ಕನ್ನಡಪ್ರಭವಾರ್ತೆ ಚನ್ನಪಟ್ಟಣ
ತಾಲೂಕಿನ ಕೆಂಗಲ್ ಬಳಿಯ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಪಕ್ಷದವರು ಇಲ್ಲಿ ೬೦ರಿಂದ ೭೦ಸಾವಿರ ಲೀಡ್ ಬರಲಿದೆ ಎನ್ನುತ್ತಿದ್ದರು. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದ ವೇಳೆಯಲ್ಲೂ ಸಹ ಇಲ್ಲಿನ ಜನ ಇಷ್ಟೊಂದು ಮತ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಶ್ರಮ ಕಾರಣ ಎಂದು ಶ್ಲಾಘಿಸಿದರು.
ಚನ್ನಪಟ್ಟಣಕ್ಕೆ ಯಾರ್ಯಾರೋ ಬಂದರು, ಆದರೂ ಚನ್ನಪಟ್ಟಣ ಅಭಿವೃದ್ಧಿ ಆಗಲಿಲ್ಲ. ಚನ್ನಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಗೆಲ್ಲಿಸೋಣ. ಚನ್ನಪಟ್ಟಣಕ್ಕೆ ಸುರೇಶ್ ಅವರೇ ಅಭ್ಯರ್ಥಿ ಆಗಬೇಕು ಎಂದು ಒತ್ತಾಯಿಸಿದರು.ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಮಗೆ ಬೆನ್ನೆಲುಬಾಗಿ ನಿಂತು ನಮ್ಮನ್ನು ವಿಧಾನಸಭೆಗೆ ಕಳುಹಿಸಿದ ಸುರೇಶ್ ಅವರನ್ನು ಇಂದು ನಾವು ಗೆಲ್ಲಿಸಕೊಳ್ಳಲು ಆಗಲಿಲ್ಲ. ರಾಮನಗರ, ಮಾಗಡಿ, ಕುಣಿಗಲ್ ಕ್ಷೇತ್ರ ಸೇರಿ ನಾವೆಲ್ಲ ತಲೆ ತಗ್ಗಿಸುವಂತ ಕೆಲಸವನ್ನು ಚನ್ನಪಟ್ಟಣದ ಕಾರ್ಯಕರ್ತರು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ತಾಲೂಕಿನಲ್ಲಿ ಬುರಡೆ ರಾಜಕಾರಣಿಗಳು ಜಾಸ್ತಿ ಇದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ನಾನು ನೀರು ತಂದೆ ಎಂದು ಬುರುಡೆ ಬಿಡುತ್ತಾರೆ. ಬರೀ ಕೆಲಸ ಮಾಡಿದರೆ ಸಾಲದು, ಭಾವನಾತ್ಮಕವಾಗಿ ಅಣ್ಣ, ಬ್ರದರ್ ಎಂದು ಮಾತನಾಡುವುದನ್ನು ನಾವು ಕಲಿಯಬೇಕು. ಬಯಲು ಸೀಮೆಗೆ ನೀರು ತರದಿದ್ದರೆ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದವರು ಇನ್ನೊಂದು ವರ್ಷದಲ್ಲಿ ಏನು ಮಾಡುತ್ತಾರೆ ನೋಡೋಣ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.ಸುರೇಶ್ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗುವ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಒತ್ತಾಯ ಮಾಡಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಎಂಎಲ್‌ಸಿ ಪುಟ್ಟಣ್ಣ ಸೇರಿ ಎಲ್ಲರೂ ಡಿ.ಕೆ.ಸುರೇಶ್ ಚನ್ನಪಟ್ಟಣದಿಂದ ಸ್ಪರ್ಧಿಸುವುದು ಸೂಕ್ತ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಕೊನೆಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ಇಲ್ಲಿನ ಜನರ ಮಾತನ್ನು ಕೇಳಿದ್ದೇನೆ. ನೀವು ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಸ್ಥಳೀಯವಾಗಿ ನಾಯಕತ್ವ ಬೆಳೆಸಲು ಕಾರ್ಯಕರ್ತರು ಕೆಲಸ ಮಾಡಿ, ಒಬ್ಬ ಅಚ್ಚರಿ ಅಭ್ಯರ್ಥಿಯನ್ನು ನೀಡುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ ಎನ್ನುವ ಮೂಲಕ ಉಪಚುನಾವಣೆಗೆ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದರು.