;Resize=(412,232))
ಕುಣಿಗಲ್ : ಪ್ರೀತಿಸಿ ಮದುವೆ ಆಗಿದ್ದ ಹೆಂಡತಿ ತನ್ನ ಸೋದರಳಿಯನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿ ಓಡಿ ಹೋಗಿದ್ದಕ್ಕೆ ಮನನೊಂದ ಪತಿ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ತಾನು ನೇಣಿಗೆ ಶರಣಾದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ.
ಆಲ್ಕೆರೆ ನಿವಾಸಿ ಶಿವಣ್ಣ (40) ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಮಕ್ಕಳಾದ ಜೀವನ್ (10), ಪ್ರಾಣೇಶ್ (6)ರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.
ಶಿವಣ್ಣ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಕಾವ್ಯಾಳನ್ನು ಮದುವೆಯಾಗಿದ್ದರು. ಸುಮಾರು ವರ್ಷಗಳ ಹಿಂದೆ ಶಿವಣ್ಣ ಅವರ ಅಕ್ಕ ಮೃತಪಟ್ಟಿದ್ದರು. ತನ್ನ ಅಕ್ಕನ ಮಗನಾದ ಹೇಮಂತನನ್ನು ಹಲವಾರು ವರ್ಷದಿಂದ ತನ್ನ ಮನೆಯಲ್ಲೇ ಸಾಕುತ್ತಿದ್ದರು. ಮಾವನ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಹಲವಾರು ಬಾರಿ ಹಿರಿಯರು ನ್ಯಾಯ ಪಂಚಾಯಿತಿ ಮಾಡಿದ್ದರು. ಆದರೂ 4 ದಿನದ ಹಿಂದೆ ಕೌಟುಂಬಿಕ ಕಲಹವಾಗಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಶಿವಣ್ಣನನ್ನು ಬಿಟ್ಟು ಹೇಮಂತನ ಜೊತೆ ಹೋಗುತ್ತೇನೆಂದು ತಿಳಿಸಿ ಕಾವ್ಯಾ ಹೋಗಿದ್ದಳು. ಇದರಿಂದ ಮನನೊಂದು ಶಿವಣ್ಣ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.