ರಾಮನಗರ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೃಷಿ ಇಲಾಖೆ ಫೂಟ್ಸ್(ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಅಥವಾ ಎಫ್‌ಐಡಿ(ಫಾರ್ಮರ್ ಐಡೆಂಟಿಫಿಕೇಷನ್ ನಂಬರ್) ಮೂಲಕ ರೈತರ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ರಸಗೊಬ್ಬರ ವಿತರಣೆಗೆ ಮುಂದಾಗಿದೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 47,537 ರೈತರಿಗೆ ಎಫ್‌ಐಡಿ ಸಂಖ್ಯೆಯೇ ಇಲ್ಲ.
ಎಫ್‌ಐಡಿಯಲ್ಲಿ ರೈತರ ಸಂಪೂರ್ಣ ಮಾಹಿತಿ:
ಜಮೀನು ಹೊಂದಿರುವ ರೈತರಿಗೆ ಕೃಷಿ ಸೇರಿದಂತೆ ಇದಕ್ಕೆ ಪೂರಕವಾದ ಇಲಾಖೆಯಿಂದ ಎಫ್‌ಐಡಿ ಕೊಡಲಾಗಿದೆ. ಇದಕ್ಕೆ ಆರ್‌ಟಿಸಿ, ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಲಿಂಕ್ ಆಗಿರಲಿದೆ. ಎಫ್‌ಐಡಿಯಲ್ಲಿ ರೈತರ ಜಮೀನಿನ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಅದರಂತೆ ಇದರ ಆಧಾರದಲ್ಲಿ ಅಂದರೆ ರೈತರಿಗೆ ಎಷ್ಟು ಪ್ರಮಾಣದ ಜಮೀನಿದೆ. ಯಾವ ಬೆಳೆ ಹಾಕುತ್ತಾರೆ ಎನ್ನುವ ಮಾಹಿತಿ ಮೇರೆಗೆ ರಸ ಗೊಬ್ಬರ ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಮೊದಲೆಲ್ಲ ರೈತರು ಎಷ್ಟು ಬೇಕಾದರೂ ಖರೀದಿಸುತ್ತಿದ್ದರು. ಆದರೀಗ ಅಗತ್ಯಕ್ಕಿಂತ ಹೆಚ್ಚು ಖರೀದಿಸುವಂತಿಲ್ಲ.ಎರಡು ಲಕ್ಷ ರೈತರು:
ರಸಗೊಬ್ಬರ ಬೇಡಿಕೆ ವಿವರ:
ಡಿಎಪಿ 1704 ಮೆಟ್ರಿಕ್ ಟನ್ ಪೈಕಿ 584, ಕಾಂಪ್ಲೆಕ್ಸ್ 5797 ಮೆಟ್ರಿಕ್ ಟನ್ ಪೈಕಿ 2046, ಎಂಒಪಿ 448 ಮೆಟ್ರಿಕ್ ಟನ್ ಪೈಕಿ 192, ಯೂರಿಯಾ 19,562 ಮೆಟ್ರಿಕ್ ಟನ್ ಪೈಕಿ 3204, ಎಸ್ ಎಸ್ ಪಿ 776 ಮೆಟ್ರಿಕ್ ಟನ್ ಪೈಕಿ 277 ಮೆಟ್ರಿಕ್ ಟನ್ ಪೂರೈಕೆಯಾಗಿದೆ.
ಎಲ್ಲೆಲ್ಲಿ ಎಫ್‌ಐಡಿ ಸಂಖ್ಯೆ ನೋಂದಣಿ:
ಬಾಕ್ಸ್ ..............
ರಸಗೊಬ್ಬರ ಸೇರಿದಂತೆ ಕೃಷಿ ಪರಿಕರ ಮಾರಾಟಗಾರರಿಗೂ ಕೆಲ ನಿಬಂಧನೆ ವಿಧಿಸಲಾಗಿದೆ. ಅದರಂತೆ ರೈತರ ಎಫ್‌ಐಡಿ ಪರಿಶೀಲಿಸಿ ನಿಗದಿತ ಪ್ರಮಾಣದಲ್ಲಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಬೇಕು. ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ರಸಗೊಬ್ಬರ ದರಪಟ್ಟಿ ಪ್ರದರ್ಶಿಸಬೇಕು. ಗರಿಷ್ಠ ಮಾರಾಟ ದರ ಮೀರದಂತೆ ರಸಗೊಬ್ಬರ ನಿಯಂತ್ರಣ ಆದೇಶ 1985ರ ವಿವಿಧ ಮಾನದಂಡಗಳನ್ವಯ ವಿತರಿಸುವಂತೆ ಸೂಚಿಸಲಾಗಿದೆ.
ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಎಫ್‌ಐಡಿ ಸಂಖ್ಯೆಯ ಆಧಾರದ ಮೇಲೆ ವಿತರಣೆಗೆ ಕ್ರಮ ವಹಿಸಲಾಗಿದೆ. ಅದರಂತೆ ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯ. ಜಿಲ್ಲೆಯಲ್ಲಿ ಎಫ್‌ಐಡಿ ಇಲ್ಲದ ರೈತರು ಕೂಡಲೇ ಅಗತ್ಯ ದಾಖಲಾತಿಗಳನ್ನು ನೀಡಿ ಎಫ್‌ಐಡಿ ಸಂಖ್ಯೆ ಪಡೆಯಬೇಕು.
- ಅಂಬಿಕಾ, ಜಂಟಿ ಕೃಷಿ ನಿರ್ದೇಶಕ, ಬೆಂ.ದಕ್ಷಿಣ ಜಿಲ್ಲೆಬಾಕ್ಸ್............
ಹಿಡುವಳಿದಾರರು ಮತ್ತು ಎಫ್‌ಐಡಿ ಹೊಂದಿರುವ ರೈತರ ವಿವರತಾಲೂಕು2011ರ ಹಿಡುವಳಿದಾರರುಎಫ್‌ಐಡಿ ರೈತರುಎಫ್‌ಐಡಿ ಇಲ್ಲದ ರೈತರು
ಚನ್ನಪಟ್ಟಣ39,73836,7373,001ಕನಕಪುರ53,75536,53817,217
ಹಾರೋಹಳ್ಳಿ27,87015,94711,923ಮಾಗಡಿ41,58435,1276,457
ರಾಮನಗರ37,51328,5748,939ಒಟ್ಟು2,00,4601,52,92347,537
3ಕೆಆರ್ ಎಂಎನ್ 1.ಜೆಪಿಜಿಸಾದಂರ್ಭಿಕ ಚಿತ್ರ