ಕನ್ನಡಪ್ರಭ ವಾರ್ತೆ, ಶೃಂಗೇರಿ
ಶನಿವಾರದ ನಡೆದ ಅಂಚೆ ಮತಗಳ ಎಣಿಕೆ ನಡೆದ ಹಿನ್ನೆಲೆಯಲ್ಲಿ ದೇಗುಲಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಇದು ಸತ್ಯಕ್ಕೆ ಸಂದ ಜಯ. ಸತತ ಮೂರು ವರ್ಷಗಳ ಕಾನೂನು ಹೋರಾಟ ಮಾಡಿದ್ದೇನೆ. ನ್ಯಾಯಕ್ಕೆ ಜಯ ಸಿಕ್ಕಿದೆ. ನಾನು ಶೃಂಗೇರಿ ಮಠದ ಭಕ್ತ. ನನ್ನ ಸೋಲು ಗೆಲುವು ಎರಡನ್ನು ತಾಯಿಗೆ ಅರ್ಪಿಸಿದ್ದೇನೆ ಎಂದರು.
2023 ರ ಮೇ 23 ರ ಸಂಜೆ ನಾವು ಮರು ಮತಎಣಿಕೆಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಉತ್ತರವೇ ವೀಡಿಲ್ಲ. ನಮ್ಮೆದುರೇ ಅವರಿಗೆ ಪ್ರಮಾಣ ಪತ್ರ ನೀಡಿದರು. 2 ದಿನಗಳ ನಂತರ ಅಂಚೆಯಲ್ಲಿ ಉತ್ತರ ಕಳುಹಿಸಿದರು. ಅವರು ಎರಡು ಬಾರಿ ಸುಪ್ರಿಂ ಕೋರ್ಟಿಗೆ ಹೋದರು. ಹೈಕೋರ್ಟಿಗೂ ಹೋದರು. ವಾಸ್ತವಿಕತೆ ಗೊತ್ತಿಲ್ಲ. ಇದು ನ್ಯಾಯಾಲಯದ ಆದೇಶ. ಮತ ಎಣಿಕೆಗೂ ತಡೆವೊಡ್ಡಿ ಗಲಾಟೆ ಮಾಡಿದರು. ಫಲಿತಾಂಶ ಬರುವ ಮೊದಲೇ ವಿಜಯೋತ್ಸವ ಮಾಡಲು ಹೋರಟರು. ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಿದರು ಎಂದರು.ಅವರು ಗೆದ್ದರೆ ಸತ್ಯ ಮೇವಾ ಜಯತೆ, ಸಂವಿಧಾನಕ್ಕೆ ಜಯ. ಆದರೆ ಬಿಜೆಪಿ ಗೆದ್ದರೆ ಮೊಸದ ಜಯ.ಇದು ಯಾವ ನ್ಯಾಯ . ರಾಜ್ಯದಲ್ಲಿ ದೇಶದಲ್ಲಿ ಈ ರೀತಿ ಕಡಿಮೆ ಅಂತರದಿಂದ ಸೋತ ಅಭ್ಯರ್ಥಿಗಳ ಅರ್ಜಿ ಸ್ವೀಕರಿಸಿ ಮರು ಎಣಿಕೆ ಮಾಡಬೇಕು. ಅವರಿಗೆ ನ್ಯಾ ಸಿಗಬೇಕು ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.