ಮಾಗಡಿ: ನನಗಾಗಿ ಕನಕಪುರ ಕ್ಷೇತ್ರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತ್ಯಾಗ ಮಾಡುತ್ತಿದ್ದಾರೆಂಬುದು ಮಾಧ್ಯಮದವರ ಸೃಷ್ಠಿಯಷ್ಟೇ, ನಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುತ್ತಿಲ್ಲ ಜನ ನನಗೆ ವಿಶ್ರಾಂತಿ ನೀಡಿದ್ದಾರೆಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಸ್ಪರ್ಧೆ ವಿಚಾರ ನನ್ನ ಮುಂದೆ ಚರ್ಚೆಗೆ ಬಂದಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು, ಅಧ್ಯಕ್ಷರು, ಮುಖ್ಯಮಂತ್ರಿಗಳು ತೀರ್ಮಾನ ಮಾಡಿ ಒಳ್ಳೆಯ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುತ್ತಾರೆ, ನಾನು ಒಬ್ಬ ಕಾರ್ಯಕರ್ತನಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಸ್ಪರ್ಧೆ ಕುರಿತು ಯಾರೂ ಚರ್ಚೆ ಮಾಡಿಲ್ಲ. ರಾಜೀನಾಮೆ ನೀಡಿ ವಾರಗಳು ಕಳೆದಿದೆ ಅಷ್ಟೆ. ಚುನಾವಣೆ ಘೋಷಣೆಯಾಗಿಲ್ಲ. ಇನ್ನು 2-3 ತಿಂಗಳು ಚುನಾವಣೆ ಘೋಷಣೆಯಾಗಬೇಕಿದೆ. ಯಾವಾಗ ಘೋಷಣೆಯಾಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಒಂದು ಪಕ್ಷದ ಅಧ್ಯಕ್ಷರಾಗಿ ಉಪಮುಖ್ಯಮಂತ್ರಿಗಳಾಗಿ ಇದೇ ಜಿಲ್ಲೆಯವರು ಆಗಿರುವುದರಿಂದ ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರ ಖಾಲಿಯಿದ್ದಾಗ ಅಲ್ಲಿ ಕೆಲಸ ಆಗಬೇಕಿರುವುದರಿಂದ ಜನಗಳಿಗೆ ಯಾವ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಬೇರೆಯವರು ಯಾವ ರೀತಿ ಚುನಾವಣೆ 20 ದಿನ ಮಾಡುತ್ತಾರೆ ನಾನು ಅದೇ ರೀತಿ ಮಾಡುತ್ತೇನೆಂದು ತಿಳಿಸಿದರು.ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ: ನಮ್ಮ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಇಯಾದರು ನಾನೇ ಅಭ್ಯರ್ಥಿಯೆಂದು ಹೇಳಿದ್ದು ನಿಂತುಕೊಳ್ಳಲು ಆಸೆಯಿದ್ದು ಜನಗಳು ಮತ್ತು ಪಕ್ಷ ತೀರ್ಮಾನ ಮಾಡಿದರೆ ಡಿ.ಕೆ.ಶಿವಕುಮಾರ್ ಸ್ಪರ್ಧಿಸುತ್ತಾರೆ. ಅದು ಅವರ ವೈಯಕ್ತಿಕ ವಿಚಾರ. ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡುವುದಿಲ್ಲ. ಚಲನಚಿತ್ರ ನಟರು, ನಿರ್ಮಾಪಕರು, ಕಥೆಗಾರರು ಅವರೆ ಆಗಿರುವುದರಿಂದ ಕಥೆ ಯಾವಾಗ ಬೇಕಾದರೂ ಬದಲಾಗುತ್ತದೆ. ಕೇಂದ್ರದಲ್ಲಿ ಪ್ರಭಾವಿ ಮಂತ್ರಿಗಳು ಅಧಿಕಾರದಲ್ಲಿರುವುದರಿಂದ ಮೇಕೆದಾಟು ಯೋಜನೆ ಬಗ್ಗೆ ಪ್ರಧಾನಿಗಳ ಜೊತೆ ಚರ್ಚಿಸಿ ಅನುಮೋದನೆ ಪಡೆದು 3 ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡುತ್ತೇವೆಂದು ಸುರೇಶ್ ಹೇಳಿದರು. ಈ ವೇಳೆ ಶಾಸಕ ಎಚ್.ಸಿ.ಬಾಲಕೃಷ್ಣ ಹಾಜರಿದ್ದರು.
(ಫೋಟೋ ಚಿಕ್ಕದಾಗಿ ಬಳಸಿ)