ಡಿಕೆಶಿ ಪದಗ್ರಹಣ: ಸಿಹಿ ಹಂಚಿ, ಕುಣಿದು ಸಂಭ್ರಮಿಸಿದ ಅಭಿಮಾನಿಗಳು

KannadaprabhaNewsNetwork |  
Published : Jun 04, 2026, 02:30 AM IST
ಕಿನ್ನಿಮುಲ್ಕಿ ಜಂಕ್ಷನ್‌ನಲ್ಲಿ ಡಿಕೆಶಿ ಪ್ರಮಾಣದ ನೇರ ಪ್ರಸಾರ  | Kannada Prabha

ಸಾರಾಂಶ

DKSH swearing-in ceremony: Fans celebrate by sharing sweets, dancing

ಉಡುಪಿ: ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಉಡುಪಿ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗವು ವಿಜಯೋತ್ಸವ ಆಚರಿಸಿತು.ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಕಿನ್ನಿಮುಲ್ಕಿ ಜಂಕ್ಷನ್‌ನಲ್ಲಿ ಪ್ರಮಾಣ ವಚನ ಸಮಾರಂಭದ ವೀಕ್ಷಣೆಗೆ ಭಾರೀ ಎಲ್‌ಇಡಿ ವಾಲನ್ನು ಅಳವಡಿಸಲಾಗಿತ್ತು, ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಡಿಕೆಶಿ ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ನೇರಪ್ರಸಾರವನ್ನು ವೀಕ್ಷಿಸಿದರು.ಕಿನ್ನಿಮುಲ್ಕಿ ಸ್ವಾಗತ ಗೋಪುರವನ್ನು ಹಾದು ಹೋಗುವ ಸಾವಿರಾರು ಮಂದಿಗೆ ಕೃಷ್ಣಮೂರ್ತಿ ಆಚಾರ್ಯ ಮತ್ತು ಸಂಗಡಿರು ಸಿಹಿ ಹಂಚಿ ಸಂತಸವನ್ನು ವ್ಯಕ್ತಪಡಿಸಿದರು ಮಾತ್ರವಲ್ಲ ಭರ್ಜರಿಯಾಗಿ ಹುಲಿ ಕುಣಿತದ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.

136 ಅಟ್ಟೆ ಮಲ್ಲಿಗೆ ಹೂವಿನ ಪೂಜೆ: ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ ಸಂಜೆ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ರಾಜ್ಯದ 136 ಮಂದಿ ಕಾಂಗ್ರೆಸ್ ಶಾಸಕರ ಹೆಸರಿನಲ್ಲಿ 136 ಅಟ್ಟೆ ಮಲ್ಲಿಗೆ ಹೂವಿನಿಂದ ವಿಶೇಷ ಹೂವಿನ ಪೂಜೆಯನ್ನೂ ನೆರವೇರಿಸಲಾಯಿತು.ಬೆಳಗ್ಗೆ ಉಡುಪಿಯ 12 ವಿಶೇಷ ಮಕ್ಕಳ, ವೃದ್ಧರ ಮತ್ತು ಅನಾಥರ ಆಶ್ರಮಗಳಿಗೆ ತೆರಳಿ, ಅಲ್ಲಿಗೆ ಅಗತ್ಯವಿರುವ ಕುಕ್ಕರ್ ಮತ್ತು ಫ್ಯಾನ್‌ ಗಳನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಕಾಂಗ್ರೆಸಲ್ಲಿ ಸಂಭ್ರಮ: ಅತ್ತ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತಿದ್ದಂತೆ ಇತ್ತ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದ ಮುಂದೆ ಪಕ್ಷದ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಡಿಕೆಶಿಗೆ ಕನ್ನರ್ಪಾಡಿ ಸಂಬಂಧ ಇದೆ: ಡಿ.ಕೆ.ಶಿವಕುಮಾರ್ ಅವರು ಕ‍ಳೆದ ವರ್ಷ 20ನೇ ಕನ್ನರ್ಪಾಡಿ ಗಣೇಶೋತ್ಸವಕ್ಕೆ ಆಗಮಿಸಿದ್ದಾಗ, ತಾವು ಮುಂದಿನ ಬಾರಿ ಮುಖ್ಯಮಂತ್ರಿಯಾಗಿ ಗಣೇಶೋತ್ಸವಕ್ಕೆ ಬರಬೇಕು ಎಂದು ಗಣಪತಿ ಮತ್ತು ಜಯದುರ್ಗಾಪರಮೇಶ್ವರಿಯಲ್ಲಿ ಪ್ರಾರ್ಥಿಸಿದ್ದನ್ನು ನೆನಪಿಸಿಕೊಂಡ ಕೃಷ್ಣಮೂರ್ತಿ ಆಚಾರ್ಯ, ಅದನ್ನು ದೇವರು ನಡೆಸಿಕೊಟ್ಟಿದ್ದಾರೆ, ಆದ್ದರಿಂದ ಡಿಕೆ ಶಿವಕುಮಾರ್ ಮತ್ತು ಕನ್ನರ್ಪಾಡಿಗೆ ವಿಶೇಷ ಸಂಬಂಧ ಇದೆ, ಆದ್ದರಿಂದ ಇಲ್ಲಿ ಸಂಭ್ರಮಾಚರಣೆಗೆ ವಿಶೇಷ ಮಹತ್ವ ಇದೆ ಎಂದಭಿಪ್ರಾಯಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲಂಪಿಯಡ್ ಪರೀಕ್ಷೆ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್
ಜಿಲ್ಲಾ ವೀರಶೈವ ಜಂಗಮ ಅರ್ಚಕ, ಪುರೋಹಿತರ ಸಂಘದ ವಾರ್ಷಿಕ ಮಹಾಸಭೆ