ಡಿಕೆ ಶಿವಕುಮಾರ್ ಗೆ ಗುರುವಿನ ಅನುಗ್ರಹವಾಗಿದೆ

KannadaprabhaNewsNetwork |  
Published : Jun 12, 2026, 01:15 AM IST
್ಿ | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಗುರುವಿನ ಅನುಗ್ರಹವಾಗಿದೆ. ಅವರ ಎಲ್ಲಾ ಸಂಕಷ್ಟಗಳು ದೂರವಾಗಲಿವೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಗುರುವಿನ ಅನುಗ್ರಹವಾಗಿದೆ. ಅವರ ಎಲ್ಲಾ ಸಂಕಷ್ಟಗಳು ದೂರವಾಗಲಿವೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ಅವರು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಅವರ ಮನೆಗೆ ಪಾದಪೂಜೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಖಾತೆ ಖ್ಯಾತೆ ಸುಖಾಂತ್ಯವಾಗಲಿದೆ. ಡಿ.ಕೆ.ಶಿವಕುಮಾರ್ ಅವರಿಗೆ ನಿಭಾಯಿಸುವ ಶಕ್ತಿ ಇದೆ. ಗೆದ್ದು ಬರಲಿದ್ದಾರೆ ಎಂಬ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತ ಪಡಿಸಿದರು.

ಮುರುಳೀಧರ -ಕಲ್ಪನಾ ಅವರ 40ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದ ಶೀಗಳು, ಮುರುಳೀಧರ ಹಾಲಪ್ಪ ಅವರಿಗೆ ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಸ್ಥಾನ,ಮಾನ ಸಿಗಲಿ ಎಂದು ಹಾರೈಸಿದರು.ಮುರುಳೀಧರ ಹಾಲಪ್ಪ ಅವರು ಅವರದೇ ದಾಟಿಯಲ್ಲಿ ಯವಕರು, ಮಹಿಳೆಯರು, ರೈತರು, ಕಾರ್ಮಿಕರು ಹಾಗು ಜನಸಾಮಾನ್ಯರ ಸೇವೆ ಮಾಡುತ್ತಾ, ಅರಿವಿನ ಜೊತೆಗೆ, ಸೇವೆಯಲ್ಕಿಯೂ ತೊಡಗಿದ್ದಾರೆ. ಅವರು ಮಠದ ಹಳೆಯ ಭಕ್ತರು, ತಮ್ಮ ಮನೆಯ ಪಾದ ಪೂಜೆಗೆ ನಮ್ಮನ್ನು ಭಕ್ತಿಪೂರ್ವಕವಾಗಿ ಆಹ್ವಾನಿಸಿದ್ದರು, ಅವರ ಕೋರಿಕೆಯಂತೆ ಇಂದು ಅವರ ಸ್ವಗೃಹಕ್ಕೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದ್ದೇನೆ. ಅವರು ತಮ್ಮ ರಾಜಕೀಯ ಉನ್ನತ್ತಿಗಾಗಿ ಕೆಲ ಸಂಕಲ್ಪಗಳನ್ಬು ಮಾಡಿಕೊಂಡಿದ್ದರು, ಅವರ ಸಂಕಲ್ಪಕ್ಕೆ ಗುರು ಅಜ್ಜಯ್ಯ ನ ಅನುಗ್ರಹವೂ ಆಗಿದೆ. ಮುಂದೆ ಉತ್ತರೋತ್ತರವಾಗಿ ಬೆಳೆಯಲಿದ್ದಾರೆ. ಅವರು ಮತ್ತು ಅವರ ಮನೆಯವರು ಮತ್ತಷ್ಟು ಜನ ಸೇವೆಯಲ್ಲಿ ತೊಡಗುವಂತಾಗಲಿ ಎಂದು ಶುಭ ಆಶೀರ್ವದಿಸಿರುವುದಾಗಿ ತಿಳಿಸಿದರು.ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ನೊಣವಿನಕೆರೆ ಮಠಕ್ಕೂ ನಮ್ಮ ಕುಟುಂಭಕ್ಕೂ ಅವಿನಾಭಾವ ಸಂಬಂದವಿದೆ. ತಮ್ಮ ಪೂರ್ವಜರು ಕಾಡಸಿದ್ದೇಶ್ವರ ಮಠಕ್ಕೆ ನಡೆದುಕೊಳ್ಲುತ್ತಿದ್ದರು. ಇಂದಿಗೂ ಅದು ಮುಂದುವರೆದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಲಹೆಯಂತೆ ನಾನು ಗುರುಗಳನ್ನು ನಮ್ಮ ಮನೆಗೆ ಪಾದಪೂಜೆಗೆ ಬರುವಂತೆ ಮಠಕ್ಕೆ ಹೋಗಿ ಆಹ್ವಾನಿಸಿದ್ದೆ. ಅವರು ಆಗಮಿಸಿ, ನಮ್ಮ ಪೂಜೆ ಸ್ವೀಕರಿಸಿ ಆಶೀರ್ವದಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ದಿಯಾಗಬೇಕು. ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಗಳು ಜಿಲ್ಲೆಗೆ ಒಳ್ಳೆಯ ಯೋಜನೆಗಳನ್ನು ತಂದು ಅಭಿವೃದ್ದಿ ಪಡಿಸಲು ಆಶೀರ್ವದಿಸುವಂತೆ ಕೇಳಿಕೊಂಡಿದ್ದೇನೆ. ಮುಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿ ನಡೆಸಿದ್ದೇನೆ. ಜನರ ಆಶೀರ್ವಾದ ದ ಜೊತೆಗೆ, ಗುರುಗಳ ಅನುಗ್ರಹವೂ ಅಗತ್ಯವಿದೆ ಎಂದರು. ಈ ವೇಳೆ ಮುರುಳೀಧರ ಹಾಲಪ್ಪ ಅವರ ಪತ್ನಿ ಕಲ್ಪನಾ ಡಾ.ಎಸ್.ಷಫಿ ಅಹಮದ್, ಅರಕೆರೆ ಶಂಕರ್ , ಮಾಜಿ ಶಾಸಕ ಲಕ್ಕಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ನಗರಕ್ಕೆ ಸೋಮನಾಥ ಜ್ಯೋತಿರ್ಲಿಂಗ ಆಗಮನ
ಜ್ಞಾನಜಾತ್ರೆಯ ಲೋಗೋ ಬಿಡುಗಡೆ ಮಾಡಿದ ಡಿಸಿ ಶುಭಾ ಕಲ್ಯಾಣ್