲದೆ, ಸಿಡಿಸದವರಿಗೂ ಪಟಾಕಿ ಅವಘಡಗಳಿಂದ ಕಣ್ಣಿನ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ಹಿರಿಯರ ಮಾರ್ಗದರ್ಶನ ಅಗತ್ಯ. ಪಟಾಕಿ ಸಿಡಿಸುವಾಗ ಕಾಟನ್ ಬಟ್ಟೆ ಧರಿಸಬೇಕು. ಪಟಾಕಿ ಹಚ್ಚಿದ ಬಳಿಕ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪಟಾಕಿ ಅವಘಡದಿಂದ ಕಣ್ಣಿಗೆ ಗಾಯವಾದರೆ ಕಣ್ಣುಗಳನ್ನು ಉಜ್ಜಬಾರದು. ನೀರು, ಅರಿಶಿಣ ಪುಡಿ ಸೇರಿದಂತೆ ಯಾವುದೇ ವಸ್ತುಗಳನ್ನು ಕಣ್ಣಿಗೆ ಹಾಕಬಾರದು. ತಕ್ಷಣ ಕಣ್ಣಿಗೆ ರಕ್ಷಣಾತ್ಮಕ ಕವಚ ಒದಗಿಸಿ ನೇತ್ರ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಪಟಾಕಿಯಿಂದ ಕಣ್ಣಿಗೆ ಸುಟ್ಟ ಗಾಯಗಳಾಗುವ ಅಥವಾ ಕಾರ್ನಿಯಾಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಚಂದ್ರಕಾಂತ ಪೂಜಾರ, ಡಾ. ಮಹಾಂತೇಶ, ಡಾ. ಪ್ರೀತಿ ಬಿ.ಎಸ್, ಡಾ. ವೀಣಾ, ಅಶೋಕ ಸಾಂಬ್ರಾಣಿ, ವಿನಯ ಬುಲಬುಲೆ ಇದ್ದರು.