ಕನಕೋತ್ಸವದಲ್ಲಿ ಡಿಕೆ ಶಿವಕುಮಾರ್ ಭಾಗಿ

KannadaprabhaNewsNetwork |  
Published : Jan 31, 2026, 01:30 AM IST
ಕೆ ಕೆ ಪಿ ಸುದ್ದಿ 03:ವಾಯ್ಸ್ ಆಪ್ ಕನಕೋತ್ಸವವನ್ನು ಜನರ ಮಧ್ಯೆ ಕುಳಿತು ವೀಕ್ಷಣೆ ಮಾಡಿದ ಡಿ ಸಿ ಎಂ ಡಿಕೆಶಿ.  | Kannada Prabha

ಸಾರಾಂಶ

ಇಂದಿನ ಯುವಕರೇ ನಾಳೆ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಲಿದ್ದು ಅವರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸವನ್ನು ನಾವುಗಳು ಮಾಡಬೇಕಾಗಿದೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.

ಕನಕಪುರ: ಇಂದಿನ ಯುವಕರೇ ನಾಳೆ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಲಿದ್ದು ಅವರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸವನ್ನು ನಾವುಗಳು ಮಾಡಬೇಕಾಗಿದೆ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.

ಕನಕೋತ್ಸವ ಅಂಗವಾಗಿ ನಗರದ ಸೇಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಿಲಾಗಿರುವ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಮಕ್ಕಳು ತಯಾರಿಸಿರುವ ವಿಜ್ಞಾನದ ಪ್ರಾಯೋಗಿಕ ಮಾದರಿಗಳನ್ನು (ಪ್ರಾಜೆಕ್ಟ್‌ಗಳನ್ನು) ವೀಕ್ಷಿಸಿ ಮಾತನಾಡಿ, ನಮ್ಮ ಮಕ್ಕಳ ವಿಜ್ಞಾನದ ಪ್ರಯೋಗಗಳು ಅಚ್ಚರಿ ಜೊತೆಗೆ ಹೆಮ್ಮೆ ತಂದಿದ್ದು ಈ ವಿಜ್ಞಾನ ವಸ್ತು ಪ್ರದರ್ಶನವು ಸಮಾಜದ ಅಭಿವೃದ್ಧಿಗೆ ನವೀನ ಚಿಂತನೆಯ ಒಂದು ಉತ್ತಮ ವೇದಿಕೆಯಾಗಿದೆ, ಮಕ್ಕಳು ಬಹಳ ಉತ್ಸಾಹ ಹಾಗೂ ಸಂಭ್ರಮದಿಂದ ತಮ್ಮ ಚಿಂತನೆಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ್ದು ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಹಾಗೂ ದೊಡ್ಡ ವಿಜ್ಞಾನಿಗಳಾಗಿ ಬೆಳೆದು ತಾಲೂಕಿಗೆ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆ ತರಲಿ ಎಂದು ಹಾರೈಸಿದರು.

ನಂತರ ಕನಕೋತ್ಸವ ವೇದಿಕೆಗೆ ಆಗಮಿಸಿ ವಾಯ್ಸ್ ಆಪ್ ಕನಕೋತ್ಸವದಲ್ಲಿ ಭಾಗಿಯಾಗಿ ಮಕ್ಕಳ ಗಾಯನ ವೀಕ್ಷಿಸಿ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಿ ಸಮಾರಂಭಕ್ಕೆ ಆಗಮಿಸಿದ ಪಕ್ಷದ ಮುಖಂಡರಿಗೆ ಸನ್ಮಾನಿಸಿ ಗೌರವಿಸಿದರು. ದಂಪತಿಗಳ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಹಾಗೂ ರಘು ದೀಕ್ಷಿತ್ ತಂಡದವರ ರಸಮಂಜರಿ ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ರಚಿತಾ ರಾಮ್ ಸೇರಿದಂತೆ ಹಿರಿ-ಕಿರುತೆರೆ ನಟರು ಭಾಗವಹಿಸಿ ಈ ಭವ್ಯ ಸಮಾರಂಭಕ್ಕೆ ಮೆರಗು ನೀಡಿದರು.

ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಎಸ್ ರವಿ, ನಾಗರಾಜ್ ಯಾದವ್, ಸುಧಾಮ್ ದಾಸ್, ಬಮೂಲ್ ಅಧ್ಯಕ್ಷ ಡಿ. ಕೆ ಸುರೇಶ್, ಯೋಗ ಗುರು ವಚನಾನಂದ ಸ್ವಾಮೀಜಿ ಸೇರಿದಂತೆ ಪಕ್ಷದ ಶಾಸಕರು ಹಾಗೂ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿಗಾಗಿ ಮಕ್ಕಳಿಂದ ಪತ್ರ: ₹490 ಕೋಟಿ ಕೊಟ್ಟ ಸಿಎಂ!
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ : ಬಿಯರ್‌, ವೈನ್‌ ಅಗ್ಗ?