ಉಡುಪಿ: ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ ಅಥವಾ ತ್ಯಜಿಸುವ ಮಕ್ಕಳು ಹಾಗೂ ಪೋಷಕರಿಗೆ ಮೂರು ತಿಂಗಳ ಜೈಲು ವಾಸ ಹಾಗೂ 5,000 ರು. ದಂಡ ವಿಧಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯಿದೆ 2007ರ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಿಲೇವಾರಿ ಮಾಡಬೇಕು ಎಂದವರು ಸೂಚಿಸಿದರು.
ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರು, ಅದರಲ್ಲೂ ಒಂಟಿಯಾಗಿ ವಾಸಿಸುತ್ತಿರುವವರ ಮನೆಗೆ ಪೊಲೀಸ್ ಬೀಟ್ ಸಿಬ್ಬಂದಿಗಳು ವಾರಕ್ಕೊಮ್ಮೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಬೇಕು, ಸಮಸ್ಯೆ ಇದ್ದಲ್ಲಿ ಪೊಲೀಸರು ಹೆಚ್ಚಿನ ಆದ್ಯತೆ ನೀಡಿ ಪರಿಹರಿಸಬೇಕು ಎಂದರು.ಚಿಕಿತ್ಸೆ ನಿರಾಕರಿಸಬಾರದು: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಚಿಕಿತ್ಸೆಯಲ್ಲಿ ಆದ್ಯತೆ ನೀಡಬೇಕು. ಹಿರಿಯ ನಾಗರಿಕರಿಗೆ ಹಾಸಿಗೆಗಳನ್ನು ಮೀಸಲಿಡಬೇಕು, ಜಿಲ್ಲೆಯ ಕೆಲವು ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳಿವೆ. ಇಲ್ಲಸಲ್ಲದ ಕಾರಣ ನೀಡಿ, ಚಿಕಿತ್ಸೆ ನಿರಾಕರಿಸದೇ ಉತ್ತಮ ನೀಡಬೇಕು ಎಂದವರು ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಅಧಿಕಾರಿಗಳು ಆಗಿಂದಾಗ್ಗೆ ಪರಿವೀಕ್ಷಣೆ ಮಾಡಬೇಕು. ಹಿರಿಯ ನಾಗರಿಕರಿಗಾಗಿಯೇ ಇರುವ ಸಹಾಯವಾಣಿ 1090ಕ್ಕೆ ಸಹಾಯ ಕೋರಿ ಹಿರಿಯ ನಾಗರಿಕರಿಂದ ಕರೆಗಳು ಬಂದಾಗ ಸಿಬ್ಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.ಜಿಲ್ಲೆಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಲು ಬಂದಿರುವ ಪ್ರಸ್ತಾವನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಾಕಷ್ಟು ಜಾಗ, ಅಗತ್ಯ ಮೂಲಭೂತ ಸೌಕರ್ಯ, ಸಿಬ್ಬಂದಿ, ಶುಶ್ರೂಷಕರು, ವೈದ್ಯರು ಸೇರಿದಂತೆ ಮತ್ತಿತರ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಪ್ರಾರಂಭಿಸುವವರಿಗೆ ಅನುಮತಿ ನೀಡಬೇಕು ಎಂದರು.