ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ಕಾನೂನು ವಿಭಾಗದ ವತಿಯಿಂದ ಆಲಂಗಾರಿನ ಮೌಂಟ್ ರೋಸರಿ ಆಶ್ರಮದ ನಿವಾಸಿಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.
ಮೂಡುಬಿದಿರೆ: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ಕಾನೂನು ವಿಭಾಗದ ವತಿಯಿಂದ ಆಲಂಗಾರಿನ ಮೌಂಟ್ ರೋಸರಿ ಆಶ್ರಮದ ನಿವಾಸಿಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.ಬಳಿಕ ಮಾತನಾಡಿದ ಮಿಥುನ್ ರೈ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ಸಂಸ್ಥೆಗಳಲ್ಲಿ ಆಲಂಗಾರಿನ ಮೌಂಟ್ ರೋಸರಿ ಆಶ್ರಮ ಪ್ರಮುಖವಾದುದು ಎಂದು ತಿಳಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉತ್ತಮ ಆರೋಗ್ಯ ಲಭಿಸಲಿ ಹಾಗೂ ರಾಜಕೀಯ ಜೀವನದ ಉತ್ತುಂಗ ಶಿಖರಕ್ಕೇರಲು ಹಿರಿಯರ ಆಶೀರ್ವಾದ ಸದಾ ಇರಲಿ ಎಂದು ಆಶಿಸಿದರು. ಮುಂಬರುವ ದಿನಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಂತಾಗಲಿ ಎಂದು ಹಾರೈಸಿದರು.
ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಸಿಸ್ಟರ್ ಪ್ರೆಸಿಲ್ಲಾ, ಬ್ಲಾಕ್ ವಕ್ತಾರ ರಾಜೇಶ್ ಕಡಲಕೆರೆ, ಪುರಸಭೆ ಮಾಜಿ ಸದಸ್ಯರಾದ ಪಿ.ಕೆ. ಥಾಮಸ್, ಪುರಂದರ ದೇವಾಡಿಗ, ಜೋಸ್ಸಿ ಮಿನೇಜಸ್, ಇಕ್ಬಾಲ್ ಕರೀಮ್ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳಾದ ಮರ್ವೀನ್ ಲೋಬೋ, ಅನೀಶ್ ಡಿಸೋಜ, ಪ್ರವೀಣ್ ಕುಮಾರ್, ಪ್ರವೀಣ್ ಪೂಜಾರಿ, ಚಂದ್ರಹಾಸ ಸನಿಲ್, ಶೇಖರ್ ಪೂಜಾರಿ, ಸಂತೋಷ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.