ಸ್ತ್ರೀ, ಮಾತೃಶಕ್ತಿ ವಿರೋಧಿ ಕಾಂಗ್ರೆಸ್ಸಿಗರ ಡಿಎನ್‌ಎ ಪರೀಕ್ಷೆ ಅಗತ್ಯ

KannadaprabhaNewsNetwork |  
Published : Apr 03, 2024, 01:36 AM IST
ಬಿಜೆಪಿ | Kannada Prabha

ಸಾರಾಂಶ

ದಾವಣಗೆರೆಯಿಂದ ದೆಹಲಿವರೆಗಿನ ಐಎನ್‌ಡಿಐಎ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನಾಯಕರು ಶಕ್ತಿದೇವತೆ ವಿರುದ್ಧ, ಮಾತೃಶಕ್ತಿಯ ವಿರುದ್ಧ ಮಾತನಾಡುತ್ತಿದ್ದಾರೆ. ಮಹಾಭಾರತ ಯುದ್ಧವೇ ಇನ್ನೂ ಶುರುವಾಗಿಲ್ಲ. ಈಗಲೇ ಹತಾಶರಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ ಟೀಕಿಸಿದರು.

- ದಾವಣಗೆರೆಯಿಂದ ದೆಹಲಿವರೆಗಿನ ನಾಯಕರು ಮಹಿಳಾ ವಿರೋಧಿಗಳು: ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ ಟೀಕೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆಯಿಂದ ದೆಹಲಿವರೆಗಿನ ಐಎನ್‌ಡಿಐಎ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನಾಯಕರು ಶಕ್ತಿದೇವತೆ ವಿರುದ್ಧ, ಮಾತೃಶಕ್ತಿಯ ವಿರುದ್ಧ ಮಾತನಾಡುತ್ತಿದ್ದಾರೆ. ಮಹಾಭಾರತ ಯುದ್ಧವೇ ಇನ್ನೂ ಶುರುವಾಗಿಲ್ಲ. ಈಗಲೇ ಹತಾಶರಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂಬ ಹೇಳಿಕೆ ನೀಡಿರುವ ಇಲ್ಲಿನ ಕಾಂಗ್ರೆಸ್ ಮುಖಂಡರಿಗೂ, ಮಾಧ್ಯಮಗಳಿಗೆ ಐಶ್ವರ ರೈ ಡ್ಯಾನ್ಸ್ ತೋರಿಸುತ್ತಾರೆಂದ ರಾಹುಲ್ ಗಾಂಧಿಗೂ ವ್ಯತ್ಯಾಸವಿಲ್ಲ. ಐಎನ್‌ಡಿಐ ಮೈತ್ರಿಕೂಟಕ್ಕೂ, ಕಾಂಗ್ರೆಸ್ಸಿನ ನಾಯಕರಿಗೂ ಯಾವುದೇ ವ್ಯತ್ಯಾಸವಿಲ್ಲ. ಸ್ತ್ರೀ ವಿರೋಧಿ ಹೇಳಿಕೆ ನೀಡುತ್ತಿರುವ ಇಂತಹವರ ಡಿಎನ್‌ಎ ಪರೀಕ್ಷೆ ಮಾಡಿಸಬೇಕಿದೆ ಎಂದರು.

ನರೇಂದ್ರ ಮೋದಿಗೆ ಮತ ಹಾಕಬೇಡಿ ಎನ್ನುವ ಮೂಲಕ ಕಾಂಗ್ರೆಸ್ ಮೈತ್ರಿಕೂಟ ಈಗಲೇ ಹತಾಶೆ ವ್ಯಕ್ತಪಡಿಸುತ್ತಿದೆ. ಹೆಣ್ಣುಮಕ್ಕಳನ್ನು ಅಡುಗೆ ಮನೆಗೆ ಸೀಮಿತವೆನ್ನುವ, ಶಕ್ತಿದೇವತೆಯನ್ನು ಸೋಲಿಸಲು ಹೊರಟಿರುವ ಇಂತಹವರಿಗೆ ನೈತಿಕತೆಯಾದರೂ ಇದೆಯಾ? ಮುಂದಿನ ಸಾವಿರ ವರ್ಷಗಳಿಗೆ ಆಗುವಂತೆ ಭಾರತಕ್ಕೆ ಭದ್ರ ಬುನಾದಿ ಹಾಕುವ ದೂರದೃಷ್ಟಿ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದರು.

ಬಡತನ, ಭ್ರಷ್ಟಾಚಾರ ಕೊನೆಗೊಳಿಸುವುದು, ಪರಿಪೂರ್ಣ ಸಾಮಾಜಿಕ ನ್ಯಾಯ ಆಚರಣೆಗೆ ತರುವುದು, ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬುವುದು ನರೇಂದ್ರ ಮೋದಿ ಕಂಡಿಸುವ 3-4 ದೊಡ್ಡ ಕನಸುಗಳು. ಇದೆಲ್ಲಾ ಸೇರಿಸಿ, ಸಮೃದ್ಧ, ಸಶಕ್ತ, ಪರಿಪೂರ್ಣ ರಾಷ್ಟ್ರ ಮಾಡುವುದು ಮೋದಿ ಗುರಿ. ಆದರೆ, ಕಾಂಗ್ರೆಸ್ ನೇತೃತ್ವದ ಐಎನ್‌ಡಿಐ ಮೈತ್ರಿಕೂಟ ಯಾವ ವಿಚಾರ ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದೆ? ದೇಶ, ರಾಜ್ಯದ ಜನರಲ್ಲಿ ಜಾತಿ, ಧರ್ಮದ ವಿಷಬೀಜ ಬಿತ್ತುತ್ತಾ, ಶಾಂತಿ, ಸಾಮರಸ್ಯಕ್ಕೆ ಭಂಗ ತರುವ ಕೆಲಸಕ್ಕೆ ಮುಂದಾಗಿದೆ ಎಂದು ದೂರಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಿನ್ನೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪ್ರತಿಭಟನೆ ನಡೆಸಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ಗೆ 9 ಸಮನ್ಸ್ ಕಳಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ 3ನೇ ಸಮನ್ಸ್ ಸ್ವೀಕರಿಸದಿದ್ದಾಗಲೇ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೊರೆಹೋಗಿತ್ತು. ಕೇಜ್ರಿವಾಲ್ ಬಂಧನವೂ ನ್ಯಾಯಾಲಯ ಆದೇಶದಂತೆ ಆಗಿದೆ. ನಿನ್ನೆ ಸೋನಿಯಾ, ಖರ್ಗೆ, ರಾಹುಲ್‌ ಗಾಂಧಿ ಪ್ರತಿಭಟನೆ ನಡೆಸಿದ್ದು ನ್ಯಾಯಾಲಯ ಅದರಲ್ಲೂ ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧವೇ? ಮೊದಲು ಇದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಯುವ ಮುಖಂಡ ಜಿ.ಎಸ್.ಅನಿತಕುಮಾರ, ರಾಜ್ಯ ಮಾಧ್ಯಮ ಸಂಚಾಲಕ ಅವಿನಾಶ್, ಹರೀಶ, ಕೆ.ವಿ.ಗುರು, ದಂಡಪಾಣಿ ಇತರರು ಇದ್ದರು.

- - - ಬಾಕ್ಸ್‌ 15 ಕ್ಷೇತ್ರ ಗೆಲ್ಲದಿದ್ರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡ್ತಿರಾ?ದಾವಣಗೆರೆ: ಚುನಾವಣಾ ಆಯೋಗ, ಮಾಧ್ಯಮಗಳು, ಇವಿಎಂಗಳ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಎಂಬುದಾಗಿ ಲೇವಡಿ ಮಾಡಿರುವ ಕಾಂಗ್ರೆಸ್ಸಿನ ರಾಹುಲ್ ಗಾಂಧಿಗೆ ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಇವೆಲ್ಲವೂ ಸರಿ ಇದ್ದವಾ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಯೋಗ, ಮಾಧ್ಯಮ, ಇವಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ರಾಹುಲ್ ಗಾಂಧಿ ಯುದ್ಧ ಆರಂಭಕ್ಕೆ ಮುನ್ನವೇ ಸೋತು, ಹತಾಶನಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.

ರಾಜ್ಯದ 223 ತಾಲೂಕುಗಳಲ್ಲಿ ಬರ ಆವರಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ತೀವ್ರ ಬರ ತಟ್ಟಿದೆ. ಪ್ರಕೃತಿಯ ಶಾಪ ಇದಲ್ಲ, ಸುಭಿಕ್ಷೆಯಿಂದಿದ್ದ ರಾಜ್ಯದಲ್ಲಿ ನಿರಂತರ ನೀರು ಬಿಡುವ ಮೂಲಕ ನೀರಿಗೆ ಹಾಹಾಕಾರ ಏಳುವಂತೆ ಮಾಡಿದೆ. ಕೆಆರ್‌ಎಸ್, ಕಬಿನಿ ಬರಿದು ಮಾಡಿ, ತಮಿಳುನಾಡು ಸಿಎಂ ಸ್ಟಾಲಿನ್‌ ಸಂತೃಪ್ತಿಪಡಿಸಲು ಮೆಟ್ಟೂರು ಡ್ಯಾಂ ತುಂಬಿಸಿ, ನಮ್ಮ ಡ್ಯಾಂಗಳ ಬರಿದು ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಕಾಂಗ್ರೆಸಿನ ಪಾಪದ ಕೊಡದಿಂದ ಮೆಟ್ಟೂರು ಡ್ಯಾಂ ತುಂಬಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ದಾಖಲಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಕಾಂಗ್ರೆಸ್ ಪಕ್ಷವು ಕನಿಷ್ಠ 15 ಕ್ಷೇತ್ರ ಗೆಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತೀರಾ? 15 ಕ್ಷೇತ್ರ ಗೆಲ್ಲುವ ನೈತಿಕತೆಯಾದರೂ ನಿಮಗೆ ಇದೆಯಾ? 55 ಸಾವಿರ ಕೋಟಿ ರು. ಗ್ಯಾರಂಟಿ ಯೋಜನೆಗೆ ಬೇಕು. 1.56 ಲಕ್ಷ ಕೋಟಿ ರು. ಸಾಲ ಮಾಡಿ ಜನರಿಗೆ ಹೊರೆ ಹೊರಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸಲು ಮನವಿ ಮಾಡಿದರು.

- - -

ಟಾಪ್‌ ಕೋಟ್‌ ವಿದ್ಯುತ್ ಪೂರೈಸುತ್ತಿಲ್ಲ. ಮನೆ ಬಳಕೆ, ಕುಡಿಯಲು, ಕೃಷಿಗೆ ನೀರು ಇಲ್ಲ. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಿ ಬರಲು ಬಸ್ಸು ಇಲ್ಲ. ಗೃಹಲಕ್ಷ್ಮಿ ಯೋಜನೆ ವಿಫಲವಾಗಿದೆ. ಅಲ್ಪಸಂಖ್ಯಾತರ ಮಹಿಳೆಯರ ಮೇಲೆ ನರೇಂದ್ರ ಮೋದಿ ಋಣ ಇದೆ. ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಎಂಬಂತೆ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ಬಗ್ಗೆ ಮುಸ್ಲಿಂ ಮಹಿಳೆಯರಿಗೂ ಅಭಿಮಾನ ಇದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅಭೂತಪೂರ್ವ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ.

- ಎಚ್‌.ಎನ್‌. ಚಂದ್ರಶೇಖರ, ರಾಜ್ಯ ವಕ್ತಾರ, ಬಿಜೆಪಿ

- - - -2ಕೆಡಿವಿಜಿ2:

ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''