ಉಡುಪಿ: ಇಲ್ಲಿನ ಸಿಎಸ್‌ಐ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ದಾದಿಯರ ಸೇವೆಯ ಮಹತ್ವವನ್ನು ಕೊಂಡಾಡಿದರು. ಜಯಂಟ್ಸ್ ಬ್ರಹ್ಮಾವರದ ಅಧ್ಯಕ್ಷ ಅಣ್ಣಯ್ಯ ದಾಸ್, ಮುಖ್ಯ ಅತಿಥಿಗಳಾದ ಉದ್ಯಮಿ ಮಧುಸೂಧನ್ ಹೇರೂರು, ಸಿಎಸ್ಐ ಆಡಳಿತಾಧಿಕಾರಿ ದಿನಾ ಪ್ರಭಾವತಿ, ಸಿಎಸ್‌ಐ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಾಪ್ಲಿನ್ ರೆ. ರೈಚಲ್ ಡಿಸಿಲ್ವಾ, ಉಪ ಪ್ರಾಂಶುಪಾಲ ಬಿಜು ಸೋಮನ್ ಉಪಸ್ಥಿತರಿದ್ದರು.
ಜಯಂಟ್ಸ್ ಬ್ರಹ್ಮಾವರದ ಸದಸ್ಯರಾದ ಸುಧಾಕರ್ ನಾಯ್ಕ್, ವಿವೇಕಾನಂದ ಕಾಮತ್, ಮಿಲ್ಟನ್ ಒಲಿವೆರಾ, ಸುಂದರ್ ಪೂಜಾರಿ ಮೂಡುಕುಕ್ಕಡೆ, ಸುನಿತಾ ಮಧುಸೂಧನ್ ಹಾಗೂ ವೈದಕೀಯ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್ ಉಪಸ್ಥಿತರಿದ್ದರು.