;Resize=(412,232))
ಪಾವಗಡ : ತುಮಕೂರು ಜಿಲ್ಲೆ ಪಾವಗಡದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ ಎಂಬುವರು, ನಿವೃತ್ತಿಗೆ ಕೇವಲ 11 ದಿನ ಮೊದಲು ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.
ಪಾವಗಡದ ಆಪ್ ಬಂಡೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅವರು ನೇ8 ಬಿಗಿದುಕೊಂಡು ಆತ್ಮ*ತ್ಯೆಗೆ ಶರಣಾಗಿದ್ದಾರೆ. ಆತ್ಮ*ತ್ಯೆಗೂ ಮುನ್ನ ಅವರು ವಿಡಿಯೋ ಮಾಡಿದ್ದು, ಮೇಲಧಿಕಾರಿ ಕೃಷ್ಣಪ್ಪ ಎಂಬುವರ ಕಿರುಕುಳವೇ ತಮ್ಮ ಆತ್ಮ*ತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಕಳೆದ 3 ವರ್ಷಗಳಿಂದ ಪಾವಗಡ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಸೇವಾ ಅವಧಿ ಇದೇ ತಿಂಗಳ 31ರಂದು ಮುಕ್ತಾಯಗೊಳ್ಳುವುದಿತ್ತು. ಮಲ್ಲಿಕಾರ್ಜುನ್ ಅವರು ತಮ್ಮ ಕೊನೆಯ ವಿಡಿಯೋದಲ್ಲಿ ‘ನಮ್ಮ ತಾಯಿ, ಹೆಂಡತಿ, ಮಕ್ಕಳು, ನಮ್ಮ ಇಡೀ ಸಂಸಾರ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ. ನಾನು ಅವರಿಗೆ ಇನ್ನೂ ಸಹಾಯ ಮಾಡಬೇಕಿತ್ತು. ಆದರೆ, ಅದು ಆಗುತ್ತಿಲ್ಲ.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪನವರು ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿರುವೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಆತ ತರ್ಲೆ ಇರುವುದರಿಂದ ನಮ್ಮ ಕುಟುಂಬದವರು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆತನಿಗೆ ಕಾನೂನು, ದೇವರು ಶಿಕ್ಷೆ ಕೊಟ್ಟೇ ಕೊಡುತ್ತಾನೆ’ ಎಂದು ಹೇಳಿದ್ದಾರೆ.
ಮೃತ ಮಲ್ಲಿಕಾರ್ಜುನ್ ಅವರು ಪಾವಗಡ ತಾಲೂಕು ಗುಂಡರ್ಲಸಹಳ್ಳಿಯವರು ಎಂದು ತಿಳಿದು ಬಂದಿದೆ. ಪತ್ನಿ ಪಾವಗಡ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
- 3 ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಲ್ಲಿಕಾರ್ಜುನ್ ಕರ್ತವ್ಯ
- ಮಾ.31ರಂದು ಸೇವಾ ನಿವೃತ್ತಿ ಆಗಬೇಕಿತ್ತು. ಆದರೆ ಅಷ್ಟರಲ್ಲಿ ಆತ್ಮ*ತ್ಯೆಗೆ ಶರಣು
- ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಕೃಷ್ಣಪ್ಪರಿಂದ ನನಗೆ ತೊಂದರೆ ಎಂದು ವಿಡಿಯೋ
- ಆದರೆ ನನ್ನ ಸಾವಿನ ಬಳಿಕ ಕೃಷ್ಣಪ್ಪಗೆ ಏನೂ ಮಾಡಬೇಡಿ ಎಂದು ಕುಟುಂಬಕ್ಕೆ ಮನವಿ
- ಕೃಷ್ಣಪ್ಪ ತರ್ಲೆ, ಆವರಿಗೆ ದೇವರು ಮತ್ತು ಕಾನೂನು ಶಿಕ್ಷೆ ನೀಡುತ್ತದೆ ಎಂದೂ ಹೇಳಿಕೆ
- ಪತ್ನಿಯಿಂದ ಪಾವಗಡ ಪೊಲೀಸ್ ಠಾಣೆಗೆ ಈ ಸಂಬಂಧ ದೂರು । ಕೇಸು ದಾಖಲು